ಮಾವಿನಹಣ್ಣು ಸಾಗಿಸುತ್ತಿದ್ದ ಲಾರಿ ಉರುಳಿ, ಐವರು ವಲಸೆ ಕಾರ್ಮಿಕರ ಸಾವು

ಭೋಪಾಲ್, ಮೇ ೧೦,ಮಹಾರಾಷ್ಟ್ರದ  ಔರಂಗಾಬಾದ್  ನಲ್ಲಿ ಮೊನ್ನೆ  ೧೬  ಮಂದಿ  ವಲಸೆ ಕಾರ್ಮಿಕರ ದುರ್ಮರಣ ಘಟನೆ  ಮಾಸುವ ಮುನ್ನವೇ  ಮಧ್ಯ ಪ್ರದೇಶದಲ್ಲಿ ಮತ್ತೊಂದು ದುರಂತ ನಡೆದಿದೆ. ನರ್ಸಿಂಗ್ ಪುರ್   ಜಿಲ್ಲೆಯ  ಪಾರಾ ಬಳಿ  ಮಧ್ಯ ರಾತ್ರಿ  ಲಾರಿಯೊಂದು ಉರುಳಿ ಐವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.ಅಪಘಾತದಲ್ಲಿ    ೧೧ ಮಂದಿ ಗಾಯಗೊಂಡಿದ್ದಾರೆ ಎಂದು ನರ್ಸಿಂಗ್ ಪುರ್   ಜಿಲ್ಲಾಧಿಕಾರಿ ದೀಪಕ್ ಸಕ್ಸೇನಾ ತಿಳಿಸಿದ್ದಾರೆ. ತೆಲಂಗಾಣದ  ಹೈದರಾಬಾದ್ ನಿಂದ ಮಾವಿನ ಹಣ್ಣುಗಳನ್ನು  ತುಂಬಿಕೊಂಡು  ಉತ್ತರ ಪ್ರದೇಶದ  ಆಗ್ರಾಗೆ ತೆರಳುತ್ತಿದ್ದಾಗ  ಈ ಅಪಘಾತ ನಡೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.