ಹುನಗುಂದ03: ಭಾರತದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತ ಹೊಸ ಸಾಂಸ್ಕೃತಿಕ ಪರಂಪರೆ ಉದಯವಾಗಲು ಕಾರಣವಾಯಿತು. ಬ್ರಿಟಿಷರು ಭಾರತಕ್ಕೆ ಆಗಮಿಸಿ ವಸಾಹತುಶಾಹಿ ಆಡಳಿತ ಪ್ರಾರಂಭಿಸಿದ್ದರಿಂದ ನಮ್ಮ ದೇಶದಲ್ಲಿ ಅನೇಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಬದಲಾವಣೆಗಳು ತೀವೃಗತಿಯಲ್ಲಿ ಘಟಿಸಿದವು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ; ರು.ಮ. ಷಡಕ್ಷರಯ್ಯ ಹೇಳಿದರು.
ಇಲ್ಲಿನ ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಮತ್ತುಕರ್ನಾಟಕ ಸರ್ಕಾರದ ಪತ್ರಾಗಾರ ಇಲಾಖೆ ಬೆಂಗಳೂರು, ಪ್ರಾದೇಶಿಕ ಕಛೇರಿ ಧಾರವಾಡದ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಸಾಹತುಶಾಹಿ ಆಡಳಿತದಲ್ಲಿ ಭಾರತ ಎಂಬ ವಿಷಯದ ಕುರಿತು ಏರ್ಪಡಿಸಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡುತ್ತ ಈ ವಿಚಾರ ಸಂಕಿರಣದಿಂದ ಅನೇಕ ಮೌಖಿಕ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ವಸಾಹತುಶಾಹಿ ಆಡಳಿತವು ಅನೇಕ ನಕಾರಾತ್ಮಕ ಅಂಶಗಳನ್ನು ಹೊಂದಿದ್ದರೂ ಸಹಿತ ಸಮಾಜದಲ್ಲಿ ಬಾಲ್ಯವಿವಾಹ, ಸತಿಸಹಗಮನದಂತಹ ದುಷ್ಟ ಸಂಪ್ರದಾಯಗಳನ್ನು ರದ್ದುಗೊಳಿಸುವಲ್ಲಿ ಅವರು ಕೈಗೊಂಡಿರುವ ಕಾಯ್ದೆಗಳು ಸ್ಮರಣೀಯ ಈ ಮೂಲಕ ಹಲವಾರು ಸುಧಾರಣಾತ್ಮಕ ಬದಲಾವಣೆಗಳು ಕಂಡಿವೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಈರಣ್ಣ ಕೆ. ಪತ್ತಾರ ಸಮಾರಂಭದಲ್ಲಿ ಆಶಯನುಡಿಗಳಾನ್ನಾಡುತ್ತ ವಸಾಹತುಶಾಹಿ ಎಂದರೇನು? ವಸಾಹತುಶಾಹಿಗಳು ಭಾರತಕ್ಕೆ ಬರುವ ಮೂಲಕ ರಾಜಕೀಯವಾಗಿ ಹೇಗೆ ಬೆಳೆದರು ಎಂದು ತಿಳಿಸುತ್ತಾ ವಸಾಹತುಶಾಹಿಗಳಾದ ಬ್ರಿಟಿಷರು ಸಾಮಾಜಿಕವಾಗಿ, ರಾಜಕೀಯವಾಗಿ ಭಾರತದ ಮೇಲೆ ಪ್ರಭಾವ ಬೀರುವುದರೊಂದಿಗೆ ಭಾರತದ ಸಂಪತ್ತನ್ನು ಇಂಗ್ಲಂಡಿಗೆ ರವಾನಿಸುವುದರ ಮೂಲಕ ಭಾರತದ ಗುಡಿಕೈಗಾರಿಕೆಗಳು ಬಂದಾಗಿ ಕಾರ್ಮಿಕರು ಬೀದಿಗೆ ಬಂದರೆ, ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಲು ಕಾರಣರಾದರೂ ಸಹ ಅವರ ದಬ್ಬಾಳಿಕೆಯ ಕಾನೂನುಗಳಿಂದ ರೊಚ್ಚಿಗೆದ್ದ ಭಾರತೀಯರು ದೇಶವ್ಯಾಪಿ ಹೋರಾಟಕ್ಕಿಳಿದು 1947 ರ ಅಗಷ್ಟ 15 ರಂದು ಅವರನ್ನು ದೇಶದಿಂದ ಓಡಿಸುವ ಮೂಲಕ ಭಾರತೀಯರನ್ನು ಗುಲಾಮಗಿರಿಯಿಂದ ಮುಕ್ತವಾಗಿಸಿದರು ಎಂದು ಹೇಳಿದರು.
ಕನರ್ಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಿಲಾಧರ ಮುಗಳಿ 2019 ರ ವಿಚಾರ ಸಂಕಿರಣದ ಗ್ರಂಥವನ್ನು ಬಿಡುಗಡೆಗೊಳಿಸಿ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರೆ ಸಾಲದು ಉತ್ತಮ ಸಂಶೋಧನಾ ಪ್ರಬಂಧಗಳಿಂದ ಕೂಡಿದ ಗ್ರಂಥಗಳು ಹೊರಬಂದರೆ ಮುಂದಿನ ಸಂಶೋಧನಾಥರ್ಿಗಳ ಸಂಶೋಧನೆಗೆ ಆಕರಗಳಾಗಬಹುದು ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಜಯಪುರದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಎಲ್.ಎನ್.ಮೂತರ್ಿ ಅವರು ಮಾತನಾಡುತ್ತಾ ವಸಾಹತುಶಾಹಿಗಳ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಬಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಆಧುನಿಕ ಶಿಕ್ಷಣದ ಬೆಳವಣಿಗೆಯಾಗಲು ಪ್ರೇರಣೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿ.ಮ.ವಿ.ವ ಸಂಘದ ಗೌರವ ಕಾರ್ಯದಶರ್ಿಗಳಾದ ಶ್ರೀ.ಬಿ.ಎಂ.ಹೊಕ್ರಾಣಿಯವರು ವಹಿಸಿಕೊಂಡಿದ್ದರು, ಪ್ರಾಚಾರ್ಯರಾದ ಶಶಿಕಲಾ ಮಠ ಸ್ವಾಗತಿಸಿ ಮಹಾವಿದ್ಯಾಲಯದ ಬೆಳವಣಿಗೆಯ ಕುರಿತು ಪರಿಚಯಿಸಿದರು. ಪ್ರೊ. ಎಸ್.ಬಿ.ಅಮಲಿಕೊಪ್ಪ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಎಸ್.ಆರ್.ನಾಗಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಎಸ್.ಬಿ.ಚಳಗೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕುಮಾರಿ ದಶರ್ಿನಿ ಆಲದಿ ಸಂಗಡಿಗರು ಪ್ರಾಥರ್ಿಸಿದರು.
ವಿಚಾರ ಸಂಕಿರಣದಲ್ಲಿ ಡಾ. ಶಿಲಾಧರ ಮುಗಳಿ, ಡಾ.ರಮೇಶ ನಾಯಕ, ಡಾ.ಎಲ್.ಪಿ.ಮಾರುತಿ, ಡಾ.ಸಂಗಮೇಶ ಕಲ್ಯಾಣಿಯವರು ವಿವಿಧ ಗೋಷ್ಠಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಒಟ್ಟು 50ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಟ್ಟವು. ಕಾರ್ಯಕ್ರಮ ಆರಂಭದ ಮೊದಲು ಖ್ಯಾತ ಇತಿಹಾಸ ಸಂಶೋಧಕರಾದ ಡಾ.ಎಸ್.ಶೆಟ್ಟರ ಅವರ ನಿಧನದ ಪ್ರಯುಕ್ತ ಶ್ರದ್ಧಾಂಜಲಿ ಸಲ್ಲಿಸಲಾಯಿತು.