ಮುದ ನೀಡಿದ ದ್ವಾದಶ ನಾದ ನೃತ್ಯ ವೈಭವ

ಹುಬ್ಬಳ್ಳಿ29: ಉಪಾಧ್ಯೆ ನೃತ್ಯ ವಿಹಾರ (ರಿ), ಮಾಳಮಡ್ಡಿ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ದ್ವಾದಶ ನಾದ ನೃತ್ಯ ವೈಭವ 2019 ವರ್ಷಂಪೂತರ್ಿ ನಡೆಯುವ ತಿಂಗಳ ಕಾರ್ಯಕ್ರಮದ ಮೊದಲನೇ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಹಾಗೂ ಉಪಾಧ್ಯೆ ನೃತ್ಯ ವಿಹಾರ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ರಾಮಕೃಷ್ಣ ವಿವೇಕಾನಂದ ಆಶ್ರಮ ಆವರಣ ಕಲ್ಯಾಣನಗರ ಹುಬ್ಬಳ್ಳಿಯಲ್ಲಿ ಜರುಗಿತು.

  ವಿವೇಕಾನಂದ ಆಶ್ರಮದ ಸ್ವಾಮಿ ರಘುವೀರಾನಂದಜೀ ಮಹಾರಾಜ ಉದ್ಘಾಟನೆಯನ್ನು ಮಾಡಿ ಮಾತನಾಡಿ ಸಂಗೀತ ನೃತ್ಯ ಕಲೆ ಎಲ್ಲರ ಸ್ವತ್ತು ಅದನ್ನು ಸರಿಯಾಗಿ ರೂಢಿಸಿಕೊಳ್ಳಬೇಕು ಅಲ್ಲದೆ ಹುಬ್ಬಳ್ಳಿಯಲ್ಲಿ ಉಪಾಧ್ಯಾಯ ನೃತ್ಯವಿಹಾರ ಬಂದಿದ್ದು ಹರ್ಷ ತರುವಂತಹದ್ದು ಈ ಭಾಗದ ಜನರು ಇದರ ಉಪಯೋಗ ಪಡೆಯಬೇಕೆಂದರು, ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಹಿರಿಯರಾದ ರಾಘವೇಂದ್ರ ರಾಮದುರ್ಗ ಮಾತನಾಡಿ ಕಲೆಯಲ್ಲಿ ಕಲೆಯನ್ನು ಕಂಡಾಗ ಅದರ ರುಚಿಯೇ ಬೇರೆ ಅದನ್ನು ತಾವು ಅಳವಡಿಸಿಕೊಂಡಿದ್ದುಂಟು ಮತ್ತು ಪ್ರತಿಯೊಬ್ಬರಲ್ಲಿಯೂ ಒಂದು ಕಲೆ ಇರುತ್ತದೆ ಅದನ್ನು ಬಳಸಿಕೊಳ್ಳಬೇಕು ಯುವಕರು ಪಠ್ಯದ ಜೊತೆಗೆ ಇದನ್ನು ರೂಢಿಸಿಕೊಂಡರು ಯಶ್ಸಸ್ಸು ಸಾಧ್ಯವೆಂದು ತಮ್ಮ ಅತಿಥಿಯ ಭಾಷಣದಲ್ಲಿ ನುಡಿದರು ಮಹಾಪೌರರಾದ ಸಂದೀಪ ಸರಾಫ್ ಮಾತನಾಡಿ ಕಲೆಯಲ್ಲಿ ಕಲೆ ಬೆರೆತಾಗ ಅದರ ಮಹತ್ವ ಗೊತ್ತಾಗುವುದು ಅದನ್ನು ಪ್ರತಿಯೊಬ್ಬರು ಆಸ್ವಾದಿಸಬೇಕೆಂದು ನುಡಿದರು.

           ನಂತರ ಪುಠಾಣಿಗಳಾದ ಕುಮಾರಿ ಶೀತಲ ಜೋಶಿ ಹಾಗೂ ಕುಮಾರಿ ಮೇಧಾ ವಡವಿ ಇವರಿಂದ ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮ ಜರುಗಿತು.

      ಕಾರ್ಯಕ್ರಮದಲ್ಲಿ ಹಿನ್ನಲೆಯಾಗಿ ವಿದುಷಿ ಪ್ರಮೋದಾ ಉಪಾಧ್ಯಾಯ ನಟುವಾಂಗ, ಹಾಡುಗಾರಿಕೆ ಪಂಚಮ ಉಪಾಧ್ಯಾಯ ಮೃದಂಗಂ ಸಹಕರಿಸಿದರು. ಪುಷ್ಪಾಂಜಲಿ, ಜತಿಸ್ವರ, ತಿಲ್ಲಾನ ನೃತ್ಯಗಳು ಮುದ ನೀಡಿದವು ಕಾರ್ಯಕ್ರಮ ನಿರೂಪಣೆ ವಿದ್ವಾನ ನಟರಾಜ ಉಪಾಧ್ಯಾಯ ಮಾತನಾಡಿ ಪ್ರತಿ ಶನಿವಾರ ಸಾಯಂಕಾಲ ರಾಮಕೃಷ್ಣ ವಿವೇಕಾನಂದ ಆಶ್ರಮ ಆವರಣ ಕಲ್ಯಾಣನಗರ ಹುಬ್ಬಳಿಯಲ್ಲಿ ಭರತನಾಟ್ಯ ಹಾಗೂ ಕನರ್ಾಟಕಿ ಸಂಗೀತ ತರಬೇತಿ ನೀಡಲಾಗುವುದು ಎಂದು ನುಡಿದರು ಆಸಕ್ತರು 9880838977, 9449587166, 0836-2740388 ಗೆ ಸಂಪಕರ್ಿಸಬಹುದು. ನವಮಿ ಉಪಾಧ್ಯಾಯ ವಂದಿಸಿದರು ಉಮೇಶ ಕೌಜಗೇರಿ, ಲತಾ ಜಮಖಂಡಿ ಉಪಸ್ಥಿತರಿದ್ದರು.