ಪ್ರಸಕ್ತ ಋತುವಿನ ಫಾರ್ಮುಲಾ ಒನ್ ಜುಲೈ 5ರಿಂದ ಆರಂಭ ಸಾಧ್ಯತೆ

ವಾಷಿಂಗ್ಟನ್, ಏ.27, ಕೊರೊನಾ ವೈರಸ್ ಪ್ರಭಾವದಿಂದ ವಿಶ್ವದಲ್ಲಿ ಕ್ರೀಡಾ ಚಟುವಟಿಕೆಗಳು ಮುಂದೂಡಲ್ಟಟ್ಟಿವೆ. ಫಾರ್ಮುಲಾ ಒನ್ ರೇಸ್ ಸಹ ತನ್ನ ರೇಸ್ ಗಳನ್ನು ರದ್ದು ಮಾಡಿದೆ. ವರ್ಷದ ಮೊದಲ ರೇಸ್ ಆಸ್ಟ್ರಿಯಾ ಎಫ್-1 ಚಾಂಪಿಯನ್ ಶಿಪ್ ನ್ನು ಜುಲೈ 5 ರಂದು ಪ್ರೇಕ್ಷಕರಿಲ್ಲದೆ ನಡೆಸಲು ಚಿಂತನೆ ನಡೆಸಿದೆ ಎಂದು ಸಿಇಒ ಚೇಸ್ ಕ್ಯಾರಿ ಹೇಳಿದ್ದಾರೆ. ಈ ಮೊದಲು ಫ್ರೆಂಚ್ ಗ್ರಾನ್ ಪ್ರಿ ಟೂರ್ನಿಯನ್ನು ಮುಂದೂಡಿದೆ. ಅಲ್ಲದೆ ಈ ಟೂರ್ನಿ ಪ್ರಸಕ್ತ ವರ್ಷ ನಡೆಸುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಅಲ್ಲದೆ ಬ್ರಿಟನ್ ಗ್ರ್ಯಾಂಡ್ ಪ್ರಿ ಆಯೋಜಕರು ಸಹ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಸಲು ಚಿಂತನೆ ನಡೆಸಿತ್ತು. “ನಾವು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಆರಂಭದ ವೇಳೆಗೆ ಯುರೋಪಿನಲ್ಲಿ ರೇಸಿಂಗ್ ಪ್ರಾರಂಭಿಸುವ ಗುರಿ ಹೊಂದಿದ್ದೇವೆ, ಜುಲೈ ವಾರಾಂತ್ಯದಲ್ಲಿ ಆಸ್ಟ್ರಿಯಾದಲ್ಲಿ ಮೊದಲ ಓಟದ ಸ್ಪರ್ಧೆ ನಡೆಯುತ್ತಿದೆ. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ, ನಾವು ಯುರೇಷಿಯಾ, ಏಷ್ಯಾ ಮತ್ತು ಅಮೆರಿಕಾಗಳಲ್ಲಿ ರೇಸ್ ನಡೆಸಲು ಚಿಂತಿಸಿದ್ದೇವೆ. ಅಬುಧಾಬಿಯಲ್ಲಿನ ಸಾಂಪ್ರದಾಯಿಕ ಅಂತಿಮ ಪಂದ್ಯದ ಮೊದಲು ಡಿಸೆಂಬರ್‌ನಲ್ಲಿ ಗಲ್ಫ್‌ನಲ್ಲಿ ಋತುವನ್ನು ಬಹ್ರೇನ್‌ನೊಂದಿಗೆ ಮುಗಿಸಿ, 15-18 ರೇಸ್‌ಗಳ ನಡುವೆ ಪೂರ್ಣಗೊಳಿಸಿದ್ದೇವೆ” ಎಂದು ಕ್ಯಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ .2020 ರ ಋತುವಿನ ಮೊದಲ ಗ್ರ್ಯಾನ್ ಪ್ರಿಕ್ಸ್ ಆರಂಭದಲ್ಲಿ ಮಾರ್ಚ್ 15 ರಂದು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು.