ನಾಡಿನ ಸಂಸ್ಕೃತಿ ಪರಂಪರೆ ಬಿಂಬಿಸಲು ಚಿತ್ರಕಲೆ ಮಾಧ್ಯಮ: ಆಕಳವಾಡಿ

ಲೋಕದರ್ಶನ ವರದಿ: 
ಕೊಪ್ಪಳ 03: ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸಲು ಚಿತ್ರಕಲೆಯು ಒಂದು ಅತ್ಯದ್ಭುತ ಮಾಧ್ಯಮವಾಗಿದೆ. ಇದರಿಂದ ದೇಶ ವಿದೇಶಗಳಲ್ಲಿ ನಮ್ಮ ದೇಶದ ವೈಚಾರಿಕತೆಯನ್ನು ಪ್ರಚಾರಪಡಿಸಲು ಸಹಕಾರಿಯಾಗಿದೆ ಎಂದು ನಿವೃತ್ತ ಜಿಲ್ಲಾ ವಾತರ್ಾಧಿಕಾರಿ ಬಸವರಾಜ ಆಕಳವಾಡಿ ಅಭಿಪ್ರಾಯ ಪಟ್ಟರು.
ಅವರು ನಗರದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ ಗಂಗಾಧರ ಈರಣ್ಣ ಬಂಡಾನವರ ರಚಿತ ಮೂರು ದಿನಗಳ ಕಾಲ ನಡೆಯುವ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಲ್ಲಿ ತನ್ನದೆಯಾದ ರಚನಾತ್ಮಕ ಚಟುವಟಿಕೆ ಇದ್ದು, ಅದಕ್ಕೆ ಪೂರಕವಾದ ಬೆಂಬಲ ಸಿಕ್ಕಾಗ ಮಾತ್ರ ಕಲೆಯು ಕಲಾತ್ಮಕ ಹೊರಹೊಮ್ಮಲಿದೆ. ನಮ್ಮ ಜಿಲ್ಲೆಯ ಇಂತಹ ಪ್ರತಿಭಾವಂತ ಯುವ ಕಲಾವಿದ ದೆಹಲಿಯಲ್ಲಿ ನಡೆದಿರುವ ಅಂತರಾಷ್ಟ್ರೀಯ ಬೆನಾಲೆ ಚಿತ್ರಕಲಾ ಪ್ರದರ್ಶನಕ್ಕೆ ಕನರ್ಾಟಕದ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದು, ಮತ್ತು ಕನರ್ಾಟಕ ಲಲಿತಕಲಾ ಅಕಾಡೆಮಿಯಿಂದ ಕೊಡುವ ರಾಜ್ಯ ಪ್ರಶಸ್ತಿ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಕಲಾವಿದ ತನ್ನ ಮನಸಿನ ಭಾವನೆಯನ್ನು ಕುಂಚಗಳಿಂದ ವ್ಯಕ್ತಪಡಿಸುವುದೇ ಚಿತ್ರಕಲೆಯಾಗಿದೆ. ಇದೊಂದು ವೈಶಿಷ್ಟವಾದ ಕಲೆಯಾಗಿದ್ದು, ವಿಶ್ವದಲ್ಲಿ ಮನ್ನಣೆ ಇದೆ. ಇಂತಹ ಬಡತನದಲ್ಲಿ ಅರಳಿರುವ ಪ್ರತಿಭೆಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಲ್.ಐ.ಸಿ ಪ್ರತಿನಿಧಿ ಪ್ರಾಣೇಶ ಜೋಷಿ ಮಾತನಾಡಿ ಕನ್ನಡತಾಯಿ ಭುವನೇಶ್ವರಿ ಭಾವಚಿತ್ರವನ್ನು ತನ್ನ ಕಲ್ಪನೆಯಿಂದ ಬಿಡಿಸಿದ ಕೀತರ್ಿ ಬಿ.ಕೆ.ಎಸ್ ವಮರ್ಾಗೆ ಸಲ್ಲುತ್ತದೆ. ಅವರ ಶಿಕ್ಷಣವು ತಮ್ಮ ಬಡತನದಿಂದ ಮೊಟುಕುಗೊಳಿಸಿದ್ದರು ಕೂಡಾ ಚಿತ್ರಕಲೆಗೆ ಶಿಕ್ಷಣ ಅಡ್ಡಿಯಾಗಲಿಲ್ಲ. ಅದೇ ರೀತಿ ಪ್ರತಿಭಾವಂತ ಯುವ ಕಲಾವಿದ ಗಂಗಾಧರ ಬಂಡಾನವರ ರಚಿಸಿರುವ ಚಿತ್ರಕಲೆಗೆ ಬಡತನ ಅಡ್ಡಿಯಾಗಲಿಲ್ಲ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಾ.ಕೃ.ಪ.ಸ.ಸಂಘದ ನಿದರ್ೇಶಕ ಗವಿಸಿದ್ದಪ್ಪ ಕಕರ್ಿಹಳ್ಳಿ, ಪ್ರಾಧ್ಯಾಪಕ ಶಿವಕುಮಾರ ಕುಕನೂರ, ಸಿ.ಆರ್.ಪಿ ಸಂಗಪ್ಪ, ಈರಣ್ಣ ಬಂಡಾನವರ, ಅಮಿತ ಕಂಪ್ಲೀಕರ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಚಿದಾನಂದ ಕಡೇಮನಿ, ರಮೇಶ ಗಾರವಾಡ, ಮಹಾದೇವಿ ಜ್ಯೋತಿ ಮಲ್ಲಿಕಾಜರ್ುನ ಮುಂಡರಗಿ, ಸುರೇಶ ಯಲಬುಗರ್ಾ, ರವಿಚಂದ್ರ ಪಾಟೀಲ್, ಗವಿ ಉಪ್ಪಾರ ಭಾಗವಹಿಸಿದ್ದರು. ಬಿ.ಗಿರೀಶಾನಂದ ಜ್ಞಾನಸುಂದರ ಕಾರ್ಯಕ್ರಮವನ್ನು ನಿರೂಪಿಸಿದರು.  ಶ್ರವಣಕುಮಾರ ಬಂಡಾನವರ ವಂದಿಸಿದರು.