ಧಾರವಾಡದಲ್ಲಿ ಸಂಗೀತದ ತೊಟ್ಟಿಲು ಸದಾ ತೂಗುತ್ತಿದೆ: ಡಾ. ಐರಸಂಗ

ಧಾರವಾಡ 03: ಸುಗಮ ಸಂಗೀತದ ಕಲಾವಿದರಿಂದ ಕವಿ ಹಾಗೂ ಆತನ ಕವಿತೆಗಳು ಮನೆ-ಮನ ಮುಟ್ಟುವುದು. ದೈನಂದಿನ ಬದುಕಿನ ಜಂಜಡ ಹಾಗೂ ಲೋಕ ವ್ಯಾಪಾರದ ಭರಾಟೆಯಲ್ಲಿ ಖುಷಿ ಹಾಗೂ ಸಂತೃಪ್ತಿಯ ಮಟ್ಟ ಹೆಚ್ಚಿಸಿ, ನಮಗೊಂದು ಬಿಡುಗಡೆಯ ಹಾದಿ ತೋರಿಸುವ ತಂಗುದಾಣ ಎಂದು ಹಿರಿಯ ಕವಿ ಡಾ.ವಿ.ಸಿ. ಐರಸಂಗ ಅಭಿಪ್ರಾಯಪಟ್ಟರು. 

ವಿದುಷಿ ಸಂಧ್ಯಾ ಮಧುಕರ ಕುಲಕಣರ್ಿ ಸಾರಥ್ಯದ ಸ್ವರ ಸುಧಾ ಸಂಗೀತ ಮಹಾವಿದ್ಯಾಲಯ ಯಶಸ್ವಿಯಾಗಿ 25ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ನಿಮಿತ್ತ ಅ.2ರಂದು ಐದು ದಿನಗಳ 'ಸುಗಮ ಸಂಗೀತ ಕಾಯರ್ಾಗಾರ' ಉದ್ಘಾಟಿಸಿ, ಅವರು ಮಾತನಾಡಿದರು. 

ಕಲೆ ನಮ್ಮನ್ನು ಮನುಷ್ಯನನ್ನಾಗಿಸುತ್ತದೆ. ಕಲಾವಿದನಾಗಲು ಯೋಗ್ಯತೆ ಬೇಕು. ಆಕಾಶವಾಣಿ ಹಾಗೂ ದೂರದರ್ಶನದ `ಬಿ' ಶ್ರೇಣಿ ಗಾಯಕಿ ವಿದುಷಿ ಸಂಧ್ಯಾ ಕುಲಕಣರ್ಿ ಹಾಗೂ `ಬಿ-ಹೈ' ಶ್ರೇಣಿ ಗಾಯಕ ಗಣೇಶ ದೇಸಾಯಿ ಈ ಕಾಯರ್ಾಗಾರದಲ್ಲಿ ಸುಗಮ ಸಂಗೀತ ಪ್ರಕಾರದ ವ್ಯಾಪ್ತಿಗೆ ಒಳಪಡುವ ಎಲ್ಲ ಸಂಗೀತ-ಸಾಹಿತ್ಯ ಪ್ರಕಾರಗಳ ಕಲಿಸುವಿಕೆಗೆ ಆದ್ಯತೆ ನೀಡುತ್ತಿರುವುದು ಸಂತಸದ ವಿಷಯ ಎಂದು ಡಾ.ಐರಸಂಗ ನುಡಿದರು. 

ದೇವರನಾಮ, ವಚನ, ತತ್ವಪದಗಳು, ದೇಶಭಕ್ತಿ ಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳನ್ನು, ವಯೋಮಾನಕ್ಕೆ ತಕ್ಕಂತೆ ಸುಗಮ ಸಂಗೀತ ಗಾಯಕರು ಅನುಸರಿಸಬೇಕಾದ ವಿಶೇಷ ತಾಂತ್ರಿಕ ಕೌಶಲಗಳ ಕಲಿಕೆ, ಸಂಗೀತ ಬಂಧ (ಮ್ಯೂಸಿಕ್ ಟ್ರ್ಯಾಕ್) ಬಳಸಿ, ಸಹ ವಾದ್ಯ ಸಂಗೀತಗಾರರೊಂದಿಗೆ ಗಾಯಕರು ನಿಭಾಯಿಸಬೇಕಾದ ಸೂಕ್ಷ್ಮತೆಗಳನ್ನೂ ಕೂಡ ತಜ್ಞರು ಕಲಿಸಿಕೊಡುತ್ತಿರುವುದು ವಿಶೇಷ ಪ್ರಯತ್ನ. ಸಂಗೀತದ ತೊಟ್ಟಿಲು ಧಾರವಾಡದಲ್ಲಿ ಇಂತಹವರಿಂದ ನಿರಂತರ ತೂಗುತ್ತಿರಲಿ ಎಂದು ಡಾ.ಐರಸಂಗ ಹಾರೈಸಿದರು. 

ತಮ್ಮ ಕವನ ಸಂಕಲನವನ್ನು ಡಾ. ವಿ.ಸಿ. ಐರಸಂಗ ಸುಗಮ ಸಂಗೀತ ಕಾಯರ್ಾಗಾರದ ಕಲಿಕಾಥರ್ಿಗಳಿಗೆ ಉಡುಗೊರೆಯಾಗಿ ನೀಡಿದರು. 

ಖ್ಯಾತ ಗಾಯಕ ಹಾಗೂ ಸಂಗೀತ ಸಂಯೋಜಕ ಗಣೇಶ ದೇಸಾಯಿ, ಕಾಯರ್ಾಗಾರದ ಸಂಚಾಲಕತ್ವ ವಹಿಸಿಕೊಂಡು ಮಾತನಾಡಿ, ಸ್ವರ ಸಂಯೋಜನೆಗೆ ಅತ್ಯಂತ ಸುಲಲಿತವಾಗುವ ಹಾಗೆ, ಛಂದಸ್ಸು, ಲಯ, ತಾಳ ಹಾಗೂ ಸ್ವರ ವಿಸ್ತಾರ ಅನುಲಕ್ಷಿಸಿ ಕವಿತೆಗಳನ್ನು ರಚಿಸುವ ಕವಿ ಡಾ. ಐರಸಂಗ  ಸುಗಮ ಸಂಗೀತ ಗಾಯಕರ ಅಚುಮೆಚ್ಚು ಎಂದರು. 

ವಿದುಷಿ ಸಂಧ್ಯಾ ಕುಲಕಣರ್ಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಗಮ ಸಂಗೀತ ಗಾಯಕರ ಕಾಯರ್ಾಗಾರ ಮೂರನೇ ಬಾರಿಗೆ ಮಹಾವಿದ್ಯಾಲಯ ಆಯೋಜಿಸಿದೆ. ಜನೆವರಿಯಲ್ಲಿ 25ನೇ ವರ್ಷದ ವಾಷರ್ಿಕೋತ್ಸವ ರಾಜ್ಯ ಮಟ್ಟದಲ್ಲಿ ಆಯೋಜಿಸಲು ಯೋಜಿಸಿದ್ದಾಗಿ ತಿಳಿಸಿದರು.  

ಮಾಳಮಡ್ಡಿಯ 'ಸ್ವರ ಸುಧಾ ಸಂಗೀತ ಮಹಾವಿದ್ಯಾಲಯ'ದಲ್ಲಿ ಉದ್ಘಾಟನೆಗೊಂಡ ಕಾಯರ್ಾಗಾರದಲ್ಲಿ ಕಿರುತೆರೆಯ ಹೆಸರಾಂತ ನಟಿ ಹಾಗೂ ರಂಗಕಮರ್ಿ, ಭರತನಾಟ್ಯ ಕಲಾವಿದೆ ನಮಿತಾ ಕುಲಕಣರ್ಿ, ಹರ್ಷವರ್ಧನ ಶೀಲವಂತ ಸೇರಿದಂತೆ 40ಕ್ಕೂ ಹೆಚ್ಚು ಜನ ಶಿಬಿರಾಥರ್ಿಗಳು ಪಾಲ್ಗೊಂಡಿದ್ದರು. ಶನಿವಾರ ಕಾಯರ್ಾಗಾರ ಸಮಾರೋಪಗೊಳ್ಳಲಿದೆ.