ದೇಶವು ಈ ಹಿಂದೆ ಎಂದೂ ಕಂಡಿಯರಿಯದ ಭೀಕರತೆ ಅನುಭವಿಸುತ್ತಿದೆ

ಲೋಕದರ್ಶನವರದಿ

ರಾಣೇಬೆನ್ನೂರು-ಎ.6: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದಲ್ಲಿನ ಬಡವರು, ಕೂಲಿಕಾಮರ್ಿಕರು, ನಿರಾಶ್ರೀತರು ಇರುವ ಸ್ಥಳಗಳಿಗೆ ತೆರಳಿದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ಭಟ್ ಪೂಜಾರ ಅವರು ದಿನನಿತ್ಯದ ಅಗತ್ಯ ಮತ್ತು ಅವಶ್ಯಕ ಆಹಾರ ಸಾಮಗ್ರಿಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಭಟ್ ಅವರು ಭಾರತ ದೇಶವು ಈ ಹಿಂದೆ ಎಂದೂ ಕಂಡರಿಯದ ಭೀಕರತೆಯನ್ನು ಈ ಮಹಾಮಾರಿ ಕರೋನಾ ವೈರಸ್ನಿಂದಾಗಿ ಕಾಣುವಂತಾಗಿದೆ.  ಯಾರೋ ಮಾಡಿದ ತಪ್ಪಿಗೆ ಇಡೀ ಭಾರತವೇ ಈ ವೈರಸ್ನಿಂದ ನಲುಗಿದಂತಾಗಿದೆ.  ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ತಮ್ಮ ದೂರದೃಷ್ಠಿಯಿಂದಾಗಿ ತೆಗೆದುಕೊಂಡ ಕ್ರಮದಿಂದ ದೇಶ ಬಹುತೇಕವಾಗಿ ಕರೋನಾ ವೈರಸ್ ಮುಕ್ತವಾಗಲು ಸಾಧ್ಯವಾಗಿದೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರದ ಆದೇಶವನ್ನು ಪರಿಪಾಲಿಸಿ ಕನರ್ಾಟಕ ರಾಜ್ಯದಲ್ಲಿ ಕರೋನಾ ಭೀತಿಯಿಂದ ಹೊರಗುಳಿದಿದ್ದೇವೆ ಎಂದರು.

ಇತ್ತೀಚಿನ ಕೆಲವು ತಿಂಗಳ ಹಿಂದಷ್ಟೇ ಉತ್ತರ ಕನರ್ಾಟಕವು ನೆರೆ ಹಾವಳಿಯಿಂದ ಮನೆ-ಮಠ, ದವಸ-ಧಾನ್ಯ ಕಳೆದುಕೊಂಡು ಸಂಪೂರ್ಣ ನಿರಾಶ್ರತೆಯನ್ನು ಅನುಭವಿಸಿದ ಕೆಲವೇ ತಿಂಗಳುಗಳ ಅವಧಿಯಲ್ಲಿ ಈ ಕರೋನಾ ವೈರಸ್ ಭೀತಿಯಿಂದ ನಾಗರೀಕರು ನಲುಗುವಂತಾಗಿದ್ದಾರೆ.  ಗಾಯದ ಮೇಲೆ ಬರೆಯಂಬಂತೆ ನಾವೆಲ್ಲರೂ ನೂವು ಅನುಭವಿಸುವಂತಾಗಿದೆ. ಲಾಕ್ಡೌನ್ನಿಂದಾಗಿ ಬಡವರು, ಕೂಲಿಕಾಮರ್ಿಕರು, ಬೀದಿಬದಿ ವ್ಯಾಪಾರಸ್ಥರು, ಆದಿವಾಸಿಗಳು, ದಿನನಿತ್ಯದ ಆಹಾರಕ್ಕಾಗಿ ಪರಿತಪಿಸುವ ಮುನ್ನ ನಾವೆಲ್ಲರೂ ಸೇರಿ ನಮ್ಮ ಕೈಲಾದಮಟ್ಟಿಗೆ ಸಹಾಯಹಸ್ತ ಚಾಚುವುದು ಮಾನವೀಯ ಧರ್ಮವಾಗಿದೆ ಎಂದರು.

ಗ್ರಾಮದ ನೂರಾರು ಮನೆಗಳಿಗೆ ತೆರಳಿ ಅವರು ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿ ತಮ್ಮ ಮಾನವೀಯತೆ ಮೆರೆದ ಅವರು ಈ ಕರೋನಾ ವೈರಸ್ ಭೀತಿಯಿಂದ ನಾವೆಲ್ಲೂರು ಸಂಪೂರ್ಣ ಮಾನಸಿಕವಾಗಿ ಕುಗ್ಗಿಹೊಗಿದ್ದೇವೆ.  ಈ ವೈರಾಣು ಕೂಡಲೇ, ತೊಲಗಿ ಭಾವೈಕ್ಯತೆಯ ಭಾರತವು ಪುನ: ಬದುಕು ಕಟ್ಟಿಕೊಳ್ಳಬೇಕಾಗಿದೆ. ಪ್ರತಿಯೊಬ್ಬ ನಾಗರೀಕರು ಮನೆಯಿಂದ ಹೊರಬರದೇ, ಸಂಪೂರ್ಣ ಸ್ವಯಂ ಗೃಹ ದಿಗ್ಭಂಧನದಲ್ಲಿದ್ದು, ಮಹಾಮಾರಿ ಹೊಡೆದೊಡಿಸಬೇಕಾಗಿದೆ.  ಅದಕ್ಕೆ ಒಳಗಿರುವುದೇ ಮದ್ದಾಗಿದೆ.  ಈ ನಿಟ್ಟಿನಲ್ಲಿ ತಾವು ಕ್ಷೇತ್ರನಾಥನಾದ ಶ್ರೀ ಮಾಲತೇಶಸ್ವಾಮಿಯಲ್ಲಿ ಸಂಕಲ್ಪವನ್ನಿತ್ತು ಪ್ರಾರ್ಥನೆ ಸಲ್ಲಿಸಿದರುವುದಾಗಿ ಮಾಧ್ಯಮಕ್ಕೆ ತಿಳಿಸಿದರು.