ವ್ಯಾಪಾರ ಹೆಚ್ಚಾದಾಗ ದೇಶದ ಅಭಿವೃದ್ದಿ ಸಾಧ್ಯ: ಬಸವರಾಜ ಬೊಮ್ಮಾಯಿ
ಹಾವೇರಿ (ಬ್ಯಾಡಗಿ) 06: ವಿಶ್ವಾಸ ಹೆಚ್ಚಾದರೆ ವ್ಯಾಪಾರ ಹೆಚ್ಚಾಗುತ್ತದೆ. ವ್ಯಾಪಾರ ಹೆಚ್ಚಾದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಜಿ.ಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘ ಡಾವಣಗೆರೆ ಇವರ 9 ನೇಯ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬ್ಯಾಡಗಿ ಒಂದು ವಾಣಿಜ್ಯ ಕೇಂದ್ರವಾಗಿದೆ. ಆಂದ್ರ್ರದೆಶ ರಾಯಚೂರು, ಧಾರವಾಡ ಜಿಲ್ಲೆಯ ಕುಂದಗೋಳದಿಂದ ಮೆಣಸಿನಕಾಯಿ ಇಲ್ಲಿಗೆ ಬರುತ್ತದೆ. ಬ್ಯಾಡಗಿಯೊಳಗ ಒಳ್ಳೆಯ ಸಂಪ್ರದಾಯ ಇದೆ. ಇಲ್ಲಿ ರೈತರ ಬೆಳೆಗೆ ಒಳ್ಳೆಯ ಬೆಲೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಜನರಿಗೆ ಇದೆ ಎಂದು ಹೇಳಿದರು.ಈ ನಗರದಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ ಅವರು ಮತ್ತೊಂದು ಸಂಸ್ಥೆ ಆರಂಭಿಸಿದ್ದಾರೆ. ಸಿದ್ದೇಶ್ ಅವರು ರೈತರಾಗಿ ವ್ಯಾಪಾರಸ್ಥರಾಗಿ ಅಡಿಕೆ ವ್ಯಾಪಾರದಲ್ಲಿ ದಾಖಲೆ ಮಾಡಿದ್ದಾರೆ, ದಾವಣಗೆರೆ ಸುತ್ತಮುತ್ತ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಅವರು ವ್ಯಾಪಾರ ಮಾಡುತ್ತಿರುವಾಗ ಬಹಳ ಜನ ಅಡಿಕೆ ಬೆಳೆಯುತ್ತಿರಲಿಲ್ಲ. ಈಗ ಇಡೀ ಉತ್ತರ ಭಾರತದ ಪ್ರತಿಯೊಂದು ನಗರದಲ್ಲಿ ಅವರ ವ್ಯಾಪಾರ ಇದೆ. ಆಸ್ಸಾನಿಂದ, ನಾಗಪೂರ, ದೆಹಲಿ ಎಲ್ಲ ಕಡೆ ಇವರ ಅಡಿಕೆ ಮಾರಾಟವಾಗುತ್ತಿದೆ. ಇವತ್ತು ಶಿಕ್ಷಣ ಸಂಸ್ಥೆ, ಸಕ್ಕರೆ ಕಾರ್ಖಾನೆಯಲ್ಲಿ ಹೆಸರು ಮಾಡಿದ್ದಾರೆ. ಸಂಗೂರು ಸಕ್ಕರೆ ಕಾರ್ಖಾನೆ ಸಂಕಷ್ಟದಲ್ಲಿ ಇದ್ದಾಗ. ಆಗಿನ ಸಿಎಂ ಯಡಿಯೂರ್ಪ ಹಾಗೂ ಅಂದಿನ ಸಚಿವ ದಿ. ಸಿ.ಎಂ. ಉದಾಸಿಯವರು ಅದರ ಪುನರ್ ಪ್ರಾರಂಭಕ್ಕೆ ಪ್ರಯತ್ನ ಮಾಡಿದ್ದರು. ಇವರು 180 ಕೋಟಿ ಕೊಟ್ಟರು ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಇಡಿ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಶೇ 2ಅ ರಿಂದ ಶೇ 3ಅ ರಷ್ಟು ಬೆಳವಣಿಗೆ ಆಗುತ್ತಿದ್ದರೆ, ಭಾರತ ಶೇ 6ಅ ರಷ್ಟು ಬೆಳವಣಿಗೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ವ್ಯಾಪಾರವನ್ನು ನಡೆಸಲು ನಿಯಮಗಳನ್ನು ಸರಳೀಕರಣ ಮಾಡಿದ್ದಾರೆ. ಹತ್ತು ವರ್ಷಗಳ ಹೀಂದೆ 1 ಕೋಟಿ ಆದಾಯ ಘೋಷಣೆ ಮಾಡಿ ತೆರಿಗೆ ಕಟ್ಟುವ ಜನರ ಸಂಖ್ಯೆ ಕೇವಲ 42 ಸಾವಿರ ಇದ್ದರು. ಈಗ ಸುಮಾರು 5.5 ಲಕ್ಷಕ್ಕೂ ಹೆಚ್ಚು ಜನರು ತೆರಿಗೆ ಕಟ್ಟುತ್ತಿದ್ದಾರೆ. ವ್ಯಾಪಾರ ಹೆಚ್ಚಾದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ವಿಶ್ವಾಸ ಹೆಚ್ಚಾದರೆ ವ್ಯಾಪಾರ ಹೆಚ್ಚಾಗುತ್ತದೆ.
ನಮ್ಮ ವಿಶ್ವಾಸಾರ್ಹತೆಯೇ ನಮ್ಮ ಬಂಡವಾಳ. ಮೊದಲು ರೈತರ ಬಳಿ ಹೋಗಿ ಮೆಣಸಿನಕಾಯಿ ತರುತ್ತಿದ್ದರು. ಈಗ ರೈತರ ವಿಶ್ವಾಸಗಳಿಸಿರುವುದರಿಂದ ರೈತರು ಇಲ್ಲಿಗೆ ಬಂದು ಮಾರಾಟ ಮಾಡುತ್ತಾರೆ. ದೇಶದ ಆರ್ಥಿಕತೆ ವಿಶ್ವಾಸದ ಮೇಲೆ ನಿಂತಿದೆ. ಅದೇ ರೀತಿ ಈ ಬ್ಯಾಂಕ್ ಕೂಡ ಜನರ ವಿಶ್ವಾಸ ಗಳಿಸಿದೆ. 255 ಕೋಟಿ ರೂ. ಡಿಫಾಜಿಟ್ ಇದೆ. ಈ ವರ್ಷ 4.4 ಕೋಟಿ ರೂ. ಲಾಭ ಗಳಿಸಿದೆ. ಸೌಹಾರ್ದ ಬ್ಯಾಂಕ್ ಗಳು ಸರ್ಕಾರದ ಹಿಡಿತ ಇಲ್ಲದೇ ನಿಮ್ಮ ವಿಶ್ವಾಸದ ಮೇಲೆ ನಡೆಯುತ್ತವೆ. ಕೆಲವು ಸೌಹಾರ್ದ ಬ್ಯಾಂಕ್ ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಜನರು ಇಟ್ಟಿರುವ ಹಣ ದುರುಪಯೋಗ ಆಗಬಾರದು. ಪ್ರತಿ ವರ್ಷ ಹೊಸ ಹೊಸ ಸವಾಲುಗಳು ಬರುತ್ತವೆ. ಪ್ರಸನ್ನ ಅವರು ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಬಹಳಷ್ಟು ಜನರು ಆಸೆಗೆ ಬಿದ್ದು ದುರುಪಯೋಗ ಪಡೆಸಿಕೊಂಡಿದ್ದಾರೆ. ಈಗ ಈ ಬ್ಯಾಂಕ್ 9 ನೇ ಬ್ರಾಂಚ್ ಓಪನ್ ಮಾಡುತ್ತಿರುವುದು ಒಳ್ಳೆಯ ನಿರ್ವಹಣೆಗೆ ಉದಾಹರಣೆಯಾಗಿದೆ. ಇದು ಯಶಸ್ವಿಯಾಗಲಿ ಎಂದು ಅಭಿಪ್ರಾಯಪಟ್ಟರು.ಸಹಕಾರಿ ರಂಗದ ತಳಹದಿ ಅದರ ನೀತಿ ಯಾವಾಗಲೂ ಗಟ್ಟಿಯಾಗಿರುತ್ತದೆ. ಸಹಕಾರಿ ರಂಗದಲ್ಲಿ ಏನಾದರೂ ವ್ಯತ್ಯಾಸವಾದರೆ ಆಡಳಿತ ಮಂಡಳಿಯಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಅರ್ಥ. ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಸಹಕಾರಿ ರಂಗ ಸರ್ಕಾರವನ್ನು ಆಳುತ್ತವೆ. ಸಹಕಾರಿ ರಂಗ ಅಷ್ಟು ಪ್ರಭಲವಾಗಿದೆ. ಕರ್ನಾಟಕದಲ್ಲಿ ಸರಕಾರ ಸಹಕಾರ ರಂಗವನ್ನು ಆಳುತ್ತಿದೆ. ಸರ್ಕಾರ ರೆಗ್ಯಲೇಟರಿ ಅಥಾರಿಟಿಯಾಗಿ ಕಾರ್ಯಮಾಡಬೇಕು ಎಂದು ಹೇಳಿದರು.ಈ ಸಂಧರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಜಿ.ಎಂ ಸಿದ್ದೇಶ್ವರ ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ್, ವೀರುಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಜಿ.ಎಂ ಪ್ರಸನ್ನ ಕುಮಾರ, ಪ್ರಭು ಮಾಗನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.