ಶಿಕ್ಷಣ ಕ್ಷೇತ್ರಕ್ಕೆ ಮಠಾದೀಶರ ಕೊಡುಗೆ ಅಪಾರ: ನಂಜಯ್ಯಮಠ

ಲೋಕದರ್ಶನವರದಿ

ಹುನಗುಂದ೦೮:  ಶಿಕ್ಷಣ ಕ್ಷೇತ್ರಕ್ಕೆ ಮಠಾದೀಶರ ಹಾಗೂ ಸಾಮಾಜಿಕ ಕಾರ್ಯಕರ್ತರ ಕೊಡುಗೆ ಅಪಾರ ಎಂದು  ಜಿಲ್ಲಾ ಕಾಂಗ್ರೇಸ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯಮಠ ಹೇಳಿದರು.

ತಾಲೂಕಿನ ಅಮೀನಗಡ  ಪಟ್ಟಣದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೀ-ಪ್ರೈಮರಿ,ಹೈಯರ್ ಪ್ರೈಮರಿ ಮತ್ತು ಹೈಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಂಡ 9ನೇ ವಾಷರ್ಿಕ ಸ್ನೇಹ ಸಮ್ಮೇಳನ,ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ,ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ.ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಅವರ ಬದುಕು ರೂಪಿಸುವಲ್ಲಿ ಖಾಸಗಿ ಶಾಲೆಗಳು ನಿಣರ್ಾಯಕ ಪಾತ್ರ ವಹಿಸಿದೆ ಎಂದರು.

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿಗಳು ಅತ್ಯುತ್ತಮವಾಗಿ ಅಂಕಗಳಿಸಿದ್ದಾರೆ ಇದರಿಂದ ಶಾಲೆಯು ತಾಲೂಕಿನಲ್ಲಿ  ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿ ಶಾಲೆಯ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಸಾಧನೆ ಮಾಡಿ ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ ಇದಕ್ಕೆ ಕಾರಣಿಭೂತರಾತರಾದ ಶಿಕ್ಷಕ ವೃಂದದವರಿಗೆ ಹಾಗೂ ಆಡಳಿತ ಮಂಡಳಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲಕಲ್ ಡಯಟ್ ಕಾಲೇಜ ಕೆ.ಇ.ಎಸ್ ಸಿದ್ದಮ್ಮ ಪಾಟೀಲ ಮಾತನಾಡಿ, ಪಾಲಕರು ವಿದ್ಯಾಥರ್ಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಯಲ್ಲಿ ಉತ್ತಮ ಸಂಸ್ಕಾರವನ್ನು ನೀಡಬೇಕು.ಎಕ್ಸಲೆಂಟ್ ಶಾಲೆಯೂ ಆಂಗ್ಲ ಮಾಧ್ಯಮ ಶಾಲೆಯಾದರು ಕೂಡಾ ಮಾತೃಭಾಷೆ ಕನ್ನಡ  ವಿಷಯದಲ್ಲಿ ಐದು ವಿದ್ಯಾಥರ್ಿಗಳು 125ಕ್ಕೆ 125 ಅಂಕಗಳನ್ನು ಗಳಿಸುವ ಮೂಲಕ ತಾಲೂಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.ಇದು ಮಾತೃಭಾಷೆಗೆ ನೀಡಿದ ನಿಜವಾದ ಗೌರವ. ವಿದ್ಯಾಥರ್ಿಗಳು ಮಾತೃಭಾಷೆಯ ಜತೆಯಲ್ಲಿ ಇತರ ಬಾಷೆಯನ್ನು ಕೂಡಾ ಅತ್ಯುತ್ತಮವಾಗಿ ಕಲಿತು ಉತ್ತಮ ಸಾಧನೆ ಮಾಡಬೇಕು ಎಂದರು. ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ,ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಎಸ್.ಎಸ್.ಸಿ ಟ್ರಸ್ಟ್ ಉಪಾಧ್ಯಕ್ಷ ಪಾಂಡುರಂಗ ದಡ್ಡೇನವರ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಹಾಗೂ ಆದರ್ಶ ಶಿಕ್ಷಕರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.ಎಸ್.ಎಸ್.ಸಿ ಟ್ರಸ್ಟ್ ಸಂಸ್ಥಾಪಕ ಶಿವಕುಮಾರ ಹಿರೇಮಠ,ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಪ್ರಮಿಳಾದೇವಿ ಆರ್.ಅರಳೇಲೆಮಠ,ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ಗುರುಬಸಯ್ಯ ಹಿರೇಮಠ, ಶಿವಲಿಂಗಪ್ಪ ಮುಳ್ಳೂರ, ಮುತ್ತಪ್ಪ ಬಂಡಿವಡ್ಡರ,ಈರಣ್ಣ ಅಕರ್ಾಚಾರಿ, ಪಪಂ ಸದಸ್ಯ ವಿಜಯಕುಮಾರ ಕನ್ನೂರ,ಸಂತೋಷ ಐಹೊಳ್ಳಿ ಸೇರಿದಂತೆ ಇನ್ನಿತರರು ಇದ್ದರು.