ಲೋಕದರ್ಶನ ವರದಿ
ಕೊಪ್ಪಳ 15: ಈ ಭಾಗದ ಜನ ಮೊದಲು ಕೇವಲ ಸಿನಿಮಾಗಳನ್ನು ನೋಡುತ್ತಿದ್ದರು ಆದರೆ ಇತ್ತೀಚೆಗೆ ಸಿನಿಮಾಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಕಥೆಗಾರ ಡಾ.ಅಮರೇಶ ನುಗಡೋಣಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ರವರ ಪ್ರಶಸ್ತಿ ವಿಜೇತ ಕಥೆ ಆಧಾರಿತ ಗೌಡ್ರ ಋಣ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹೈದ್ರಾಬಾದ ಕನರ್ಾಟಕ ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದು ಇದೆ. ಸಾಹಿತ್ಯ ಕಥೆಯನ್ನು ಚಲನಚಿತ್ರವನ್ನಾಗಿಸುವ ಪ್ರಯತ್ನವನ್ನು ಇಲ್ಲಿ ಯಾರೂ ಮಾಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಉತ್ತರ ಕನರ್ಾಟಕದಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಲಿವೆ. ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳು ಮೂಡಿಬಂದು ಈ ಭಾಗದ ಕವಿಗಳಿಗೆ, ಇನ್ನೊಂದೆಡೆ ತಂತ್ರಜ್ಞ, ಕಲಾವಿದ, ನಿದರ್ೆಶಕರಿಗೆ ಹೆಸರನ್ನು ತಂದುಕೊಟ್ಟಿವೆ. ಮುಂದೊಂದು ದಿನ ಈ ಭಾಗವು ಸಿನಿಮಾ ಕ್ಷೇತ್ರದಲ್ಲಿ ಕೂಡ ಗಣನೀಯ ಕೊಡುಗೆಯನ್ನು ನೀಡಬಲ್ಲದು ಎಂಬ ಸುಳಿವು ದೊರೆತಿರುವುದು ಸಂತಸ ತಂದಿದೆ ಎಂದರು.
ಮತ್ತೊರ್ವ ಅತಿಥಿಗಳಾದ ಎಚ್.ಶಫರ್ುದ್ದೀನ್ ಪೋತ್ನಾಳರವರು ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ರ ಸಾಹಿತ್ಯ ಕೃಷಿ ಮತ್ತು ಸರಳತೆಯ ವ್ಯಕ್ತಿತ್ವ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಮನೋಹರ ಎಸ್ ದಾದ್ಮಿ ಮಾತನಾಡಿ ನಮ್ಮ ಭಾಗದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವುದು ಸಂತಸದ ಸಂಗತಿ ಎಂದರು. ವೇದಿಕೆ ಮೇಲೆ ಮುದ್ಲಾಪೂರ ಗ್ರಾಮದ ಗುತ್ತಿಗೆದಾರರಾದ ಯಲ್ಲಪ್ಪ ಹಳೇಮನಿ, ಕೊಪ್ಪಳ ಬಾಂಧವಿ ಸಂಸ್ಥೆಯ ನಿದರ್ೆಶಕರಾದ ನಾಜೀರ್ ಪಿ.ಎಸ್, ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸೋಮನಗೌಡ ಪಾಟೀಲ, ತಾಲೂಕು ಸಂಘದ ಅಧ್ಯಕ್ಷರಾದ ಪತ್ರೆಪ್ಪ ಚತ್ತರಕಿ ಮತ್ತು ಗ್ರೌಡ್ರ ಋಣ ಚಿತ್ರದ ನಿದರ್ೆಶಕರಾಗಿ ಅವಿನಾಶ ಚವ್ಹಾಣ ಹಾಗೂ ಕಥೆಗಾರ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಉಪಸ್ಥಿತರಿದ್ದರು.
ಪ್ರಾರ್ಥನೆ ಸಂಗೀತಾ ಶೆಟ್ಟರ, ಸ್ವಾಗತ ಶಿವನಗೌಡ ಪೋ.ಪಾ, ವಂದನಾರ್ಪಣೆ ಮಾರುತಿ ಗುರಿಕಾರ, ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ ಬಡಿಗೇರ ನೆರೆವೇರಿಸಿದರು. ಆರಂಭದಲ್ಲಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ ಧುರೀಣರಾದ ಸಿ.ವಿ ಚಂದ್ರಶೇಖರ ಆಗಮಿಸಿ ಇತ್ತೀಚಿನ ದಿನಗಳಲ್ಲಿ ಉತ್ತಮ ಸಂದೇಶಗಳನ್ನು ಬಿತ್ತರಿಸುವ ಕಿರುಚಿತ್ರಗಳು ಮೂಡಿಬರುತ್ತಲಿವೆ. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ರ ಗೌಡ್ರ ಋಣ ಈ ಕಥೆಯು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವಂತದ್ದಾಗಿದೆ ಎಂದು ಹೇಳಿದರು. ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಮಹಾಂತೇಶ ಮಲ್ಲನಗೌಡರ, ಭ್ರಷ್ಟಚಾರ ನಿಗ್ರಹದಳ ಗದಗ ಅಧಿಕಾರಿಗಳಾದ ವಿಶ್ವನಾಥ ಹಿರೇಗೌಡರ ಮಾತನಾಡಿದರು. ವೇದಿಕೆಯಲ್ಲಿ ಸಾಹಿತಿ ಎಚ್.ಎಸ್ ಪಾಟೀಲ್, ಕ.ಸಾ.ಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ಮುಖಂಡರಾದ ಅಪ್ಪಣ್ಣ ಪದಕಿ ಉಪಸ್ಥಿತರಿದ್ದರು.
ಗವಿಸಿದ್ಧೇಶ್ವರ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗೌಡ್ರ ಋಣ ಕಿರುಚಿತ್ರ ಪ್ರದರ್ಶನ ಜರುಗಿತು. ಯುವಕರಿಗೆ ಕನ್ನಡ ಸಾಹಿತ್ಯದ ಸದಭಿರುಚಿ ಸೃಷ್ಠಿಸಲು ವೇದಿಕೆ ಅವಶ್ಯ