ಕಕ್ಕೇರಿ 28: ಸಮಾಜವನ್ನು ಸನ್ಮಾರ್ಗದಲ್ಲಿ ಸಾಗಿಸುವ ಮೂಲಕ ಜನತೆಗೆ ಸಂಸ್ಕಾರಯುತ ಜೀವನ ಸಾಗಿಸುವಲ್ಲಿ ಮಠಮಾನ್ಯಗಳ ಪಾತ್ರ ಮುಖ್ಯ ಎಂದು ಬಿ.ಎಮ್.ಟಿ.ಸಿ ಮಾಜಿ ಅಧ್ಯಕ್ಷ ನಾಗರಾಜ ಯಾದವ ಹೇಳಿದರು.
ಅವರು ಶುಕ್ರವಾರ ಸಮೀಪದ ತೋಲಗಿ ಗ್ರಾಮದ ಸೋಮಲಿಂಗೇಶ್ವರ ಆಶ್ರಮ ಚಿಕ್ಕಮಠದಲ್ಲಿ ನಡೆದ ಲಿಂಗೈಕ್ಯ ಕೀರ್ತನ ಕೇಸರಿ ಸೋಮಯ್ಯ ಶ್ರೀಗಳ 27ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನಸಿಕ ನೆಮ್ಮದಿಗೆ ಆಧ್ಯಾತ್ಮ ಅವಶ್ಯವಾಗಿದ್ದು ಇಂತಹ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಹಾತ್ಮರ ವಾಣಿ ಶ್ರವಣ ಮಾಡಿ ಎಂದರು.
ತೋಲಗಿ ಚಿಕ್ಕಲದಿನ್ನಿಯ ಸೋಮಲಿಂಗೇಶ್ವರ ಆಶ್ರಮದ ಪೀಠಾಧ್ಯಕ್ಷ ಅದೃಶ್ಯ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ಬಸವಾದಿ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಬದುಕು ಸಾಗಿಸಿ ಎಂದರು. ಕಾರ್ಯಕ್ರಮದಲ್ಲಿ ಸದಾ ಕಲ್ಲಟ್ಟಿ, ರಾಜೇಂದ್ರ ಪಂಗಣ್ಣವರ, ಮಾರುತಿ ನಾಯಕ, ಕುಮಾರ ಮಠದ, ಸಂಕಪ್ಪಜ್ಜನವರು, ಲಗಮನ್ನ ಪಂಗಣ್ಣವರ ಹಾಗೂ ಇತರರು ಇದ್ದರು. ಈ ನಿಮಿತ್ಯ ಪ್ರಣವ ದ್ವಜಾರೋಹಣ, ಕರ್ತೃ ಗದ್ದುಗೆಗೆ ಅಭಿಷೇಕ, ಅದೃಶ್ಯಾನಂದ ಭಜನಾ ಮಂಡಳಿ, ಹಾಗೂ ಮಡಿವಾಳೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆದವು. ಶಿಕ್ಷಕ ಎಮ್. ಆರ್. ನಡುವಿನಮನಿ ನಿರೂಪಿಸಿದರು, ಸಿ.ಎನ್. ಚಿಕ್ಕಮಠ ಸ್ವಾಗತಿಸಿದರು. ಈಶ್ವರ ಜಿ.ಪಂ ಬೆಳಗಾವಿ, ಕಕ್ಕೇರಿ.