ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪ್ರೊ.ಡಾ.ಮೋಹನ್ ನಾಯಕ ಜೇನು ಹುಳುಗಳ ಕೊಡುಗೆ ಅಪಾರ

The contribution of Prof. Dr. Mohan Nayak bee worms in the honey farming training program is immense

ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪ್ರೊ.ಡಾ.ಮೋಹನ್ ನಾಯಕ ಜೇನು ಹುಳುಗಳ ಕೊಡುಗೆ ಅಪಾರ 

ಬಳ್ಳಾರಿ 04: ಜಗತ್ತು ಸಂಪದ್ಭರಿತವಾಗಿರಲು ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಉತ್ಪಾದನೆ ಕಾಣಲು ಜೇನುಹುಳುಗಳು ಪ್ರಮುಖ ಕಾರಣವಾಗಿವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕಷಿ ವಿಭಾಗದ ಪ್ರೊ.ಡಾ.ಮೋಹನ್ ನಾಯಕ ಅವರು ಹೇಳಿದರು. 

ಸಂಡೂರು ಪಟ್ಟಣದ ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ​‍್ೋರೇಷನ್ ಲಿ.ನ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುವ ಜೇನುಗಳು ರೈತರ ಫಸಲು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಅತಿಯಾದ ಅಪಾಯಕಾರಿ ರಾಸಾಯನಿಕಗಳ ಬಳಕೆಯಿಂದಾಗಿ ಜೇನಿನ ಸಂತತಿ ನಶಿಸುತ್ತಿರುವುದು ಕಳವಳಕಾರಿಯಾಗಿದೆ ಎಂದರು. 

ಜೇನುಗಳು ನಿರುಪದ್ರವಿಗಳು. ತಮ್ಮ ಅಹಾರ ಹುಡುಕಿಕೊಂಡು 2 ರಿಂದ 5 ಕಿ.ಮೀ. ದೂರದ ವರೆಗೆ ಚಲಿಸುತ್ತವೆ. ಜೇನು ಕಡಿದರೆ ಹಲವು ರೋಗಗಳು ವಾಸಿಯಾಗುತ್ತವೆ ಎಂದು ಕೆಲವರು 100 ರೂ. ಶುಲ್ಕ ಕಟ್ಟಿ ಜೇನಿನಿಂದ ಕಡಿಸಿಕೊಳ್ಳುತ್ತಾರೆ. ಶೇ.95 ರಷ್ಟು ಆಯುರ್ವೇದ ಓಷಧಿಗಳು ಜೇನು ತುಪ್ಪದ ಮೂಲಕ ಬಳಸಲ್ಪಡುತ್ತವೆ ಎಂಬುದು ಅದರ ಮಹತ್ವ ತಿಳಿಸುತ್ತದೆ ಎಂದು ಹೇಳಿದರು. 

ಜೇನು ತುಪ್ಪಕ್ಕೆ ಗುಣಮಟ್ಟದ ಆಹಾರದಲ್ಲಿ ಪ್ರತಿ ಕೆ.ಜಿ 250 ರೂ. ದಿಂದ 10 ಸಾವಿರ ರೂ.ಗಳವರೆಗೆ ಮಾರಾಟವಾಗುತ್ತಿದ್ದು, ವ್ಯಾಪಕ ಮಾರುಕಟ್ಟೆಯಿದೆ. ಆರ್ಥಿಕ ಸ್ವಾವಲಂಬನೆಗೂ ಸಹಕಾರಿಯಾಗಿದೆ ಎಂದರು. 

ಸಹಾಯಕ ಪ್ರೊ.ಡಾ.ವಿಜಯಕುಮಾರ್ ಜೇನು ಸಾಕಾಣಿಕೆಯ ಬಗೆ ಹಾಗೂ ಮಹತ್ವವನ್ನು ವಿವರಿಸಿದರು. 

ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ​‍್ೋರೇಷನ್‌ನ ಡಿಜಿಎಂ ಗವಾನ್ ಬಸವರಾಜಪ್ಪ ಅವರು ಮಾತನಾಡಿ, ಮೊದಲ ಹಂತದಲ್ಲಿ ಆಸಕ್ತರಿಗೆ ನಮ್ಮ ಸಂಸ್ಥೆಯಿಂದ 50 ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು. 

ಜೇನು ಕೃಷಿಯನ್ನು ಹಮ್ಮಿಕೊಳ್ಳುವುದರಿಂದಾಗುವ ಅನುಕೂಲತೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಜೇನು ಕೃಷಿ ಕುರಿತ ತರಬೇತಿಯಲ್ಲಿ ಭಾಗಿಯಾದ 50 ತರಬೇತುದಾರರಿಗೆ ಜೇನು ಪೆಟ್ಟಿಗೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು. 

ಈ ವೇಳೆ ತಹಶೀಲ್ದಾರ್ ಅನಿಲ್‌ಕುಮಾರ್, ಪಿಎಸ್‌ಐ ವೀರೇಶ್ ಮಾಳಶೆಟ್ಟಿ, ಇಎಚ್‌ಎಸ್ ಅಕಾರಿ ಜಗದೀಶ ಸೇರಿದಂತೆ ಇತರರು ಉಪಸ್ಥಿತರಿದ್ದರು.