ಗಂಗಾಧರ ಶ್ರೀಗಳ ಕೊಡುಗೆ ಅಪಾರ

ಲೋಕದರ್ಶನ ವರದಿ

ಬೈಲಹೊಂಗಲ 13: ನಾಡಿನ ಶಿಕ್ಷಣ, ಆದ್ಯಾತ್ಮಿಕ ಕ್ಷೇತ್ರಕ್ಕೆ  ಲಿಂ. ಗಂಗಾಧರ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.

  ಅವರು ಪಟ್ಟಣದ ಶಾಖಾ ಮೂರುಸಾವಿರಮಠದ ಲಿಂ.ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಲಿಂ.ಗಂಗಾಧರ ಸ್ವಾಮೀಜಿಗಳ 11  ನೇ ಪುಣ್ಯಸ್ಮರಣೋತ್ಸವ,  ವಿವಿಧ ಕಾರ್ಯಕ್ರಮಗಳ ಅಂಗವಾಗಿ ಶ್ರೀಮಠದಲ್ಲಿ ಬುಧವಾರ ಜರುಗಿದ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶ್ರೀಗಳು ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಮೂಲಕ, ಕೆಲವೇ ವರ್ಷಗಳಲ್ಲಿ 25 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದ ಇಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶ್ರೀಗಳು ನಾಡಿನ ಜನತೆಗೆ ಆದ್ಯಾತ್ಮಿಕತೆಯ ಸಾರವನ್ನು ಉಣಬಡಿಸುತ್ತಾ ಸಮಾಜ ಸುಧಾರಣೆಗೆ ಒತ್ತು ನೀಡಿದ್ದು ಅವೀಸ್ಮರಣೀಯ ಎಂದರು.  

  ರಾಮದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ನಾಡಿನ ಜನತೆಯ ಗುಣಮಟ್ಟದ ಶಿಕ್ಷಣ ದಾಹ ನಿಗಿಸಲು ಶ್ರಮಿಸಿದ ಗಂಗಾಧರ ಶ್ರೀಗಳು ಹಾಕಿ ಕೊಟ್ಟ ಮಾರ್ಗದಲ್ಲಿ ಶ್ರೀಮಠವನ್ನು ಉತ್ಸುಂಗಕ್ಕೆ ಏರಿಸುತ್ತಿರುವ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ಭಕ್ತರು ತನು, ಮನ, ಧನದಿಂದ ಸಹಕರಿ ನಾಡಿನಲ್ಲಿ ಶ್ರೀಮಠದಿಂದ ಜನತೆಯ ಕಲ್ಯಾಣವಾಗಲು ಶ್ರಮಿಸಬೇಕೆಂದರು. 

 ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಲಿಂ. ಗಂಗಾಧರ ಅಪ್ಪನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಶ್ರೀಮಠವನ್ನು ಉತ್ಸುಂಗಕ್ಕೆ ಏರಿಸಲು ಪ್ರಾಮಾಣಿಕವಾಗಿ ನಡೆದುಕೊಂಡು ಹೊಗಲಾಗುವದು ಎಂದರು. 

      ವೇ.ಮೂ. ಡಾ. ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ,  ಸಂಸ್ಥೆ ಕಾಯಾಧ್ಯಕ್ಷ ಡಾ.ಸಿ.ಎಸ್.ಸಾಧುನವರ, ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪಿಎಸ್ಐ ಎಂ.ಎಸ್. ಹೂಗಾರ, ಸಂಸ್ಥೆಯ ನಿರ್ದೇಶಕ ಜಿ.ಎಸ್. ಹೂಲಿ, ಬಸವಪ್ರಭು ಬೆಳಗಾವಿ, ಷಣ್ಮೂಖಪ್ಪ ಸಿದ್ನಾಳ, ಮಡಿವಾಳಪ್ಪ ಬೊಳತ್ತಿನ, ನಾಗಪ್ಪ ಮಾಕಿ, ಶಂಕರೆಪ್ಪ ತುರಮರಿ, ಶಂಕರೆಪ್ಪ ಸಿದ್ನಾಳ, ಬಾಳಪ್ಪ ಶಿವಬಸನ್ನವರ, ವಿ.ಜಿ. ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ವೀರನಗೌಡ ಸಂಗನ್ನವರ, ತಿಪ್ಪಣ್ಣ ಬಿಳ್ಳೂರ, ಶಿಬಬಸಪ್ಪ ತುರಮರಿ, ಮಹಾಂತೇಶ ಅಕ್ಕಿ, ಮಹಾಂತೇಶ ಜಕಾತಿ, ಮಡಿವಾಳಪ್ಪ ಹೋಟಿ, ಸಾಗರ ಬಾವಿಮನಿ, ಈಶ್ವರ ಕೊಪ್ಪದ, ರಾಜು ಕುಡಸೋಮಣ್ಣವರ ವೇದಿಕೆಯ ಮೇಲೆ ಇದ್ದರು. 

ರಾಮುದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಸ್ವಾಮೀಜಿ ಜಾತ್ರಾ ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. 

ಎಸ್.ಆರ್. ಕಲಹಾಳ ಸ್ವಾಗತಿಸಿದರು. ಎನ್.ಎಸ್. ಚಿಲಮೂರ ನಿರೂಪಿಸಿದರು. 

ಶ್ರೀಮಠದ ಜಾತ್ರಾ ಮಹೋತ್ಸವ ನಿಮಿತ್ಯ ಶರಣರ ಜೀವನ ದರ್ಶನ ಪ್ರವಚನವು ಎಸಳೂರು ಬ್ರಹನ್ಮಠದ ಪೂರ್ಣಚಂದ್ರ ದೇವರು ಅವರಿಂದ ಸಂಜೆ 7ಕ್ಕೆ ಜರುಗಲಿದೆ.