ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರ 09: ಗ್ರಾಮೀಣ ಜನರಿಗೆ ತೊಂದರೆಯಾಗದಂತೆ ಪರಿವರ್ತಕಗಳನ್ನು(ಟಿಸಿ) ವಿತರಿಸಲು ಅಧಿಕರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಕಿತ್ತೂರು ಉಪ ವಿಭಾಗ ಹೆಸ್ಕಾಂ ವತಿಯಿಂದ ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಸಭಾಭವನದಲ್ಲಿ ಶನಿವಾರ ನಡೆದ ವಿದ್ಯುತ್ ಬಳಕೆಯ ಸುರಕ್ಷತಾ, ಉಳಿತಾಯ ಕ್ರಮಗಳು. ಎಲ್ಇಡಿ ಹಾಗೂ ಸೌರಶಕ್ತಿ ಬಳಕೆ ಕುರಿತು ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು,
ಪ್ರತಿಯೊಬ್ಬರಿಗೂ ವಿದ್ಯುತ್ ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ದೀನದಯಾಳ ಉಪಾಧ್ಯಾಯರ ಹೆಸರಿನಲ್ಲಿ ಪ್ರತಿ ಹಳ್ಳಿಗೂ ವಿದ್ಯುತ್ ಕಲ್ಪಸಿ ವಿದ್ಯುತ್ ಆದುನಿಕರಣಕ್ಕೆ ವೇಗ ನೀಡಿ ದೇಶದ ಪ್ರತಿ ಮನೆಯೂ ನಿರಂತರ ಜ್ಯೋತಿ ಬೇಳಗಿಸುವ ಕಾರ್ಯ ಶ್ಲಾಘನೀಯ ಅಧಿಕಾರಿಗಳು ಈ ಯೋಜನೆಗಳನ್ನು ಸಮರ್ಪಕವಾಗಿ ಬಳಿಸಿಕೊಂಡು ಗುಣಮಟ್ಟದ ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕೆಂದ ಅವರು, ಇಲಾಖೆಯೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಗ್ರಾಹಕರು ಸದುಪಯೋಗ ಪಡಿಸಿಕೊಂಡು.
ವಿದ್ಯುತ್ ಉಳಿತಾಯ ಮತ್ತು ಮುನ್ನಚ್ಚರಿಕಾ ಕ್ರಮಗಳನ್ನು ಗ್ರಾಹಕರು ಪಾಲಿಸಬೇಕೆಂದು ಹೇಳಿದರು.
ವಿದ್ಯುತ್ ಉಳಿತಾಯ ಜಾಗೃತಿ, ಮತ್ತು ಸದುಪಯೋಗದ ಸಾಕ್ಷ ಚಿತ್ರಗಳ ಮೂಲಕ ಅಶೋಕ ಲಿಂಗಶೆಟ್ಟಿ ಮಾಹಿತಿ ನೀಡಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ವಿಭಾಗಾಧಿಕಾರಿ ಅಣ್ಣಪ್ಪ ಲಮಾಣಿ, ಸಹಾಯಕ ಅಭಿಯಂತರ ಎಂ.ಕೆ.ಹಿರೇಮಠ, ನಿವೃತ್ತ ಅಧಿಕಾರಿ ಸಿ.ಸಿ. ಮಾದುಶೆಟ್ಟರ, ಶಾಖಾ ಅಧಿಕಾರಿ ಜಗದೀಶ ಸಂಶಿ, ಜಗದೀಶ ವಸ್ತ್ರದ, ಚಿನ್ನಪ್ಪ ಮುತ್ನಾಳ, ಅಪ್ಪಣ್ಣ ಪಾಗಾದ ಸೇರಿದಂತೆ ಇತರರು ಇದ್ದರು. ಹೆಸ್ಕಾಂ ಅಧಿಕಾರಿ ಸಿ.ಬಿ.ಬೆಣಚಮರಡಿ ಸ್ವಾಗತಿಸಿದರು. ನೇತ್ರಾ ಚೌಗಲೇ ನಿರೂಪಿಸಿದರು.