ಬಾಲಕಿಯರ ವಿದ್ಯಾಥರ್ಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ


ಲೋಕದರ್ಶನ ವರದಿ

ರಾಣಿಬೆನ್ನೂರ28: ಸಕರ್ಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ದುರುಪಯೋಗ ಮತ್ತು ಕಳಪೆಯಾಗದಂತೆ ಎಚ್ಚರವಹಿಸುವ  ಹೊಣೆಗಾರಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲಿದೆ ಎಂದು  ಅರಣ್ಯ ಹಾಗೂ ಪರಿಸರ ಸಚಿವ ಆರ್ ಶಂಕರ ಹೇಳಿದರು. 

    ಸ್ಥಳೀಯ ಶ್ರೀರಾಮ ನಗರದಲ್ಲಿ ಜಿಪಂ, ಜಿಲ್ಲಾಡಳಿತ, ಬಿಸಿಎಂ ಜಿಲ್ಲಾ ಇಲಾಖೆ ವತಿಯಿಂದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿ ನಿಲಯದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 

    ಸುಸಜ್ಜಿತ ಮತ್ತು ಉತ್ತಮ ಕಟ್ಟಡ ನಿಮರ್ಾಣ ಮಾಡಲು ಅಧಿಕಾರಿಗಳು ಕೈಜೋಡಿಸಬೇಕು. ಇದಕ್ಕೆ ಗುತ್ತಿಗೆದಾರರ ಸಹಕಾರ ಬಹಳಷ್ಠಿದೆ. ಕಟ್ಟಡ ಆರಂಭದಿಂದ ಅಂತ್ಯದವರೆಗೂ ಗುಣಮಟ್ಟ ಪರೀಕ್ಷಿಸಬೇಕು. ಸರಕಾರದ ಯೋಜನೆಗಳು ದುರುಪಯೋಗವಾಗದಂತೆ ಎಚ್ಚರವಹಿಸುವ ಜವಾಬ್ದಾರಿಯನ್ನು ಸಾರ್ವಜನಿಕರು ಸಹ ತೆಗೆದುಕೊಳ್ಳುವುದರ ಮೂಲಕ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಬೇಕು ಎಂದರು.

   ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರದ ಯೋಜನೆಗಳ ಸದುಪಯೋಗಪಡೆದುಕೊಂಡು ಉಜ್ವಲ ಭವಿಷ್ಯ ಹೊಂದಬೇಕು ಎಂದರು. 

ತಾಪಂ ಉಪಾಧ್ಯಕ್ಷೆ ಚೈತ್ರಾ ಮಾಗನೂರ, ಬಿಸಿಎಂ ವಿಸ್ತರಣಾಧಿಕಾರಿ ವಿ.ಎಸ್.ಹಿರೇಮಠ, ಗುತ್ತಿಗೆದಾರ ಸಂದೀಪ, ಅಭಿಯಂತರ ಸತ್ಯಕುಮಾರ ದಾಸ್ ಸೇರಿದಂತೆ ವಿವಿಧ ವಸತಿ ನಿಲಯದ ಮೇಲ್ವಿಚಾರಕರು, ಸಿಬ್ಬಂದಿಗಳು ಮತ್ತಿತರರು ಇದ್ದರು.