ಅಥಣಿ: ವೇಷಭೂಷಣ ಸ್ಪರ್ಧೆಗಳಿಂದ ಶರಣರ ಪರಿಕಲ್ಪನೆ ಮೂಡುವುದು

ಲೋಕದರ್ಶನ ವರದಿ

ಅಥಣಿ 06:  ಹನ್ನೆರಡನೆ ಶತಮಾನದ ಶಿವಶರಣರ ವಚನಗಳ ಕುರಿತು ತಿಳಿದವರು ಸಾಕಷ್ಟು ಜನರಿದ್ದಾರೆ. ಆದರೆ ಅವರ ಕಾಯಕ, ಬದುಕು ಕುರಿತು ತಿಳಿಸಿಕೊಡುವ ಕಾರ್ಯವಾಗಬೇಕಿದೆ. ಶರಣರ ಕುರಿತು ಜನಸಾಮಾನ್ಯರಿಗೂ ಕಲ್ಪನೆ ಕೊಡುವಂತಹ ಕಾರ್ಯಕ್ಕೆ ವೇಷಭೂಷಣಗಳ ಸ್ಪಧರ್ೆಗಳು ಅವಶ್ಯ ಎಂದು ಮುದಗಲದ ಮಹಾಂತ ಸ್ವಾಮೀಜಿ ಅವರು ಹೇಳಿದರು.

ಸ್ಥಳೀಯ ಮೋಟಗಿಮಠದಲ್ಲಿ ಮುಕ್ತಾಯಿ ಅಕ್ಕನ ಬಳಗದ 20 ನೇ ವಾಷರ್ಿಕೋತ್ಸವ ಹಾಗೂ ಶರಣ ಸಂಸ್ಕೃತಿ ಮೇಳ 2020 ರ ಅಂಗವಾಗಿ ಮಹಿಳೆಯರಿಗಾಗಿ ಬಸವಾದಿ ಶಿವಶರಣರ ವೇಷಭೂಷಣ ಸ್ಪಧರ್ೇ ಹಮ್ಮಿಕೊಂಡ ಸಮಯದಲ್ಲಿ ಅವರು ಮೇಲಿನಂತೆ ಆಶೀರ್ವಚನ ನೀಡಿದರು. ಮಠಾಧೀಶರಾದ ಪೂಜ್ಯ ಪ್ರಭುಚನ್ನಬಸವ ಮಹಾಸ್ವಾಮೀಜಿ ಮಾತನಾಡಿ, ಮಹಿಳೆಯರೂ ಯಾರಿಗೂ ಕಡಿಮೆಯಲ್ಲ ಅದ್ಭುತ್ ಪ್ರತಿಭೆಯುಳ್ಳವರು ಅವರಿಗೆ ವೇದಿಕೆಯ ಅವಶ್ಯಕತೆ ಇದೆ. ಅದನ್ನು ಶ್ರೀಮಠ ಕಲ್ಪಸಿಕೊಡುತ್ತಿದೆ ಎಂದರು. 

ವೇಷಭೂಷಣ ಸ್ಪಧರ್ೆಯಲ್ಲಿ ಮಕ್ಕಳು, ಮಹಿಳೆಯರು ಹೀಗೆ ಎರಡು ವಿಭಾಗದಲ್ಲಿ ಹಲವಾರು ಬಸವಾದಿ ಶಿವಶರಣೆಯರಾದ ಅಣ್ಣ ಬಸವಣ್ಣ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಕದಿರೆ ರೇಮ್ಮವ್ವೆ, ಮೊದಲದ ಪಾತ್ರಗಳು ಗಮನ ಸೆಳೆದವು. ಮುದಗಲ್ ಮಹಾಂತಸ್ವಾಮೀಜಿ, ಎಂ.ಕೆ,ಸಂಕ, ರೋಹಿಣಿ ಯಾದವಾಡ ನಿಣರ್ಾಯಕರಾಗಿ ಆಗಮಿಸಿದ್ದರು. ವೈಶಾಲಿ ಮಠಪತಿ ನಿರೂಪಿಸಿದರು. ರೋಹಿಣಿ ಯಾದವಾಡ ಸ್ವಾಗತಿಸಿ ವಂದಿಸಿದರು. ವಿಶೇಷವಾಗಿ ವಚನ ಕಂಠಪಾಠ, ದೇಶಿ ಅಡುಗೆ, ಸ್ಮರಣ ಶಕ್ತಿ, ಜನಪದ ಗೀತೆ ನೃತ್ಯ ಮೊದಲಾದ ಸ್ಪಧರ್ೆಗಳನ್ನು ಕೇವಲ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಪೂಜ್ಯರು ತಿಳಿಸಿದರು.