ನವದೆಹಲಿ,
ಡಿ 19 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಕಡೆ ಪ್ರತಿಭಟನೆಯ
ಕಾವು ದಿನೆ ದಿನೇ, ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಮೈ ಕೊರೆಯುವ ಚಳಿಗೆ ಜನರು ತತ್ತರಿಸುತ್ತಿದ್ದಾರೆ. ದೆಹಲಿ
ಜೊತೆಗೆ ಉತ್ತರಪ್ರದೇಶ, ಬಿಹಾರ, ಜಮ್ಮು-ಕಾಶ್ಮೀರ,
ರಾಜಸ್ತಾನ ಪಂಜಾಬ್, ಹರಿಯಾಣ ಹಾಗೂ ಮಧ್ಯಪ್ರದೇಶದಲ್ಲಿ
ಗುರುವಾರ ದಾಖಲೆ ಪ್ರಮಾಣದ ಚಳಿ ದಾಖಲಾಗಿದೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲೀಗ ದಟ್ಟ ಮಂಜು, ಮೈಕೊರೆಯುವ
ಚಳಿ , ಕನಿಷ್ಠ ತಾಪಮಾನ 6.6 ಡಿಗ್ರಿ ಸೆಲ್ಸಿಯಸ್
ಇಳಿದಿದೆ. ಗುರುವಾರ ದೆಹಲಿಯಲ್ಲಿ ದಟ್ಟ ಮಂಜು ಕವಿದ ವಾತಾವರಣವಿದ್ದು ಪರಿಣಾಮ ಮೈ ಕೊರೆಯುವ
ಚಳಿಯಿಂದ ಪರಾಗಲು ಜನ ಬೆಂಕಿಗೆ ಮೈ ಚಾಚಿ ಕುಳಿತು ಕೊಂಡಿರುವ ದೃಶ್ಯಗಳು ಎಲ್ಲಡೆ ಸಾಮಾನ್ಯವಾಗಿ ಗೋಚರಿಸುತ್ತಿದೆ.