ಲೋಕದರ್ಶನ ವರದಿ
ಬೆಳಗಾವಿ 07: ದಿ. 4ರಂದು ಜಿ.ಎ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕವು ದತ್ತು ಗ್ರಾಮ ಮುಚ್ಚಂಡಿಯಲ್ಲಿ ವಾಷರ್ಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆವಹಿಸಿ ಪ್ರಾಚಾರ್ಯ ಆರ್.ಎಸ್.ಪಾಟೀಲ ಅವರು ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡಿದರು.
ವಿದ್ಯಾಥರ್ಿಗಳು ತಮ್ಮ ಜೀವನದ ನಿತ್ಯ ಬದುಕಿನಲ್ಲಿ ಎನ್.ಎಸ್.ಎಸ್. ನೀಡುವ ಸಂದೇಶ ಹಾಗೂ ದ್ಯೇಯೋದ್ದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಬೇಕು. ಸೇವಾ ಮನೋಭಾವ ರೂಢಿಸಿಕೊಂಡು ಬಾಳುವದರಿಂದ ಜೀವನದ ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅತಿಥಿ ಉಪನ್ಯಾಸಕರಾಗಿ ಎ.ಬಿ.ಕೊರಬುರವರು ಮಾತನಾಡಿ ಎನ್.ಎಸ್.ಎಸ್. ಬೆಳೆದು ಬಂದ ಇತಿಹಾಸವನ್ನು ವಿದ್ಯಾಥರ್ಿಗಳಿಗೆ ಮನವರಿಕೆ ಮಾಡಿಕೊಟ್ಟರು. ಗ್ರಾಮದ ಹಿರಿಯರಾದ ಯಲ್ಲಪ್ಪ ಚೌಗಲಾ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಸೋಮು ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿಗಳಾದ ಬಿ.ಎಚ್.ಮಾರದ ಸ್ವಾಗತಿಸಿದರು. ಕು. ಕಾವ್ಯಾ ಮೊರಬದ ವಂದಿಸಿದರು.