ಲೋಕದರ್ಶನವರದಿ
ಧಾರವಾಡ, ಮೇ.18 : ಉತ್ತರ ಕನರ್ಾಟಕ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಇಲ್ಲಿಗೆ ಸಮೀಪದ ತಾಲೂಕಿನ ಮರೇವಾಡ ಬಸವಣ್ಣ (ನಂದೀಶ್ವರ) ದೇವರ ವಾಷರ್ಿಕ ಜಾತ್ರಾ ಮಹೋತ್ಸವ ಶನಿವಾರ ಆಗಿಹುಣ್ಣಿಮೆಯ ದಿನ ಭಕ್ತರ ಹಷರ್ೊದ್ಗಾರಗಳ ಮಧ್ಯೆ ವೈಭವದಿಂದ ಜರುಗಿತು.
ಪ್ರಾತ:ಕಾಲದಲ್ಲಿ ಬಸವಣ್ಣ (ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿಯು ಹಿರಿಯ ವೈದಿಕರಾಗಿರುವ ವೇ.ಮೂ.ತಿಪ್ಪಯ್ಯಸ್ವಾಮಿ ಯರಗಂಬಳಿಮಠ ಮತ್ತು ಶೇಖಯ್ಯಸ್ವಾಮಿ ಹಿರೇಮಠ ಸೇರಿದಂತೆ ದೇವಾಲಯದ ಅರ್ಚಕ ಬಳಗದ ವೈದಿಕತ್ವದಲ್ಲಿ ನಡೆದವು.
ಸಂಜೆ 5.30 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಅಲಂಕೃತ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತಗಣ ಉತ್ತತ್ತಿ, ಬಾಳಿಹಣ್ಣು, ಲಿಂಬೆಹಣ್ಣುಗಳನ್ನು ರಥಕ್ಕೆ ಎಸೆದು "ಹರಹರ ಮಹಾದೇವ...ಶ್ರೀಬಸವೇಶ್ವರ ಮಹಾರಾಜಕೀ ಜೈ...ಶ್ರೀಮಹಾನಂದೀಶ್ವರ ಮಹಾರಾಜಕೀ ಜೈ..." ಎಂದೆಲ್ಲ ಜಯಘೋಷಗಳನ್ನು ಕೂಗುತ್ತಿದ್ದಂತೆ ಹಲವಾರು ಜನಪದ ವಾದ್ಯಮೇಳಗಳ ಝೇಂಕಾರದಲ್ಲಿ ರಥೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.
ರಥೋತ್ಸವದ ಕೊನೆಯಲ್ಲಿ ಅಮ್ಮಿನಬಾವಿಯ ಬಸವಣ್ಣ (ನಂದೀಶ್ವರ) ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಧರ್ಮಪ್ಪ ಪೂಜಾರ ಅವರು "ಮಳಿ-ಬೆಳಿ ಸಂಪೈತ್ರಿಪಾ...ಗುಡುಗು ಸಿಡ್ಲು ಭಾಳ ಐತ್ರಿಪಾ...ರಕ್ತದ ಕಾವಲಿ ಹರಿತೇತ್ರಿಪಾ...ನನ್ನ ತಂಗೀಗೆ ಐದು ವಾರಾ ಬಿಡ್ರಿಪಾ... ಹುಟ್ಟಿದ ಮಗೂಗೆ ಬಲಾ ಇಲ್ರಿಪಾ.." ಎಂದೆಲ್ಲ ಕಾಣರ್ಿಕ (ಹೇಳಿಕೆ) ಹೇಳಿದರು.
ಜಾತ್ರೆಯ ಅಂಗವಾಗಿ ಅಹೋರಾತ್ರಿ ಜಾನಪದ ಸಂಗೀತ ಕಲಾವಿದರಾದ ಆನಂದ ಕರಾಡೆ ಹಾಗೂ ಮಹಾಂತೇಶ ಹಡಪದ ಜಂಟಿ ನೇತೃತ್ವದಲ್ಲಿ ಸವಾಲ್-ಜವಾಬ್ ಭಜನಾ ಸ್ಪಧರ್ೆ ಜರುಗಿತು. ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಸುತ್ತಲಿನ ಹಳ್ಳಿಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.