ನವದೆಹಲಿ, ಆ 26 ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ.
ಇದೇ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ನೀಡಿದ್ದ ಭದ್ರತೆಯನ್ನೂ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಪ್ರಧಾನ ಮಂತ್ರಿ ಮತ್ತು ಮಾಜಿ ಪ್ರಧಾನಮಂತ್ರಿಗಳು ಮತ್ತು ಅತಿ ಗಣ್ಯರಿಗೆ ಒದಗಿಸಲಾಗುವ ವಿಶೇಷ ರಕ್ಷಣಾ ಗುಂಪು (ಎಸ್ಪಿಜಿ) ಭದ್ರತೆಯನ್ನು ಎಲ್ಲಾ ಏಜೆನ್ಸಿಗಳ ಪರಾಮರ್ಶಿ ಮತ್ತು ಮೌಲ್ಯಮಾಪನದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಹಿಂಪಡೆಯಲಾಗಿದೆ.
ಪ್ರಸ್ತುತ ಭದ್ರತಾ ಪರಿಶೀಲನೆಯನ್ನು ಕಾಲಕಾಲಕ್ಕೆ ನಡೆಸಲಾಗುತ್ತದೆ. ಗಣ್ಯ ವ್ಯಕ್ತಿಗಳಿಗೆ ಬೆದರಿಕೆ ಇರುವುದನ್ನು ಗ್ರಹಿಸಿ ಭದ್ರತೆಯನ್ನು ಮುಂದುವರಿಸಲಾಗುತ್ತದೆ. ಇದೊಂದು ವೃತ್ತಿಪರ ಮೌಲ್ಯಮಾಪನವನ್ನು ಆಧರಿಸಿ ನಡೆಯುವ ಪ್ರಕ್ರಿಯೆಯಾಗಿದೆ. ಡಾ. ಮನಮೋಹನ್ ಸಿಂಗ್ ಅವರಿಗೆ ಝಡ್ + ಭದ್ರತೆ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಸೋಮವಾರ ದೃಢಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆಯೇ ದೇವೇಗೌಡ ಅವರಿಂದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು.
3000ಕ್ಕೂ ಅಧಿಕ ಗಣ್ಯರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆ, ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಂಧಿ ಕುಟುಂಬದಲ್ಲಿ ಮಾತ್ರ ಉಳಿದಿದೆ.
1984ರ ಅಕ್ಟೋಬರ್ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಎಸ್ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿತ್ತು.