ರಾಣೇಬೆನ್ನೂರು: ಮೇ.21: ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಬಡವರಿಗೆ, ಕೂಲಿಕಾಮರ್ಿಕರಿಗೆ, ಕಟ್ಟಡ ಕಾಮರ್ಿಕರಿಗೆ ಸೇರಿದಂತೆ ಮತ್ತಿತರ ಸಾಮಾನ್ಯ ವರ್ಗದವರಿಗೆ ಅನೇಕ ರೀತಿಯಲ್ಲಿ ಉದ್ಯೋಗ ಸೃಷ್ಠಿ ಮಾಡಿ ಅವಕಾಶ ನೀಡಿದೆ. ಯಾರೂ ಅಧೈರ್ಯಗೊಳ್ಳದೇ, ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಾಣಿಯಂತೆ ಪ್ರತಿಯೊಬ್ಬರೂ ತಮ್ಮ-ತಮ್ಮ ಕಾಯಕದಲ್ಲಿ ನಿರತರಾಗಿ ಆತ್ಮ ಸಂತೃಪ್ತಿಯೊಂದಿಗೆ ಕೈಲಾಸವನ್ನು ಕಾಣಲು ನಿಟ್ಟಿನಲ್ಲಿ ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗುಡಗೂರ, ಹರನಗಿರಿ ಗ್ರಾಮಪಂಚಾಯಿತಿ ಪ್ರದೇಶಗಳಲ್ಲಿನ ರೈತರ ಜಮೀನಿನಲ್ಲಿ ಬದು ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕರೋನಾ ವೈರಸ್ ಕೋವಿಡ್-19 ಸೊಂಕು ರೋಗವು ವಿಶ್ವವೂ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿ ಹರಡುವ ಸೂಚನೆ ನೀಡುವುದರ ಮೂಲಕ ಜನಸಾಮಾನ್ಯರೂ ಸೇರಿದಂತೆ ಎಲ್ಲ ಹಂತದ ನಾಗರೀಕರ ಬದುಕನ್ನು ಅತಂತ್ರ ಮಾಡಿದೆ. ಇಂತಹ ಸಂದರ್ಭದಲ್ಲಿ ಸಕರ್ಾರದ ಈ ಯೋಜನೆಗಳು ಬದುಕನ್ನು ಕಟ್ಟಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ ಎಲ್ಲರೂ ಅಜರ್ಿಸಲ್ಲಿಸುವ ಮೂಲಕ ಇದರ ಉಪಯೋಗವನ್ನು ಪಡೆಯಬೇಕು ಎಂದರು.
ಕೃಷಿ ಅಧಿಕಾಋಇ ಎಚ್.ಬಿ.ಗೌಡಪ್ಪಳವರ ಮಾತನಾಡಿ ರೈತರ ಜಮೀನಿನಲ್ಲಿ ಬದು ನಿಮರ್ಾಣ ಮಾಡವುದರಿಂದ ಅನೇಕ ರೀತಿಯಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ರೈತ ಸಮುದಾಯ ಈ ಯೋಜನೆಯನ್ನು ಪಡೆಯಲು ಮುಂದಾದಾಗ ಮಾತ್ರ ಹಸಿರು ಕ್ರಾಂತಿ ಸೃಷ್ಠಿಸಲು ಸಾಧ್ಯವಿದೆ ಎಂದ ಅವರು ರೈತರು ಈ ಕುರಿತು ಇಲಾಖೆಗೆ ಅಜರ್ಿ ಸಲ್ಲಿಸಿದರೆ, ಕ್ರೀಯಾ ಯೋಜನೆ ರೂಪಿಸಿ ಕಾಮಗಾರಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಯಾರೂ ಈ ಯೋಜನೆಯಿಂದ ವಂಚಿತರಾಗಬಾರದು ಎಂದು ಅವರು ರೈತ ಸಮುದಾಯಕ್ಕೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಕೋಳ ಕ್ಷೇತ್ರದ ಜಿ.ಪಂ. ಸದಸ್ಯ ಏಕನಾಥ ಭಾನುವಳ್ಳಿ, ತಾ.ಪಂ. ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷೆ ಕಸ್ತೂರೆಮ್ಮ ಹೊನ್ನಾಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಾ.ಪಂ. ಸದಸ್ಯ ನೀಲಕಂಠಪ್ಪ ಕುಸಗೂರ, ಬಿಜೆಪಿ ಮುಖಂಡರಾದ ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ, ದೀಪಕ ಹರಪನಹಳ್ಳಿ, ಶಿವಪ್ಪ ಕುರವತ್ತಿ, ಗ್ರಾ.ಪಂ. ಅಧ್ಯಕ್ಷೆ ದೇವೆರಮ್ಮ ಮುದ್ದಿ, ಸದಸ್ಯ ನಿಂಗಪ್ಪ ಹಂಸಿ, ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಡಾ|| ಎಸ್.ಎಂ. ಕಾಂಬಳೆ, ಸಹಾಯಕ ಅಭಿಯಂತ ಅಶೋಕ ನಾರಜ್ಜಿ, ಪಿಡಿಒ ರಂಗಪ್ಪ ಕೊರಕಲಿ ಸೇರಿದಂತೆ ಮತ್ತಿತರರ ಅಧಿಕಾರಿಗಳು ಗಣ್ಯರು, ರೈತರು ಪಾಲ್ಗೊಂಡಿದ್ದರು.