ನೆಹರೂ ಜನ್ಮ ಶತಮಾನೋತ್ಸವದ, ರಾಹುಲ್ ಸ್ಮರಣೆ

ನವದೆಹಲಿ, ನ 14 :      ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂ ಅವರ ಜನ್ಮ ದಿನಾಚರಣೆಯಂದು ಅವರ ಸಾಧನೆಯನ್ನು ಸ್ಮರಿಸಿದ್ದಾರೆ.   

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನೆಹರು ಅವರ ಜನ್ಮದಿನಾಚರಣೆಯನ್ನು ನಾವು ದೇಶದ ಮೊದಲ ಪ್ರಧಾನಿ, ಅತ್ಯುತ್ತಮ ಆಡಳಿತಗಾರ, ದೂರದೃಷ್ಟಿತ್ವ ಹೊಂದಿದ್ದ ವ್ಯಕ್ತಿ, ವಿದ್ವಾಂಸ, ಸಾಂಸ್ಥಿಕ ನಿರ್ಮಾತೃ ಮತ್ತು ಆಧುನಿಕ ಭಾರತದ ಶಿಲ್ಪಿಯನ್ನು ಸ್ಮರಿಸಬೇಕು ಎಂದಿದ್ದಾರೆ.   

ಇದಕ್ಕೆ  ರಾಹುಲ್ 'ನೇತಾಜಿಯ ಸ್ಮರಣೆ' ಎಂಬ ಹ್ಯಾಷ್ ಟ್ಯಾಗ್ ಅನ್ನು ಬಳಸಿದ್ದಾರೆ.