ನಾಗಾಲ್ಯಾಂಡ್ನಲ್ಲಿ ಈವರೆಗೆ ಕೊವಿದ್ -19 ಪ್ರಕರಣ ದೃಢಪಟ್ಟಿಲ್ಲ-ರಾಜ್ಯ ಸರ್ಕಾರ

ಕೊಹಿಮಾ, ಏಪ್ರಿಲ್ 04, ರಾಜ್ಯದಲ್ಲಿ ಈವರೆಗೆ  ಕೊರೊನವೈರಸ್(ಕೊವಿದ್-19) ಸೋಂಕಿನ ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ನಾಗಾಲ್ಯಾಂಡ್ ಸರ್ಕಾರ ತಿಳಿಸಿದೆ.ರಾಜ್ಯದಲ್ಲಿ ಶಂಕಿತ ಕರೋನವೈರಸ್ ನ ಶಂಕಿತ  ಪ್ರಕರಣಗಳ 41 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಈ ಪೈಕಿ 32 ಮಾದರಿಗಳಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಉಳಿದಂತೆ 9 ಪ್ರಕರಣಗಳ ಪರೀಕ್ಷಾ ವರದಿಗಳನ್ನು  ನಿರೀಕ್ಷಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 3,332 ಜನರು ರಾಜ್ಯದಲ್ಲಿ ಸಂಪರ್ಕತಡೆ(ಕ್ವಾರಂಟೈನ್)ಯಲ್ಲಿದ್ದಾರೆ ಎಂದು ಸರ್ಕಾರದ ವಕ್ತಾರ ಹಾಗೂ  ಯೋಜನಾ ಸಮನ್ವಯ ಮತ್ತು ಭೂ ಕಂದಾಯ ಸಚಿವ ನೀಬಾ ಕ್ರೋನು ತಿಳಿಸಿದ್ದಾರೆ.
ಒಟ್ಟು 4,715 ಜನರು ‘ಕೊವಿದ್ -19 ನಾಗಾಲ್ಯಾಂಡ್’ ಆ್ಯಪ್ ಬಳಸಿ ಸಹಿ ಹಾಕಿದ್ದಾರೆ. ಈ ಪೈಕಿ 3,327 ವ್ಯಕ್ತಿಗಳು ವಿವರಗಳೊಂದಿಗೆ ರೋಗ ಲಕ್ಷಣ ಇರುವ ಶಂಕೆಯ ಬಗ್ಗೆ ಸ್ವಯಂ ಘೋಷಣೆ ಮಾಡಿದ್ದಾರೆ.  ಕಳೆದ ಮಾರ್ಚ್ 6 ರ ನಂತರ ರಾಜ್ಯಕ್ಕೆ ಪ್ರವೇಶಿಸಿದವರು ಸಂಪೂರ್ಣ ವಿವರಗಳೊಂದಿಗೆ ಆಪ್ನಲ್ಲಿ ಸ್ವಯಂಪ್ರೇರಣೆಯಿಂದ ನೋಂದಾಯಿಸಲು ಮನವಿ ಮಾಡಿರುವುದಾಗಿ ಸಚಿವರು ತಿಳಿಸಿದ್ದಾರೆ.ನವದೆಹಲಿಯ ನಿಜಾಮುದ್ದೀನ್ನಲ್ಲಿನ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿರಬಹುದಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ಮತ್ತು ಕೊವಿದ್-19 ತಡೆಗೆ ಸ್ಥಾಪಿಸಲಾಗಿರುವ ರಾಜ್ಯ ನಿಯಂತ್ರಣ ಕೊಠಡಿ ಪ್ರತ್ಯೇಕವಾಗಿ ಕೆಲಸ ಮಾಡುತ್ತಿವೆ. ಇದರಿಂದ ಪಟ್ಟಿಯಲ್ಲಿದ್ದ 70 ಜನರ ಪೈಕಿ 62 ಜನರನ್ನು ಸಂಪರ್ಕಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.