ಗುಳೇದಗುಡ್ಡ ತಹಶೀಲ್ದಾರರಿಗೆ ಬಂತು ಕಾರ್

ಗುಳೇದಗುಡ್ಡ18:  ಗುಳೇದಗುಡ್ಡ ತಾಲೂಕಾ ಕೇಂದ್ರವಾಗಿ ಎರಡು ವರ್ಷಗಳೇ ಗತಿಸಿದರೂ ತಾಲೂಕಾ ಕೇಂದ್ರ ಸ್ಥಳದಿಂದ ಜಿಲ್ಲಾ ಕೇಂದ್ರಕ್ಕೆ ಹಾಗೂ ತಾಲೂಕಿನ ಗ್ರಾಮಗಳಿಗೆ ಸಂಪರ್ಕಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಹಶೀಲ್ದಾರರಿಗೆ ಸ್ವಂತ ವಾಹನ ಸೌಕರ್ಯವೇ ಇರಲಿಲ್ಲ. ಹೀಗಾಗಿ ತಾಲೂಕಿನ ದಂಡಾಧಿಕಾರಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿತ್ತು. 

        ಸಕರ್ಾರ ಈ ಸಮಸ್ಯೆಗೆ ಈಗ ಕಣ್ಣು ತೆರೆದಂತಿದೆ. ಬುಧುವಾರ ಬಾಗಲಕೋಟೆಯ ಜಿಲ್ಲಾಡಳಿತ ಕಚೇರಿಯಲ್ಲಿ ಗುಳೇದಗುಡ್ಡದ ತಹಶೀಲ್ದಾರರಿಗೆ ಸರ್ಕಾರ  ಕಾರ್ ನೀಡಿದ್ದು ತಾಲೂಕಿನ ಜನರಿಗೆ ಹರ್ಷತಂದಿದೆ. ಸಕರ್ಾರದ ಕಾರ್ಯಚಟುವಟಿಕೆಗಳು ತ್ವರಿತಗತಿಯಲ್ಲಿ ಆಗಲು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಲು ವಾಹನ ಅನುಕೂಲವಾಗಿದೆ ಎಂದು ತಾಲೂಕಾ ಕಚೇರಿಯ ಸಿಬ್ಬಂದಿಗಳು ಹೇಳುತ್ತಾರೆ.