ಗದಗ 07: ಸಿದ್ದರಾಮಯ್ಯನವರು ಮಂಡಿಸಿದ ಇವತ್ತಿನ ಬಜೆಟ್ ಜನಪರ, ರೈತರ, ಮಹಿಳೆಯರ ಮತ್ತು ಎಲ್ಲಾ ವರ್ಗದವರ ಪರವಾಗಿದೆ. ರೈತರಿಗಾಗಿ ಕೃಷಿ ಹೊಂಡ, ಗಂಗಾ ಕಲ್ಯಾಣ ಬೋರ್ವೆಲ್ ವಿದ್ಯುತ್ತೀಕರಣ, ಸಿರಿಧಾನ್ಯ, ಕಡಿಮೆ ದರದಲ್ಲಿ ಕೃಷಿ ಉಪಕರಣಗಳು, ಕೃಷಿ ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ನೀರಾವರಿಗೆ ಗದಗ ಮತ್ತು ಡಂಬಳದಲ್ಲಿ ತೋಟಗಾರಿಕೆ ಕಾಲೇಜ್, ಇತರೆ ಜಿಲ್ಲೆಗಳಲ್ಲಿ ಕೃಷಿ ಕಾಲೇಜ್, ಕೃಷಿ ಸಂಶೋಧನಾ ಕೇಂದ್ರ, ಇದರೊಂದಿಗೆ ಹಲವಾರು ಯೋಜನೆಗಳನ್ನು ಒಳಗೊಂಡ ರೈತರ ಪರವಾಗಿರುವ ಬಜೆಟ್ ಮಂಡಿಸಿದ್ದಾರೆ.
ಗೃಹಲಕ್ಷ್ಮಿ, ಗ್ರಹ ಜ್ಯೋತಿಗೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇತರೆ ಎಲ್ಲ ಇಲಾಖೆಗಳಿಗೆ ಅನುಕೂಲಕರವಾದ ಬಜೆಟ್ ಮಂಡಿಸಿದ್ದಾರೆ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಆಶಾ ಕಾರ್ಯಕರ್ತರು, ಉಪನ್ಯಾಸಕ ಶಿಕ್ಷಕರು, ಅಡಿಗೆ ಸಹಾಯಕರಿಗೆ ಗೌರವಧನ ಹೆಚ್ಚಿಸಿದ್ದಾರೆ. ಮಹಿಳೆಯರಿಗೆ ಕ್ಯಾನ್ಸರ್ ತಡೆಗಟ್ಟುವ ಉಚಿತ ಲಸಿಕೆ, ವಾತ್ಸಲ್ಯ ಕಿಟ್ಟುಗಳು ಮತ್ತು ಹೆರಿಗೆ ಸಮಯದಲ್ಲಿ ವಿಶೇಷವಾದ ತಂತ್ರಜ್ಞಾನ ತಾಯಿ ಮಕ್ಕಳ ಮರಣ ತಡೆಗಟ್ಟಲು ರೂ.320 ಕೋಟಿ ರೂಪಾಯಿ ಅನುದಾನ ಮಹಿಳಾ ಸ್ವಸಹಾಯ ಸಂಘಗಳಿಗೆ ಇಂದಿರಾ ಕ್ಯಾಂಟೀನ್ ಮಹಿಳಾ ಸಂಘ ಸಂಸ್ಥೆಗಳಿಗೆ ಅಕ್ಕ ಸೌಹಾರ್ದ ಸಂಸ್ಥೆಯಿಂದ ನೆರವು 75 ವರ್ಷಗಳ ಮೇಲ್ಪಟ್ಟವರಿಗೆ ಪಡಿತರ ಆಹಾರವನ್ನು ಮನೆಗೆ ಪೂರೈಸುವುದು ಎಲ್ಲಾ ಸಮುದಾಯದ ಜನಾಂಗಕ್ಕೂ ಮತ್ತು ಸಮಗ್ರ ಅಭಿವೃದ್ಧಿ ಯೋಜನೆಗೆ ಒಳ್ಳೆಯ ಜನಪರ ಬಜೆಟ್ಟನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ ಅಧ್ಯಕ್ಷರಾದ ನೀಲಮ್ಮ ಬೋಳನವರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.