ದುರ್ಗಮ್ಮ ಗುಡಿ ಬಳಿ ಇರುವ ಬ್ರಿಡ್ಜ್ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡುವಂತೆ ಒತ್ತಾಯ
ಬಳ್ಳಾರಿ 28: ನಗರದ ಧುರ್ಗಮ್ಮಗುಡಿ ಬಳಿಯ ರೈಲ್ವೇ ಅಂಡರ್ ಬ್ರಿಡ್ಜ್ ನ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಬೇಕೆಂದು ಆಗ್ರಹಿಸಿ ಇಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ವಾದಿ)ದ ತಾಲುಕಾ ಸಮಿತಿ ಪ್ರತಿಭಟನೆ ನಡೆಸಿತು.ರಸ್ತೆ ನಿರ್ಮಾಣ ಕಾಮಗಾರಿ ಮುಗಿದಿದ್ದು. ಜ.26 ರಂದು ವಾಹನಗಳ ಸಂಚಾರಕ್ಕೆ ಮುಕ್ತ ಮಾಡಲಿದೆ ಎಂದು ನಗರದ ಶಾಸಕರ ಬೆಂಬಲಿಗರೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿ ಬಿಟ್ಟಿದ್ದರು.
ಆದೇ ಮಾಡಲಿಲ್ಲ.ಅಂದಾಜು ಒಂದು ಕೋಟಿ 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಿತಿ ಕೇಂದ್ರವು ರೆಡ್ ಇನ್ಪ್ರಾ ಗುತ್ತಿಗೆದಾರರ ಮೂಲಕ ಈ ರಸ್ತೆ ಅಭಿವೃದ್ದಿ ಮಾಡಿದೆ. ಕಾಂಕ್ರೀಟ್ ರಸ್ತೆ ಇದಾಗಿದ್ದು. ಇಕ್ಕೆಲಗಳಲ್ಲಿ ಪುಟ್ ಪಾಥ್ ನಿರ್ಮಾಣ ಮಾಡಿದೆ. ಲೈಟಿಂಗ್ ವ್ಯವಸ್ಥೆ ಇನ್ನೂ ಆಗಬೇಕಿದೆ.ರಸ್ತೆ ದುರಸ್ಥಿಗೋಸ್ಕರ ವಾಹನಗಳ ಸಂಚಾರ ಬಂದ್ ಮಾಡಿರುವು ದರಿಂದ ಇತರೇ ರಸ್ತೆಗಳಲ್ಲಿ ಟ್ರಾಫಿಕ್ ಒತ್ತಡ ಹೆಚ್ಚಿದೆ. ಇಂದು ಮುಗಿಯಲಿದೆ, ನಾಳೆ ಮುಗಿಯಲಿದೆ ಎನ್ನುತ್ತ. ಜ.26 ರಂದು ಸಹ ಇದಕ್ಕೆ ಮುಕ್ತಿ ದೊರೆಯುಲಿಲ್ಲರಸ್ತೆಯ ಎರೆಡು ಬದಿಯಲ್ಲಿನ ಗೋಡೆಗೆ ವಿವಿಧ ವರ್ಣದ ಚಿತ್ತಾರ ಬಿಡಿಸಲಾಗಿದೆ.ಇದನ್ನು ಸ್ವಾಗತ ಮಾಡುತ್ತಿದೆ.
ಈ ರಸ್ತೆ ಬಂದ್ ಮಾಡಿ 2 ತಿಂಗಳು ಮೇಲೇ ಆಗಿದ್ದು ಸಾರ್ವಜನಿಕರು ಓಡಾಡಲು ತುಂಬಾ ಕಷ್ಟ ವಾಗಿದೆ . ಅದಕ್ಕಾಗಿ ಕೂಡಲೇ ವಾಹನಗಳ ಸಂಚಾರಕ್ಕೆ ಅನುವು ಮಾಡಬೇಕು ಎಂದು ನಗರದ ಶಾಸಕರನ್ನು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಜೆ ಚಂದ್ರ ಕುಮಾರಿ, ಯು. ಯರ್ರಿಸ್ವಾಮಿ , ಜೆ. ಸತ್ಯಬಾಬು, ಬೈಲ ಹನುಮಂತ, ಜಿ.ಎನ್. ಯರ್ರಿಸ್ವಾಮಿ, ತಿಪ್ಪೇರುದ್ರ, ಪೆದ್ದನ್ನ, ನವೀನ್ ಬಿಪಿ,ವೆಂಕಟೇಶ್, ಪಾಂಡುರಂಗ, ಅರುಣಾ, ಜಿ ಎಸ್ ಮೂರ್ತಿ ಸಾರ್ವಜನಿಕರು ಇತರರು ಭಾಗವಹಿಸಿದ್ದರು.