ಪುಸ್ತಕ ಮಾನವನ ಸ್ನೇಹಿಯಾಗಿದೆ: ಸಂಸದ ಸಂಗಣ್ಣ

ಕೊಪ್ಪಳ 24: ಮನಸ್ಸಿನಲ್ಲಿ ಮೌಲ್ಯಗಳನ್ನು ಬಿತ್ತುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಪುಸ್ತಕವು ಮಾನವನ ಸ್ನೇಹಿಯಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. 

ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರದ (26ನೇ ವಾಡರ್್) ಗಣೇಶ ನಗರದಲ್ಲಿ ಇಂದು (ಫೆ.25) ನಡೆದ ಜಿಲ್ಲಾ ಕೇಂದ್ರ ಗ್ರಂಥಾಲಯ, ನೂತನ ಗ್ರಂಥಾಲಯ ಕಟ್ಟಡ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಪುಸ್ತಕ ಪ್ರದರ್ಶನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  

ಪುಸ್ತಕ ಉತ್ತಮ ಸ್ನೇಹಿತ, ಮೈಮೇಲೆ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂಬ ಬಂಕಿಮಚಂದ್ರ ಚಟಜರ್ಿ ಅವರ ಮಾತಿನಂತೆ ಇಂದಿನ ಯುವ ಪೀಳಿಗೆ ಓದುವ ಹವ್ಯಾಸ ಬೆಳೆಸಿಕೊಂಡು ಉತ್ತಮ ಓದುಗರಾಗಿ ಜೀವನದಲ್ಲಿ ಯಶಸ್ಸು ಗಳಿಸಬೇಕು.  ನಿರಂತರ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು. ಉನ್ನತ ಹುದ್ದೆ ಪಡೆಯಲು ಗ್ರಂಥಾಲಯಗಳು ಸಹಕಾರಿಯಾಗಿವೆ. ಗ್ರಂಥಾಲಯಗಳು ಹೆಚ್ಚಿನ ರೀತಿಯಲ್ಲಿ ಬೆಳೆದರೆ ಮಾತ್ರ ಸಾಮಾಜಿಕವಾಗಿ ಅರಿವು ಮೂಡಿಸಲು ಹಾಗೂ ಶಿಕ್ಷಣ ಜ್ಞಾನ ವಿಸ್ತರಿಸಲು ಸಹಕಾರಿಯಾಗುತ್ತದೆ.  ಈ ನಿಟ್ಟಿನಲ್ಲಿ ಕೊಪ್ಪಳ ನಗರದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ, ನೂತನ ಗ್ರಂಥಾಲಯ ಕಟ್ಟಡ ಮತ್ತು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದ್ದು, ಒಂದು ಉತ್ತಮ ಬೆಳವಣಿಗೆಯಾಗಿದೆ.  ಎಲ್ಲರೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.  

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಗ್ರಂಥಾಲಯಗಳು ಉತ್ತಮ ವಾತಾವರಣವನ್ನು ಹಾಗೂ ನಮ್ಮ  ಓದಿನ ತುಡಿತವನ್ನು ಹೆಚ್ಚಿಸುತ್ತದೆ. ಕೊಪ್ಪಳದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗ್ರಂಥಾಲಯಗಳು ತೆರೆಯಲಿವೆ. ಡಿಜಿಟಲ್, ಮಕ್ಕಳ ಹಾಗೂ ಇನ್ನಿತರ ಸ್ಪಧರ್ಾತ್ಮಕ ಗ್ರಂಥಾಲಯಗಳನ್ನು ತೆರೆಯಲಾಗುವುದು. ಕೊಪ್ಪಳದ ಓದುಗರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿದರ್ೇಶಕ ಡಾ. ಸತೀಶಕುಮಾರ ಹೊಸಮನಿ, ಸಾರ್ವಜನಿಕ ಗ್ರಂಥಾಲಯಗಳು ಶ್ರೀಸಾಮಾನ್ಯನ ವಿಶ್ವವಿದ್ಯಾಲಯವಿದ್ದಂತೆ. ಸಾರ್ವಜನಿಕರಿಗೆ ಸ್ಪಧರ್ಾತ್ಮಕ ಓದುಗರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಾರ್ವಜನಿಕ ಗ್ರಂಥಾಲಯಗಳು ಸೇವೆ ಒದಗಿಸುತ್ತಿವೆ ಎಂದು ಹೇಳಿದರು. 

ನೂತನ ಕಟ್ಟಡವನ್ನು ಸಂಸದರಾದ ಸಂಗಣ್ಣ ಕರಡಿ ಉದ್ಘಾಟಿಸಿದರೆ, ಡಿಜಿಟಲ್ ಗ್ರಂಥಾಲಯಕ್ಕೆ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು. ಪುಸ್ತಕ ಪ್ರದರ್ಶನಕ್ಕೆ 26ನೇ ವಾರ್ಡನ ನಗರಸಭೆ ಸದಸ್ಯೆ ದೇವಕ್ಕ ಲಕ್ಷ್ಮಣ ಕಂದಾರಿ ಚಾಲನೆ ನೀಡಿದರು.  

ಸಮಾರಂಭದಲ್ಲಿ ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ, ಅಮ್ಜದ್ ಪಟೇಲ್, ಗಣ್ಯರಾದ ಸುರೇಶ ಭೂಮರೆಡ್ಡಿ,  ಜುಲ್ಲು ಖಾದ್ರಿ, ಕಾಟನ್ಪಾಷಾ, ಹಾಲೇಶ ಕಂದಾರಿ, ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು. ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಡಾ.ಮಹಾಂತೇಶ ಮಲ್ಲನಗೌಡರ, ಹನುಮಂತಪ್ಪ ಅಂಡಗಿ, ಬಸವರಾಜ ಆಕಳವಾಡಿ, ವಿಜಯ ಅಮೃತರಾಜ್, ಆರ್.ಎಮ್. ಪಾಟೀಲ್, ಗದಗ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ವೆಂಕಟೇಶ್ವರಿ, ಹೊಸಪೇಟೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜರೀನಾತಾಜ್, ಪ್ರಥಮದಜರ್ೆ ಸಹಾಯಕ ನರಸಿಂಹಮೂರ್ತಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿ, ಕೊಪ್ಪಳ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.  ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಗೌಡ ಹಳ್ಯಾಳ ವಂದಿಸಿದರು.