ಇಂಡಿ 20: ತಾಲ್ಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಆ ಶಾಲೆಯ ಗುರುಮಾತೆ ನೇತ್ರಾವತಿ ಕವಟಿಗಿ ಅವರು ನನಗೆ ಮಕ್ಕಳು ಅಂದರೆ ಪಂಚ ಪ್ರಾಣ, ಮಕ್ಕಳೆ ನನ್ನ ಪಾಲಿನ ದೇವರು, ನಾನು ದಿನಾಲೂ ಮಕ್ಕಳೊಂದಿಗೆ ಅನುನ್ಯವಾದ ಬಾಂಧವ್ಯವನ್ನು ಇಟ್ಟು ಕೊಂಡು ಮಕ್ಕಳಿಗೆ ಸಂಸ್ಕಾರಯುತ್ತವಾದ ಶಿಕ್ಷಣ ನೀಡುತ್ತಿದ್ದೆ,ಈಗ ಆ ಮಕ್ಕಳು ನನ್ನನು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಶಾಲೆಗೆ ಹೋಗುತ್ತಿದ್ದಾರೆ. ಅವರನ್ನು ಬಿಟ್ಟು ಕೊಡಲು ನನಗೆ ತುಂಬಾ ನೋವುಂಟು ಆಗುತ್ತಿದೆ ಎಂದು ಮಕ್ಕಳನ್ನು ಅಪ್ಪಿಕೊಂಡು ಕಣ್ಣಿರಿಟ್ಟರು. ಈ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಸುರೇಶ್ ಭಜಂತ್ರಿ ಅವರು ಮಾತನಾಡಿ ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಪ್ರಜೆಗಳು, ಮಕ್ಕಳು ಸಸತ ಪರಿಶ್ರಮ ಪಟ್ಟು ವಿದ್ಯಾ ಅಭ್ಯಾಸ ಮಾಡಿ, ಒಂದು ಗುರಿ ಮುಟ್ಟಬೇಕು ಹಾಗೂ ತಂದೆ ತಾಯಿ ರುಣ ಮುಟ್ಟಿಸಿ, ಈ ಸಮಾಜಕ್ಕೆ ಮಾದರಿಯಾಗಿ ಹುಟ್ಟಿದ ಊರಿನ ರುಣ ಮುಟ್ಟಿಸುವಂತಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರಾದ ಸಚೀನ ಇಂಡಿ ಹಾಗೂ ಗಣೇಶ ನಗರ ಶಾಲೆಯ ಮುಖ್ಯಗುರುಗಳಾದ ಎಸ್ ಎಂ ವಂದಾಲ್, ಗೊಳ್ಳಗಿ ಶಾಲೆಯ ಮುಖ್ಯಗುರುಗಳಾದ ಡಿ ಜಿ ರಾಠೋಡ, ಗಣವಲಗಾ ಶಾಲೆಯ ಮುಖ್ಯಗುರುಗಳಾದ ಎ ಎಸ್ ಬಡಿಗೇರ ಸೇರಿದಂತೆ ಅನೇಕರು ಮಾತನಾಡಿದರು. ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ ಮುಖ್ಯ ಗುರುಗಳಾದ ಎಸ್ ಜಿ ನಾರಯನಕರ, ಎನ್ ಸಿ ಕುಂಬಾರ ಆ ಶಾಲೆಯ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ತಾರಾಪೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಮಾನಂದ ಡಂಗಿ ಅವರು ಸ್ವಾಗತಿಸಿ ನಿರೂಪಿಸಿದರು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.