ಕೃಷ್ಣಾ ನದಿಗೆ ಬಿದ್ದ ವ್ಯಕ್ತಿ ಶವ ಪತ್ತೆ

ಜಮಖಂಡಿ 19: ತಾಲೂಕಿನ ಆಲಗೂರ ಗ್ರಾಮದ ವ್ಯಕ್ತಿಯೊಬ್ಬರು ಕೃಷ್ಣಾ ನದಿಯಲ್ಲಿ ಬಿದ್ದಿರುವ ಹಿನ್ನಲೆ ಕಳೆದೆರಡು ದಿನಗಳಿಂದ ಶವ ಪತ್ತೆ ಕಾರ್ಯಾಚರಣೆಯನ್ನು ಅಗ್ನಿಶಾಮಕ ದಳದವರು ನಡೆಸಿದ್ದಾರೆ. 

ಚೇತನ ವಿದ್ಯಾಧರ ಕರವೆ (33) ಕೆಎಸ್‌ಆರ್‌ಟಿಸಿ. ಕೆಲಸ ನಿರ್ವಹಿಸುತ್ತಿದ್ದು. ಜಾರ್ಜರ್ ಸ್ಕೂಟಿಯ ಮೇಲೆ ಚಿಕ್ಕಪಡಸಲಗಿ ಮಾರ್ಗದಿಂದ ಜಮಖಂಡಿ ಮಾರ್ಗವಾಗಿ ಬರುವ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡದ ರಭಸಕ್ಕೆ ನದಿಗೆ ಹಾರಿ ಬಿದ್ದಿದ್ದಾನೆಂದು ಸಾರ್ವಜನಿಕ ವಲಯದಿಂದ ಕೇಳಿ ಬಂದಿರುತ್ತದೆ. 

ಕಳೆದ ಎರಡು ದಿನಗಳ ಕಾಲ ಅಗ್ನಿಶಾಮಕ ದಳದವರು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮೂರನೇ ದಿನದಂದು ಕವಟಗಿ ಗ್ರಾಮದ ಕೃಷ್ಣಾ ನದಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ. 

ಆಲಗೂರ ಗ್ರಾಮದ ಚೇತನ ವಿದ್ಯಾಧರ ಕರವೆ (33) ಸಾವಿನ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿರುವುದಿಲ್ಲ.  ಈ ಕುರಿತು ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. 

ಶವ ಕಾರ್ಯಾಚರಣೆಯ ಸ್ಥಳದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ಸಾವಳಗಿ ಪಿಎಸ್‌ಐ ಶಿವಾನಂದ ಕೆ, ಶಿಂಗನ್ನವರ, ಹೆಡ್ ಕಾನಸ್ಟೇಬಲ್ ದಾನಪ್ಪಗೋಳ, ಪೇದೆ ಆರ್, ಎಚ್, ಮುಲ್ಲಾ ಇದ್ದು. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಶವ ಪತ್ತೆಯಾಗಿದೆಂದು ಮಾಹಿತಿ ಲಭ್ಯವಾಗಿದೆ.