ಬೈಲಹೊಂಗಲ: ಜಗತ್ತಿನ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದದ್ದು

ಲೋಕದರ್ಶನ ವರದಿ

ಬೈಲಹೊಂಗಲ 20:  ಜಗತ್ತಿನ 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು ಪರೋಪಕಾರಿಯಾಗಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

    ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಡೆದ ಗುರು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ, ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 15 ನೇ ಪುಣ್ಯ ಸ್ಮರಣೋತ್ಸವ, ಜನ ಜಾಗೃತಿ ಧರ್ಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಬಾರತ ಋಷಿ ಮೂಲದಿಂದ ಬಂದಂತ ರಾಷ್ಟ್ರವಾಗಿದ್ದು ಇಲ್ಲಿನ ಆಚಾರ-ವಿಚಾರಗಳು ಎಂದಿಗೂ ಮರೆ ಮಾಚಬಾರದು. ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವಂತಹ ಬುದ್ಧಿಶಕ್ತಿಯನ್ನು ಸಹ ಇಲ್ಲಿನ ಜನರು ಹೊಂದಿದ್ದು ಗುರುವಿನ ಮಾರ್ಗದಲ್ಲಿ ಸಾಗಿ ನಡೆಯಬೇಕೆಂದರು.

    ಬೆಳಗಾವಿಯ ವಚನಾಮೃತ ಮಂದಿರದ ನಿಶ್ಚಲ ಸ್ವರೂಪ ಗೂರೂಜಿ ಮಾತನಾಡಿ,  ಸಂಗೊಳ್ಳಿ ಗ್ರಾಮ ಐತಿಹಾಸಿಕ ಪುಣ್ಯ ಭೂಮಿಯಾಗಿದ್ದು ಶ್ರೀಮಠದಿಂದ ನಿತ್ಯ ಹಲವು ವಿಧಾಯಕ ಕಾರ್ಯಗಳು ನಡೆಯುತ್ತಿರುವದು ಹೆಮ್ಮೆಯಾಗಿದೆ. ಮಠ ಮಂದಿರಗಳು ಸಮಾಜ ತಿದ್ದುವ ಬಹುದೊಡ್ಡ ಶಕ್ತಿ ಹೊಂದಿದ್ದು ಧರ್ಮದ ಆಚರಣೆ ಪ್ರತಿಯೊಬ್ಬರಲ್ಲೂ ಮೂಡಿದಾಗ ನೆಮ್ಮದಿಯ ಜೀವನ ಕಾಣಬಹುದಾಗಿದೆ ಎಂದರು.

    ಸಂಗೊಳ್ಳಿಯ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವೇದಿಕೆಯ ಮೇಲೆ ಹೂಲಿ ಸಾಂಬಯ್ಯನವರಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಬ್ಬಿಗೇರಿ ಹಿರೇಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಏಣಗಿ ಹೂಲಿಮಠದ ವೇ.ವೀರುಪಾಕ್ಷಯ್ಯ ಅಜ್ಜ, ಆರಾದ್ರಿಮಠದ ಮಹಾಂತೇಶ ಶಾಸ್ತ್ರೀ, ಗ್ರಾ.ಪಂ. ಅಧ್ಯಕ್ಷ್ಯೆ ಯಲ್ಲವ್ವಾ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಡಾ. ಬಸವರಾಜ ಹಿರೇಮಠ, ಸುನೀಲ ಮರಕುಂಬಿ, ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು. 

ನಿವೃತ ಪ್ರಾಧ್ಯಾಪಕ ರಾಮಲಿಂಗಪ್ಪ ರುದ್ರಾಪೂರ, ಖ್ಯಾತ ಉದ್ಯಮಿ ವಿಜಯ ಮೆಟಗುಡ್, ಸವಣೂರಿನ ಯುವ ಸಾಹಿತಿ ಡಾ.ಗುರುಪಾದಯ್ಯ ಹಿರೇಮಠ, ಸಂಗೊಳ್ಳಿಯ ಮಾಜಿ ಸೈನಿಕ ಶ್ರೀಕಾಂತ ಹೂಗಾರ, ದೊಡ್ಡಬಳ್ಳಾಪೂರದ ಡಾ.ಅಮೃತಕುಮಾರ ಹಿರೇಮಠ ಇವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕೇಂದ್ರದ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ ಹಾಗೂ ಇನಾಂಹೊಂಗಲದ ಬಸವಣೆವ್ವ ಕಡಗದ ಹಾರುಗೊಪ್ಪದ ದೊಡ್ಡರುದ್ರಪ್ಪ ಬೆಡಸೂರ, ಕಜಾಪ ತಾಲೂಕಾ ವಕ್ತಾರ ಮಹಾಂತೇಶ ರಾಜಗೋಳಿ, ಶ್ರೀಮಠದಲ್ಲಿ ಸೇವೆಗೈದ ಸದ್ಭಕ್ತರನ್ನು ಸತ್ಕರಿಸಲಾಯಿತು. 

ಇದಕ್ಕೂ ಮುಂಚೆ ಪ್ರಾತ:ಕಾಲ ಪಂಚಾಚಾರ್ಯ ಧ್ವಜಾರೋಹನ, ಲಿಂಗೈಕ್ಯ ಕತರ್ು ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರುದ್ರಹೋಮ, ಮಹಾಮಂಗಳಾರತಿ ಮತ್ತು ಲಿಂ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಶ್ರೀಗಳ ಭಾವಚಿತ್ರ ಮೆರವಣಿಗೆ ಸಕಲ ವಾದ್ಯ ವೈಭವ ಕಲಾಮೇಳ, ಪೂರ್ಣಕುಂಭದಾರತಿ, ಕಳಸ ಕನ್ನಡಿದೊಂದಿಗೆ ಅದ್ದೂರಿಯಾಗಿ ಜರುಗಿತು. ವೈಧಿಕ ನೇತೃತ್ವವನ್ನು ಕಲ್ಲಸುತಗಟ್ಟಿ ಹಿರೇಮಠದ ಸಿದ್ದಲಿಂಗ ದೇವರು, ಉದಯಶಾಸ್ತ್ರಿ ಹಿರೇಮಠ, ಸದಾನಂದ ಶಾಸ್ತ್ರೀ ಹಿರೇಮಠ, ಶ್ರೀಶೈಲ ಶಾಸ್ತ್ರೀ, ಅಜ್ಜಯ್ಯಶಾಸ್ತ್ರೀ, ನೀಲಕಂಠಯ್ಯ ಹಿರೇಮಠ, ಅಕ್ಷಯ ಹಿರೇಮಠ, ಪೂಜೆಯ ವಿಧಿ-ವಿದಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗುರುಪಾದ ಕಳ್ಳಿ, ಮಡಿವಾಳಪ್ಪ ಹೋಟಿ, ಸಂಜಯ ಗಿರೆಪ್ಪಗೌಡರ, ಉಮೇಶ ಲಾಳ ಹಾಗೂ ಗ್ರಾಮದ ಹಿರಿಯರು, ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು. ವೇ.ಶಿವರುದ್ರಯ್ಯ ಹಿರೇಮಠ ಸ್ವಾಗತಿಸಿದರು. ಚೆನ್ನಪ್ಪ ಹಕ್ಕಿ ನಿರೂಪಿಸಿದರು. ಅಭೀಷೇಕ ಹಿರೇಮಠ ವಂದಿಸಿದರು. ನಂತರ ಮಹಾಪ್ರಸಾದ ಜರುಗಿತು.