ತರಬೇತಿಗಳ ಲಾಭ ಪಡೆದು ಸ್ವಯಂ ಉದ್ಯೋಗಿಗಳಾಗಬೇಕು: ದರಬಾರ

ಲೋಕದರ್ಶನ ವರದಿ

ವಿಜಯಪುರ 23: ಪ್ರತಿಯೊಬ್ಬರು ಕೇವಲ ಸರಕಾರಿ ನೌಕಾರಿ ಬೇಕೆಂದು ಕುಳಿತುಕೊಳ್ಳದೆ, ವಿದ್ಯಾಥರ್ಿದಿಶೆಯಿಂದಲೆ ಸ್ವಯಂ ಉದ್ಯೋಗಿಗಳಾಗಬೇಕು, ಆ ಮೂಲಕ ಹಣಕ್ಕಾಗಿ ಮನೆಯರಿಗೆ ಅವಲಂಬಿತ ಆಗದೆ ಹಾಗೂ ನಾಲ್ಕು ಜನರಿಗೆ ಉದ್ಯೋಗ ನಿಡುವ ಹಾಗೆ ಬೇಳೆಯಬೇಕು ಈ ದಿಶೆಯಲ್ಲಿ ಕೌಶಲ್ಯ ಅಭಿವೃಧ್ಧಿ ಕೇಂದ್ರಗಳಿಂದ ಸಿಗುವ ಉಚಿತ ತಬೇತಿಗಳ ಲಾಭ ಪಡೆಯಬೇಕೆಂದು ನಗರದ ವಿ.ವಿ ಸಂಘದ ಆಡಳಿತ ಮಂಡಳಿಯ ಸದಸ್ಯ ವಿಕಾಸ ದರಬಾರ ಅಭಿಪ್ರಾಯಪಟ್ಟರು. 

ಭಾರತ ಸರಕಾರದ ಕ್ಷೇತ್ರ ಜನ ಸಂಪರ್ಕ ಇಲಾಖೆ, ಕಲಾ ವಾಣಿಜ್ಯ ಮತ್ತು ಬಿ.ಸಿ.ಎ ದರಬಾರ  ಮಹಾವಿದ್ಯಾಲಯ,ಪ್ರಧಾನಂತ್ರಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಕೇಂದ್ರ ರುಡ್ ಸೆಟ್, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ದರಬಾರ ಪದವಿ ಮಹಾವುದ್ಯಾಲಯದಲ್ಲಿ ವಿದ್ಯಾಥರ್ಿಗಳಿಗಾಗಿ ಏಪಡಿಸಿದ ಕೌಶಲ್ಯ ಅಭಿವೃಧ್ಧಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.  

ಕ್ಷೇತ್ರ ಜನಸಂಪರ್ಕ ಇಲಾಖೆಯ ಸಹಾಯಕ ಅಧಿಕಾರಿ ಮುರಳಿಧರ ಕಾರಭಾರಿ ಭಾರತ ಸರಕಾರದ ವಿವಿಧ ಯೋಜನೆಗಳನ್ನು ವಿವರಿಸಿ, ನಿರುದ್ಯೋಗಿ ಯುವಕರಿಗಾಗಿ ಇರುವ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿ ಕೌಶಲ್ಯ ಬೇಳೆಸಿಕೊಂಡು ಯುವಕರು ತಮ್ಮ ಕುಟುಂಬ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಕೋಡುಗೆ ನೀಡಲು ಕರೆ ನೀಡಿದರು.  ಪ್ರಧಾನಮಂತ್ರಿ ಕೌಶಲ್ಯ ಕೆಂದ್ರದ ಅಧಿಕಾರಿ ಸಂಜೀವ ಕುಲಕಣರ್ಿ ಮಾತನಾಡಿ ಕೇವಲ ಪದವಿ ಪಡೆದರೆ ಸಾಕಾಗುವದಿಲ್ಲ ಜೋತೆಗೆ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಹಲವಾರು ಕೌಶಲ್ಯವನ್ನು ಪಡೆಯಲೇಬೇಕು ಎನ್ನುತ್ತ ಪ್ರಧಾನಮಂತ್ರಿ ಕೌಶಲ್ಯ ಕೆಂದ್ರದಿಂದ ಸಿಗುವ ಉಚಿತ ತರಬೇತಿಗಳ, ವ್ಯಕ್ತಿತ್ವ ನಿಮರ್ಾಣ ಮತ್ತು  ಸ್ಕಿಲ್ ಇಂಡಿಯಾದ ಕುರಿತು ವಿಡಿಯೊಗಳನ್ನು ತೊರಿಸಿದರು.  

ಕುಮಾರಿ ಆಸ್ವಿನಿ ಪವಾರ ಪ್ರಾಥರ್ಿಸಿದಳು. ಉಪನ್ಯಾಸಕ ಸುನೀಲಕುಮಾರ ಯಾದವ ಸ್ವಾಗತಿಸಿ ಮಂಜುನಾಥ ಜುನಗೋಡ ನಿರೂಪಿಸಿದರು. ಮನೋಹರ ದೊಡ್ಡಮನಿ ವಂದಿಸಿದರು. ಅಯ್.ಬಿ.ಜಾಬಾ, ಚೈತನ್ಯ ಮುತ್ತಗಿಕರ, ಶಕೀಲ ಮುಲ್ಲಾ, ಮಂಜುನಾಥ ಸಜ್ಜನ, ಜಗದೀಶ ಸಾತಿಹಾಳ, ಭಾಸ್ಕರ ಎಮ್, ರಾಜು ಕಪಾಲಿ ಹಾಗೂ ಕಾಲೇಜಿನ  ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.