ಡಾ.ಸುಮಿತ್ರಾ ಕಾಡದೇವರಮಠ ಅಭಿಪ್ರಾಯ | ಸುಗಮ ಶಾಸ್ತ್ರೀಯ ಸಂಗಮ ಸಂಗೀತ ಸಂಜೆ ಕಾರ್ಯಕ್ರಮ
ಸಂಗೀತದ ಭದ್ರ ತಳಪಾಯ ಶಾಸ್ತ್ರೀಯ ಸಂಗೀತ. ಅದೇ ಸುಗಮ ಸಂಗೀತಕ್ಕೂ ಪಠ್ಯವಾಗಬೇಕು ಎಂದು ಗದಗಿನ ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಿತ್ರಾ ಕಾಡದೇವರಮಠ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯೊಂದಿಗೆ ಧಾರವಾಡದ ಸಂತತ ಟ್ರಸ್ಟ್ ಆಯೋಜಿಸಿದ್ದ, 'ಸುಗಮ ಶಾಸ್ತ್ರೀಯ ಸಂಗಮ' ಎಂಬ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಾ ''ಯಾವುದರಲ್ಲಿ ಎಲ್ಲ ಬಗೆಯ ಭಾವನೆಗಳನ್ನು ತೋರಿಸಲು ಸಾಧ್ಯವೋ ಅದು ಶಾಸ್ತ್ರೀಯ ಸಂಗೀತ. ಸುಗಮ ಸಂಗೀತ ಉಪಶಾಸ್ತ್ರೀಯ ವಿಭಾಗಕ್ಕೆ ಸೇರುತ್ತದೆ. ಹೀಗಾಗಿ ಸುಗಮ ಸಂಗೀತಕ್ಕೆ ಶಾಸ್ತ್ರೀಯ ಸಂಗೀತವೇ ಪಠ್ಯವಾಗಬೇಕಾಗುತ್ತದೆ."
''ಭಾರತೀಯ ಸಂಗೀತದಲ್ಲಿ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಆದರೆ, ಎಷ್ಟೋ ಗಾಯಕರಿಗೆ ಅವುಗಳ ಬಗ್ಗೆ ತಿಳಿದಿಲ್ಲ. ಮಾತ್ರವಲ್ಲ ತಾವು ಹಾಡುವ ಗೀತೆಯ ರಾಗವೂ ಅವರಿಗೆ ಗೊತ್ತಿರುವುದಿಲ್ಲ. ಅಂತಹ ಸಂದರ್ಭದಲ್ಲಿ ವಾದ್ಯಗಾರ ಅವರು ಹಾಡಿದ ರಾಗದ ಧಾಟಿಯಲ್ಲೇ ನುಡಿಸಬೇಕಾಗುತ್ತದೆ. ಆಗ ಕೆಲ ತಪ್ಪುಗಳು ಆಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಯಾವುದೇ ಗಾಯಕ ಕನಿಷ್ಟ ರಾಗ ಆಧಾರಿತ, ತಾಳ ಮತ್ತು ಶೃತಿ ಕುರಿತು ಜ್ಞಾನ ಹೊಂದಿರಬೇಕು. ಇದೆಲ್ಲವನ್ನೂ ತಿಳಿಯಲು ಶಾಸ್ತ್ರೀಯ ಸಂಗೀತ ಸಹಕಾರಿಯಾಗಲಿದೆ,'' ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಾಹಿತಿಗಳಾದ ಮಾತಾರ್ಂಡಪ್ಪ ಎಮ್ ಕತ್ತಿ ಮಾತನಾಡಿ ''ಸುಖ-ದುಃಖ, ಹಗಲು-ಇರುಳು.. ಹೀಗೆ ಎಲ್ಲವನ್ನೂ ತೋರಿಸುವ ಸಾಮಥ್ರ್ಯ ಶಾಸ್ತ್ರೀಯ ಸಂಗೀತಕ್ಕಿದೆ. ಅದರಲ್ಲಿ ರಾಗವೇ ಪ್ರಧಾನವಾದರೆ, ಸುಗಮ ಸಂಗೀತದಲ್ಲಿ ಸಾಹಿತ್ಯ ಪ್ರಧಾನವಾಗುತ್ತದೆ. ಅದರ ನಂತರ ಸಂಯೋಜನೆ, ವಾದನ. ಆದ್ದರಿಂದ ಯಾವುದೇ ಸಂಗೀತಗಾರ ಮೊದಲು ಅದರ ಮೂಲವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಅದೇ ರೀತಿ ಸುಗಮ ಸಂಗೀತಗಾರ ಸಾಹಿತ್ಯ, ಸಂಗೀತದ ನಿರಂತರ ಅಧ್ಯಯನದೊಂದಿಗೆ ಆಸಕ್ತಿಯನ್ನೂ ಹೊಂದಿರಬೇಕು,'' ಎಂದರು. ಸುಗಮ ಸಂಗೀತದಲ್ಲಿ ಹೊಸ ರಾಗಗಳ ಸಂಯೋಜನೆ ಆಗಬೇಕು. ಅದಕ್ಕಾಗಿ ಒಬ್ಬರು ಮತ್ತೊಬ್ಬರೊಂದಿಗೆ ತಾವು ಮಾಡಿರುವ ಸಂಯೋಜನೆ ಕುರಿತು ಚಚರ್ಿಸುವ ಮನೋಭಾವ ಬೆಳೆಯಬೇಕು. ಆದರೆ, ಆ ರೀತಿ ಸಂವಹನ ಆಗದಿದ್ದರೆ ಅದು 'ಗುಪ್ತ' ಸಂಗೀತ ಆಗುತ್ತದೆಯೇ ಹೊರತು 'ಮುಕ್ತ' ಸಂಗೀತ ಆಗುವುದಿಲ್ಲ. ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಮಕ್ಕಳ ಸಾಹಿತಿ ಕೆ.ಎಚ್ ನಾಯಕ ಚಾಲನೆ ನೀಡಿದರು. ಪೇಜಾವರಶ್ರೀ, ಎನ್ ಪಿ ಭಟ್ಟ್, ಧೀನಬಂದು ಹಳ್ಳಿಕೇರಿ ಅವರಿಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು. ನಂತರ ಸಂಗೀತ ಸಂಜೆ ಕಾರ್ಯಕ್ರಮವನ್ನು ಗಾಯಕರಾದ ಡಾ.ಅಜರ್ುನ ವಠಾರ, ಗಣೇಶ ಚನ್ನದಾಸರ, ಸಿದ್ದಲಿಂಗ ಯಡಹಳ್ಳಿ, ನಡೆಸಿಕೊಟ್ಟರು. ಬಸು ಹಿರೇಮಠ ಹಾಮರ್ೋನಿಯಂನಲ್ಲಿ, ವಿಜಯಕುಮಾರ ಸುತಾರ ತಬಲಾ ಸಾಥ ನೀಡಿದರು.
ರಂಗಕಲಾವಿದರಾದ ಕೃಷ್ಣಮೂತರ್ಿ ಗಾಂವಕರ ನಿರೂಪಿಸಿದರು. ಬೇಂದ್ರೆ ಟ್ರಸ್ಟ್ನ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಸಂತತ ಟ್ರಸ್ಟ್ನ ಕಾರ್ಯದಶರ್ಿಗಳಾದ ಮಹಾನಂದಾ ಗೋಸಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟಕರಾದ ನಾಗರಾಜ ಪಾಟೀಲ, ಸಂಗೀತಗಾರರಾದ ಶ್ರೀಧರ ಕುಲಕಣರ್ಿ, ಪರಶುರಾಮ ಕಟ್ಟಿಸಂಗಾವಿ, ಡಾ.ಎ.ಎಲ್ ದೇಸಾಯಿ, ಸಾಗರ ಘೋರ್ಪಡೆ, ಆದರ್ಶ ಅಗಡಿ, ರಾಮಚಂದ್ರ ಶೇರೆಕಾರ ಮುಂತಾದರವರು ಹಾಜರಿದ್ದರು.