ಕ್ಷೌರಿಕ ವೃತ್ತಿಗೆ ಹೊರರಾಜ್ಯದವರು ಬರದಂತೆ ತಡೆಯಬೇಕು

ಯರಗಟ್ಟಿ :     ಹಡಪದ ಸಮಾಜದ ಮೂಲ ಕಸಬು ಕ್ಷೌರಿಕ ಸೇವೆ. ಇದು ನಮ್ಮ ಪೂರ್ವಜರ ಕಾಲದಿಂದ ನಡೆದು ಬಂದಿರುವ ಕುಲಕಸಬಾಗಿದೆ. ಕನರ್ಾಟಕ ರಾಜ್ಯದ ನಮ್ಮ ಸಮಾಜದ ಭಾಂದವರು ಈ ವೃತ್ತಿಯನ್ನೆ ನಂಬಿ ಬದುಕುತ್ತಿದ್ದಾರೆ. 

ಆದರೆ ಇಂದು ಇದನ್ನು ಸಂಪೂರ್ಣ ವ್ಯಾಪಾರಿಕರಣ ಮಾಡಿದ ಹೋರ ರಾಜ್ಯ ಬಂಡವಾಳ ಶಾಹಿಗಳು ಭಾರಿ ಪ್ರಮಾಣದಲ್ಲಿ ಹಣ ತೋಡಗಿಸಿ ಕ್ಷೌರಿಕ ವೃತ್ತಿಯನ್ನು ಮಾಡಲು ಬಂದಿರುತ್ತಾರೆ ಇದರಿಂದ ನಮ್ಮ ಸಮಾಜದ ಅದೆಷ್ಟೋ ಬಡ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರುವುದು ಅಲ್ಲದೇ ಹಡಪದ ಸಮಾಜದ ಜನತೆಗೆ ಉದೋಗ್ಯ ಕಸಿದುಕೊಳ್ಳುವ ಬಯ ಕಾಡುತ್ತಿದೆ ಇದರಿಂದ ನಮ್ಮ ರಾಜ್ಯದ ಕ್ಷೌರಿಕ ಸಮಾಜದ ಜನಾಂಗದ ಕುಲಕಸಬು ಕಸಿದುಕೊಂಡಂತಾಗುತ್ತದೆ ಇದರಿಂದ ಬಹಳ ಕುಟುಂಬಗಳು ಬೀದಿಗೆ ಬೀಳಲಿವೆ ಸರ್ಕಾರ ಇದನ್ನು ತಡೆಗಟ್ಟಿ ನಮ್ಮ ಕಸಬನ್ನು ಉಳಿಸಿಕೊಡಬೇಕು ಎಂದು ಲಿಂಗಾಯತ ಹಡಪದ ಸಮಾಜ ಸೇವಾ ಸಂಸ್ಥೆ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿಕೊಂಡರು. 

ಉಪ ಸಹಸಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಿಯ ವಿವಿಧ ಗ್ರಾಮದ ಸಂಘಟನೆ ಸದಸ್ಯರು ಇದ್ದರು. ಬಸವರಾಜ ಹಡಪದ, ಮಹಾಂತೇಶ ಹಂಪನ್ನವರ, ನಾಗೇಶ ಹಡಪದ, ಸೋಮು ರೈನಾಪೂರ, ಮಲ್ಲಿಕಾರ್ಜುನ ಹಡಪದ,  ಹನಮಂತ ಹಡಪದ, ಈರಣ್ಣ ಉಜ್ಜಿನಕೊಪ್ಪ, ಅಶೋಕ ನಾವಿ, ಪ್ರಕಾಶ ಹಡಪದ, ಬಾಬು ಹಡಪದ, ಜಗದೀಶ ನಾವಿ, ನಿಂಗಪ್ಪ ನಾವಿ, ನಿರೂಪಾದ ಸತ್ತಿಗೇರಿ, ಬಸವರಾಜ ಸತ್ತಿಗೇರಿ, ಈರಪ್ಪ ನಾವಿ, ಪ್ರಕಾಶ ಹಡಪದ, ಶಿವಾನಂದ ಹಡಪದ ಇತರರು ಇದ್ದರು.