ಲೋಕದರ್ಶನವರದಿ
ಶಿಗ್ಗಾವಿ ಃ ಪ್ರಶಸ್ತಿ ನೀಡುವದು, ಪ್ರಶಸ್ತಿಗೆ ಗೌರವ ಬರುವಂತಿರಬೇಕು ಆ ನಿಟ್ಟಿನಲ್ಲಿ ಕರ್ತವ್ಯದ ಸಮಯ ಮೀರಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಗೌರವಿಸುವ ಉದ್ದೇಶದಿಂದ ನಮ್ಮ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಗೃಹ ಹಾಗೂ ಸಹಕಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲ ಭವನದಲ್ಲಿ ದಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೊತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ನಮ್ಮ ಟ್ರಸ್ಟ್ ಇಂತಹ ಕಾರ್ಯಕ್ರಗಳನ್ನು ಮಾಡುತ್ತಾ ಬಂದಿದೆ, ಕ್ಷೇತ್ರದ ಜನರ ಆಶೀವರ್ಾದಿಂದ ಸಚಿವ ಸ್ಥಾನ ಸಿಕ್ಕಿದೆ, ಜೊತೆಗೆ ಇಂದು ಅವರ ಪ್ರೀತಿ ಹಾಗೂ ಅಪೆಕ್ಷೆ ಹೆಚ್ಚಾಗಿದೆ, ರಾಜ್ಯದಲ್ಲಿ ಪ್ರಾಣ ಹಾನಿ, ಮಾನ ಹಾನಿ, ಸಂರಕ್ಷಣೆಯ ವ್ಯವಸ್ಥೆ, ಅಪರಾದಗಳನ್ನು ತಡೆಯುವದು, ಬಾಹ್ಯ ಚಟುವಟಿಕೆಗಳನ್ನು ಗುರುತಿಸಿ ಅವುಗಳನ್ನು ಧಮನ ಮಾಡುವ ಮಹತ್ತರವಾದ ಜವಾಬ್ದಾರಿ ನನ್ನಮೆಲಿದೆ, ನ್ಯಾಯ ಸಮ್ಮತ ಕೆಲಸಗಳನ್ನು ಮಾಡುವಂತೆ ಹಾಗೂ ಸತ್ಯ ತಾಯಿ ಹಾಗೂ ನ್ಯಾಯವನ್ನು ತಂದೆಯ ಸ್ಥಾನದಲ್ಲಿ ನೋಡಿ ಕಾರ್ಯನಿರ್ವಹಿಸಲು ಇಲಾಖೆಯರಿಗೆ ತಿಳಿಸಲಾಗಿದೆ.
ಸಕರ್ಾರದಿಂದ ಎಲ್ಲರಿಗೂ ಪ್ರಶಸ್ತಿ ನೀಡಲಾಗುವುದಿಲ್ಲ ಆ ಕಾರ್ಯವನ್ನು ನಮ್ಮ ಟ್ರಸ್ಟ್ ಮಾಡುತ್ತಿದೆ ಮತ್ತು ಪ್ರೋತ್ಸಾಹದ ಜೊತೆಗೆ ಒಳ್ಳೆಯ ಕೆಲಸಗಳನ್ನು ಮುಂದುವರೆಸಿಕೊಂಡು ಹೊಗುವಂತೆ ಪ್ರೇರೆಪಿಸಲಾಗುತ್ತಿದೆ ಇದೆ ನಮ್ಮ ಸಂಸ್ಥೆಯ ಉದ್ಧೇಶವಾಗಿದೆ.
ತಾಲೂಕಿನಲ್ಲಿ ಅಭಿವೃದ್ಧಿಯ ಪತವನ್ನು ಹೆಚ್ಚಾಗಲಿದೆ, 100 ಕೆರೆಗಳನ್ನು ತುಂಬಿಸುವದು, ಹೈನುಗಾರಿಕೆಯಲ್ಲಿ ನೂತನ ಯೋಜನೆಗಳು, 5000 ರೈತರಿಗೆ ಹಸುಗಳನ್ನು ಒದಗಿಸುವದು, ಮಹಿಳಾ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಆಥರ್ಿಕ ಬಲವನ್ನು ನೀಡುವದು, ಟೆಕ್ಸಟೈಲ್ಸ್ ಪಾರ್ಕ ತೆರೆದು ಯುವಕರಿಗೆ ಉದ್ಯೋಗ ಒದಗಿಸುವದು, ಕೈಗಾರಿಕಾ ವಲಯಗಳನ್ನು ಸ್ಥಾಪಿಸುವದು, ನಗರ ಪ್ರದೇಶಗಳನ್ನು ಅಭಿವೃದ್ದಿ ಹಾಗೂ ಸುಂದರಗೊಳಿಸುವದು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಹಾಗೂ ಇವುಗಳನ್ನು ಅನುಷ್ಠಾನ ಪಡಿಸಲು ತಮ್ಮ ಸಹಕಾರ ಅಗತ್ಯವಾಗಿದೆ ಎಂದ ಅವರು ದುಡಿಮೆಗೆ ಗೌರವವಿದೆ, ಬೆವರಿಗೆ ಬೆಲೆ ಇದೆ ಪ್ರೀತಿ, ವಿಶ್ವಾಸದ ಸಂಬಂದ, ನ್ಯಾಯ ನಿಷ್ಟುರ ಪ್ರಜಾಪ್ರಭುತ್ವ, ಧರ್ಮ ಸತ್ಯ ನೆಲೆಯೂರಿದ ಕ್ಷೇತ್ರ ಇದಾಗಿದೆ ಈ ಕ್ಷೇತ್ರದಿಂದ ಜನತೆಯ ಪಾದಗಳಿಗೆ ನನ್ನ ಸ್ಥಾನಮಾನಗಳನ್ನು ಅಪರ್ಿಸುತ್ತೆನೆ ಎಂದು ಮಾಮರ್ಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ್ರೆಶ ಮಾಸ್ತರ ಬೆಳಗಲಿ ಅವರನ್ನು ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಾನಂದ ರಾಮಗಿರಿ, ದೇವಣ್ಣ ಚಾಕಲಬ್ಬಿ, ಗಂಗಣ್ಣ ಸಾತಣ್ಣರವರ, ರವಿ ಕುಡವಕ್ಕಲಿಗರ, ಶಂಕರಗೌಡ ಪೊಲೀಸ್ಗೌಡ್ರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ್ರೆಶ ಮಾಸ್ತರ ಬೆಳಗಲಿ, ಅಜರ್ುನ ಹಂಚಿನಮನಿ, ವಿ ವೈ ಪಾಟೀಲ, ಸಂಗೀತಾ ವಾಲ್ಮೀಕಿ, ರೂಪಾ ಬನ್ನಿಕೊಪ್ಪ, ಬಸವರಾಜ ನಾರಾಯಣಪೂರ, ಮಲ್ಲೇಶಪ್ಪ ಹರಿಜನ, ಬಿ ಎಸ್ ಹಿರೇಮಠ, ಬಸನಗೌಡ ಮೆಳಗಿಮನಿ, ಶೋಭಾ ನಿಸ್ಸಿಮಗಗೌಡ್ರ, ಉಷಾ ಬಿಳೆಕುದರಿ, ರೇಣಕನಗೌಡ ಪಾಟೀಲ್, ಶರೀಫಸಾಬ್ ನದಾಫ, ರಮೇಶ ವನಹಳ್ಳಿ ಸೇರಿದಂತೆ ತಾಲೂಕಿನ ವಿವಿದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು, ಮುಖಂಡ ಶಿವಾನಂದ ಮ್ಯಾಗೇರಿ ಕಾರ್ಯಕ್ರಮ ನಿರ್ವಹಿಸಿದರು