ಆ.24 ರಂದು ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ

ಆ.24 ರಂದು ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ The auspicious festival of reciting the unpublished Lilagranth of Sri Shivachidambar on August 24th

ಆ.24 ರಂದು ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ

ವಿಜಯಪುರ 21:ಶ್ರೀ ಚಿದಂಬರ ಸೇವಾ ಸಮಿತಿ ವತಿಯಿಂದ ನಗರದ ಶ್ರೀ ಶಿವಚಿದಂಬರ ದೇವಸ್ಥಾನದಲ್ಲಿ 49ನೇ ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ, ಹಾಗೂ ಶ್ರಾವಣ ಮಾಸದ ಕಾರ್ಯಕ್ರಮಗಳು ಜರುಗಲಿವೆ. ಆ.17 ರಿಂದ 23ರ ವರೆಗೆ  ವಿಜಯಪುರ ನಗರದ ಭಕ್ತರ ಕಲ್ಯಾಣಕ್ಕಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳ ಚರಿತ್ರೆ ಪಾರಾಯಣ ಸಪ್ತಾಹ ಜರುಗಲಿದೆ. ಆ.23 ರಂದು ಶನಿವಾರ ಸಪ್ತಾಹ ಮುಕ್ತಾಯ ಕಾರ್ಯಕ್ರಮ ಸಂತ ಶ್ರೇಷ್ಠ ಶ್ರೀ ಸುರೇಶ ಪಾಟೀಲ ಬಾಪುಮಹಾರಾಜ ಶ್ರೀ ಮೃತ್ಯುಂಜಯೇಶ್ವರ ಸಂಸ್ಥಾನ ಕರ್ಕಿಹಳ್ಳಿ ತಾ.ಜಿ.:ಕೊಪ್ಪಳ ಇವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 11.30 ಗಂಟೆಗೆ ಸಪ್ತಾಹ ಸೇವೆ ಭಕ್ತರಿಂದ ಮಹಾಸ್ವಾಮಿಗೆ ಸರೆ​‍್ಣ ಹಾಗೂ ಸತ್ಸಂಗ ನಡೆಯಲಿದೆ. ಮದ್ಯಾನ್ಹ 12.30ಕ್ಕೆ ಮಂಗಲ ಮಹೋತ್ಸವ ನಿಮಿತ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾತನ ವಿತರಣೆ ಹಾಗೂ ಮಧ್ಯಾನ್ಹ 1ಕ್ಕೆ ನೈವೇದ್ಯ ಮಹಾಮಂಗಳಾರತಿ ನಂತರ ಮಹಾಪ್ರಸಾದ ನಡೆಯಲಿದೆ. ಅಂದೇ ಮಧ್ಹಾನ್ಹ 3 ಗಂಟೆಗೆ ಶ್ರೀ ಶಿವಚಿದಂಬರೇಶ್ವರ ಸ್ವಾಮಿಗಳ ಶೋಭಾಯಾತ್ರೆ ಇಬ್ರಾಹಿಂಪೂರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದ ವರೆಗೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀಮತಿ ಸಂಗೀತಾ ಕಟ್ಟಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ಆ.24 ರಂದು ರವಿವಾರ ಬೆಳಿಗ್ಗೆ 6ಕ್ಕೆ ಕಾಕಡಾರತಿ,ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ, 8ಕ್ಕೆ ಶ್ರೀಮದ್ ಯೋಗೀಶ್ವರ ಮಹರ್ಷಿಗಳ ಅಷ್ಟೋತ್ತರ 10ಕ್ಕೆ ಶ್ರೀ ಸತ್ಯ ಚಿದಂಬರ ವೃತ ಕಥೆ ನಡೆಯಲಿದೆ. ಮಧ್ಯಾನ್ಹ 12ಕ್ಕೆ ಪ.ಪೂ.ಶ್ರೀ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ಶ್ರೀ ಶಿವಚಿದಂಬರೇಶ್ವರ ಮೂಲಪೀಠ ಶ್ರೀಕ್ಷೇತ್ರ ಕೆಂಗೇರಿ ಮಠ ಮುರುಗೋಡ ಇವರ ಸಾನಿಧ್ಯದಲ್ಲಿ ಅರುಣ ರಾಮಚಂದ್ರ ದೇಸಾಯಿ ಬಾಗಲಕೋಟ ಇವರಿಂದ ಪ್ರವಚನ ಮಧ್ಯಾನ್ಹ 1 ಗಂಟೆಗೆ ಶ್ರೀ ಚಿದಂಬರೇಶ್ವರ ಮಹಾಸ್ವಾಮಿಯ ರಥೋತ್ಸವ ಮಧ್ಯಾನ್ಹ 2ಕ್ಕೆ ನೈವೇದ್ಯ ಮಹಾಮಂಗಳಾರತಿ ನಂತರ ಮಹಾಪ್ರಸಾದ ಸಂಜೆ 7ಕ್ಕೆ ಶ್ರೀ ಶಿವಚಿದಂಬರ ಭಜನೆ ಮಂಗಳಾರತಿ ಮಂತ್ರಪುಷ್ಪ ಜರುಗಲಿದ್ದು, ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಶಿವಚಿದಂಬರೇಶ್ವರ ಸ್ವಾಮೀಯ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.