ಲೋಕದರ್ಶನ ವರದಿ
ಗುರ್ಲಾಪೂರ 22: ಗುರ್ಲಾಪೂರದ ಕ್ರೀಡಾಪಟುಗಳು ರಾಷ್ಟ ಮಟ್ಟದಲ್ಲಿ ಮಿಂಚಲಿ. ಗ್ರಾಮೀಣ ಕ್ರೀಡಾ ಪಟುಗಳನ್ನು ಸಂಘ ಸಂಸ್ಥೆಯವರು ಬೆಳಕಿಗೆ ತರಲು ಶ್ರಮಿಸಬೇಕು. ಇಂತಹ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುವುದರಿಂದ ಕ್ರೀಡಾಪಟುಗಳು ಬೆಳಕಿಗೆ ಬರಲು ಸಹಕಾರಿಯಾಗುತ್ತದೆ ಎಂದು ಕುರುಹಿನಶೆಟ್ಟಿ ಅರ್ಬನ್ ಸೊಸಾಯಿಟಿಯ ಮಾಜಿ ಅಧ್ಯಕ್ಷರಾದ ಬಿ.ಸಿ. ಮುಗಳಖೋಡ ಹೇಳಿದರು.
ಅವರು ಸ್ಥಳೀಯ ಅಯ್ಯಪ್ಪಸ್ವಾಮಿ ಕ್ರಿಕೇಟ್ ಕ್ಲಬ್ ವತಿಯಿಂದ ದ್ವಿತೀಯ ಬಾರಿಗೆ ಹಮ್ಮಿಕೊಂಡಿರುವ ಪ್ರೀಮಿಯರ್ ಲೀಗ್ ಟ್ರೋಪಿ ಉದ್ಘಾಟನೆ ಸಮಾರಂಭದ ಮತ್ತು ಟ್ರೋಪಿ ಅನಾವರಣದ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿ ದಿಸೆಯಿಂದಲೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು, ಆಗಿನ ಚಿನ್ನದಾಂಡು ಈಗಿನ ಕ್ರಿಕೇಟ ಆಗಿ ಮಾರಾಪಾಡವಾಗಿದೆ. ಕಠಿಣ ಪರಿಶ್ರಮದಿಂದ ಆಟೋಟದಲ್ಲಿ ಪಾಲ್ಗೊಂಡು ನಾಡಿನ ಕೀರ್ತಿ ತರಬೇಕೆಂದು ಹೇಳಿದರು. ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕರಾದ ದಾಸಪ್ಪ.ನಾಯಿಕ. ಕ್ರೀಡಾ ಪ್ರೇಮಿಯಾದ ಶಿವಲಿಂಗ ಪುಠಾಣಿಯವರನ್ನು ಸಂಘಟಿಕರ ಸತ್ಕರಿಸಿದರು.
ಶಿವಾನಂದ ಹಿರೇಮಠ ಶ್ರೀಗಳು ಮಾತನಾಡಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ ಸಮಚಿತ್ತದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಆಶೀರ್ವಚನ ನೀಡಿದರು. ದಾಸಪ್ಪಾ ನಾಯ್ಕ ಅಧ್ಯಕ್ಷತೆ ವಹಿಸಿದರು, ಶಿವಲಿಂಗ ಪುಠಾಣಿ ಉದ್ಘಾಟಿಸಿದರು, ಅತಿಥಿಯಾಗಿ ಆರ್.ಬಿ. ನೇಮಗೌಡ್ರ, ರೇವಪ್ಪಾ ಸತ್ತಿಗೇರಿ, ಶಂಕರ ಮುಗಳಖೋಡ, ಅನ್ವರ ನದಾಫ, ಸಿದ್ದು ಗಡ್ಡೇಕಾರ, ಭೀಮಶಿ ದೇವರಮನಿ, ಪ್ರಕಾಶ ಮುಗಳಖೋಡ, ಮಹಾದೇವ ಟಪಾಲದಾರ, ನಾಗಪ್ಪಾ ಗೌರಾಣಿ, ಬಸು ಇಟ್ನಾಳ, ಕೃಷ್ಣಾ ಶಾಬಣ್ಣವರ, ಸದಾಶಿವ ನೇಮಗೌಡರ, ರಂಗಣ್ಣಾ ಪಾಟೀಲ, ಮಲ್ಲಯ್ಯಾ ಮೋಜಣಿದಾರ, ಡಾ|| ಪಿ.ಎಮ್. ಹಿರೇಮಠ, ಕಲ್ಲಪ್ಪಾ ರಂಗಾಪೂರ, ದಯಾನಂದ ಪಾದಗಟ್ಟಿ, ಮಂಜು ಹುಣಶ್ಯಾಳ, ಮಂಜು ಹುಡೇದ ಹಾಗೂ ಸಂಘದ ಸಂಘಟಿಕರು ಉಪಸ್ಥಿತರಿದ್ದರು.
ಸ್ವಾಗತ ಮಹಾದೇವ ಕುಲಗೋಡ, ನಿರೂಪಣೆ ಕಾಶಿನಾಥ ಅಂಬಿಗೇರ, ಮದನ್ನವರ ಗುರುಗಳು ವಂದಿಸಿದರು.