ಪ್ರಧಾನಿ ಮೋದಿ ಭೇಟಿ ಮಾಡಿದ ಜಗದೀಶ ಶೆಟ್ಟರ್: ಐತಿಹಾಸಿಕ ಶಬರಿ ಕೊಳ್ಳ ಅಭಿವೃದ್ಧಿಪಡಿಸುವಂತೆ ಮನವಿ

Jagdish Shettar met PM Modi: Request to develop historic Shabari Kolla

ಬೆಳಗಾವಿ 11: ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್  ಶುಕ್ರವಾರ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸವದತ್ತಿಯ ಶ್ರೀ ಕ್ಷೇತ್ರ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಅದೇ ರೀತಿಯಲ್ಲಿ ರಾಮದುರ್ಗದಲ್ಲಿರುವ ಐತಿಹಾಸಿಕ ಶಬರಿ ಕೊಳ್ಳವನ್ನು ಸಹ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸದರು  ಪ್ರಧಾನಿ ಮೋದಿ  ಅವರಿಗೆ ಸವಿ ನೆನಪಿಗಾಗಿ ಹುಬ್ಬಳ್ಳಿ ಸಾಹಿತ್ಯ ಭಂಡಾರ ಪ್ರಕಟ ಮಾಡಿದ ” Temple treasures a journey through time ”  ಪುಸ್ತಕ ನೀಡಿದರು.

ಬೆಂಗಳೂರು – ಧಾರವಾಡದ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ” ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಿ ಬೆಳಗಾವಿ ಜಿಲ್ಲಾ ನಿವಾಸಿಗಳ ಅನೇಕ ದಿನಗಳ ಬೇಡಿಕೆಯನ್ನು ಪರಿಗಣಿಸುವಂತೆ ಮನವಿ ಮಾಡಿದರು.

ವಿಮಾನಯಾನ ಸೇವೆಗೆ ಸಂಬಂಧಿಸಿದಂತೆ “ಉಡಾನ್ 3.0” ಯೋಜನೆಯ ಅವಧಿಯನ್ನು ಇನ್ನೂ ಹೆಚ್ಚಿಸಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರು. ಬೆಳಗಾವಿ ನಗರ ಹಾಗೂ ಎರಡನೇ ದರ್ಜೆ ನಗರಗಳ ವಿಮಾನಯಾನ ಸೇವೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.