ರೈತರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದೆ ಸಂಘ : ಬಸನಗೌಡ ಪಾಟೀಲ್
The association is working ceaselessly for the welfare of farmers: Basanagouda Patil
ಲೋಕದರ್ಶನ ವರದಿ
ಮಹಾಲಿಂಗಪುರ 07: ಸಂಘವು 25 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು 2025-26 ನೇ ಸಾಲಿನಲ್ಲಿ 43 ಲಕ್ಷ 74 ಸಾವೀರ 941 ರೂ ಲಾಭ ಗಳಿಸಿದೆ. ಇದಕ್ಕೆ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಸ್ಥಳೀಯರು ಈ ಪ್ರಾಥಮಿಕ್ ಕೃಷಿ ಪತ್ತಿನ ಸಹಕಾರಿ ಸಂಘದ ಮೇಲಿಟ್ಟಿರುವ ಬರವಸೆಯೇ ಇದಕ್ಕೆ ಕಾರಣ ಅಲ್ಲದೆ ಎಲ್ಲ ಶೇರುದಾರರು ನಮ್ಮ ಸಂಘದ ಸಕಲ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷರಾದ ಬಸನಗೌಡ ಪಾಟೀಲ ಹೇಳಿದರು.
ಅವರು ಸ್ಥಳೀಯ ಪಿಕೆಪಿಎಸ್ ಸಂಘದ ಆವರಣದಲ್ಲಿ ಮಂಗಳವಾರ ನಡೆದ 67 ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯನ್ನು ಉದ್ಘಾಟಸಿ ಮಾತನಾಡಿ 2563 ಷೇರುದಾರ ಸದಸ್ಯರಿದ್ದು ಷೇರು ಬಂಡವಾಳ ರೂ 1,98,83,771 ರೂ ಇರುತ್ತದೆ. 201 ನಾಮ ಮಾತ್ರ ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ ರೂಪಾಯಿ 190665 ಇರುತ್ತದೆ. ಒಟ್ಟು ಷೇರು ಬಂಡವಾಳ 2,02,83,811 ಇರುತ್ತದೆ ಎಂದರು.
ಗುಂತಾವಣೆ : ಕಾನೂನು ಬದ್ದವಾಗಿ ಡಿಸಿಸಿ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಠೇವು ಹಾಗೂ ಷೇರುಗಳ ರೂಪದಲ್ಲಿ 69284050 ಇಡಲಾಗಿದೆ. ಮುಖ್ಯ ಕಾರ್ಯನಿರ್ವಾಹಕಾರದ ಈರಣ್ಣ ಬೆಟಗೇರಿ ಪ್ರಾಸ್ತವಿಕವಾಗಿ ಮಾತನಾಡಿ ವಾರ್ಷಿಕ ವರದಿ ಓದಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ : 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಿ ಯು ಸಿ ಮತ್ತು ಪದವಿ ವಿಭಾಗದ ಮತ್ತು ಸಂಘದ ಸದಸ್ಯರ ಮಕ್ಕಳು ಸೇರಿದಂತೆ ಉತ್ತಮ ಅಂಕ ಪಡೆದ ಒಟ್ಟು ಸುಮಾರು 64 ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಶಾಲು ಹೋದಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಬಸಪ್ಪ ಕೊಪ್ಪದ,ಮಲ್ಲಪ್ಪ ಸೈದಾಪುರ,ಅಶೋಕ ಪವಾರ,ಬಸಪ್ಪ ನಿಂಬರಗಿ, ಸಂಗಯ್ಯ ಮಠಪತಿ ಜಿ ಎಸ್ ಬರಗಿ,,ಗೋಪಾಲ ಪವಾರ,ಉಪಾಧ್ಯಕ್ಷರಾದ ಮಹಾಲಿಂಗಪ್ಪ ಪೂಜಾರಿ, ನಿರ್ದೇಶಕರಾದ ಮಲ್ಲಿಕಾರ್ಜುನ ಕುಳ್ಳೊಳ್ಳಿ, ಶಿವಪ್ಪ ನಾಗನೂರ್, ವಿಷ್ಣುಗೌಡ ಪಾಟೀಲ, ಈರ್ಪ ದಿನ್ನಿಮನಿ, ಬಸವರಾಜ್ ಅರಳಿಕಟ್ಟಿ, ಶ್ರೀಮತಿ ಶೈಲಾ ಪವಾರ, ಸುರೇಖಾ ಸೈದಾಪುರ,
ಸಂಗಪ್ಪ ಡೋಣಿ, ಶಿವಲಿಂಗ ಘಂಟಿ, ಹಣಮಂತ ಬುರುಡ, ಬಿ ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಶ್ರೀದೇವಿ ಸೊರಗಾಂವಿ,ವೃತ್ತಿ ಪರ ನಿರ್ದೇಶಕರಾದ ಅಶೋಕಗೌಡ ಪಾಟೀಲ, ಪಲ್ಲವಿ ಜಾಧವ, ಶ್ರೀಮತಿ ನೀಲವ್ವ ಟಿರ್ಕಿ, ಪ್ರಭು ಕುಳ್ಳೊಳ್ಳಿ, ದೀಪಾ ಮಾಂಗ, ಪ್ರಧಾನೇಪ್ಪಾ ಗೋಲಭಾಂವಿ, ಬಸವರಾಜ ನ್ಯಾಮಗೌಡ, ಗುರುಲಿಂಗಪ್ಪ ಖೋತ, ಮಲ್ಲಪ್ಪ ಉಳ್ಳಾಗಡ್ಡಿ, ಪಿಗ್ಮಿ ಸಂಗ್ರಕಾರರಾದ ವಿನೋದ ಕಡಪಟ್ಟಿ, ಪ್ರಕಾಶ ಗೋಲಭಾವಿ, ಮಹಾದೇವಿ ಉಳ್ಳಾಗಡ್ಡಿ ಸೇರಿದಂತೆ ಹಲವರು ಇದ್ದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 