ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ

ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ Bring cricketer Dhoni to Belagavi: Students submit unique request to the DC.

ಬೆಳಗಾವಿ : ಕ್ರಿಕೆಟ್ ದಿಗ್ಗಜ ಎಂ.ಎಸ್.ಧೋನಿ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುವುದರ ಜೊತೆಗೆ ಮಹೇಂದ್ರಸಿAಗ್ ಧೋನಿ ಅವರನ್ನು ಬೆಳಗಾವಿ ನಗರಕ್ಕೆ ಅಹ್ವಾನಿಸುವಂತೆ ಹಾಗೂ ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ನೀಡುವಂತೆ ಸಾಮಾಜಿಕ ಕಳಕಳಿ ತೋರಿದ ಬೆಳಗಾವಿಯ ಪುಟ್ಟ, ಪುಟ್ಟ ವಿದ್ಯಾರ್ಥಿಗಳ ತಂಡವು ಜಿಲ್ಲಾಧಿಕಾರಿಗಳಲ್ಲಿ ವಿನೂತನ ಮನವಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಎಂ.ಎಸ್.ಧೋನಿ ಅವರನ್ನು ಬೆಳಗಾವಿಗೆ ಕರೆತರಲು ಸಾಧ್ಯವಾದಷ್ಟು ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

   ಮಂಗಳವಾರ ನಗರದ ವಿವಿಧ ಶಾಲೆ ಹಾಗೂ ಕಾಲೇಜುಗಳ ಪುಟ್ಟ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ಅವರನ್ನು ಭೇಟಿ ಮಾಡಿ, ಖ್ಯಾತ್ ಕ್ರಿಕೇಟಿಗ್ ಮಹೇಂದ್ರಸಿAಗ್ ಧೋನಿ ಅವರ ಜನ್ಮದಿನದ ಅಂಗವಾಗಿ ಶುಭಾಶಯಗಳನ್ನು ತಿಳಿಸಿದರು. ಅಲ್ಲದೆ ಇದೇ ವೇಳೆ, ಮಹೇಂದ್ರಸಿAಗ್ ಧೋನಿ ಅವರನ್ನು ಬೆಳಗಾವಿಗೆ ಆಹ್ವಾನಿಸಲು ಜಿಲ್ಲಾಡಳಿತ ಮುಂದಾಗಬೇಕೆAದು ವಿನೂತನ ಮನವಿ ಸಲ್ಲಿಸಿದರು.

     ಭೇಟಿಯ ವೇಳೆ ಕಳೆದ 15 ದಿನಗಳಿಂದ ಜಿಲ್ಲೆಯ ವಿಪತ್ತು ನಿರ್ವಹಣಾ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿರುವ ಜಿಲ್ಲಾಧಿಕಾರಿಗಳ ಕಾರ್ಯವನ್ನು ವಿದ್ಯಾರ್ಥಿಗಳು ಶ್ಲಾಘಿಸಿ ಅಭಿನಂದಿಸಿದರು. ಇದರ ಜೊತೆಗೆ, ಬೆಳಗಾವಿ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿನಾಯಿಗಳ ಸಮಸ್ಯೆಯನ್ನೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

     ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬೀದಿನಾಯಿಗಳ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಮುಂದಿನ ಮಹತ್ವದ ಸಭೆಗೆ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಿದರು. ವಿದ್ಯಾರ್ಥಿಗಳ ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಎಂ.ಎಸ್.ಧೋನಿ ಅವರನ್ನು ಬೆಳಗಾವಿಗೆ ಕರೆತರಲು ಸಾಧ್ಯವಾದಷ್ಟು ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಮಾವಿನ ಸಸಿಯನ್ನು ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದರು. ಈ ಭೇಟಿಯ ಉದ್ದೇಶವನ್ನು ದೇವಿಕಾ ಖನ್ನೂಕರ್ ವಿವರಿಸಿದರು. ಅವರೊಂದಿಗೆ ಶಿವತೇಜ್ ಖನ್ನೂಕರ್, ಅಹಲ್ಯಾ ಹೊಸೂರ್ಕರ್, ಅರ್ಜುನ್ ಹೊಸೂರ್ಕರ್, ಸಾರ್ಥಕ್ ಸಾಯನೇಕರ್, ವೈಭವಿ ಸಾಯನೇಕರ್, ಶಂತನು ಖನ್ನೂಕರ್, ಶರಯೂ ಖನ್ನೂಕರ್, ಅಥರ್ವ ಸಂತೋಷ್ ಪವಾರ್, ಆದಿತಿ ಸಾಳುಂಖೆ, ಅನನ್ಯ ಸಾಳುಂಖೆ, ಸ್ವರಾಜ್ ಖನ್ನೂಕರ್, ರುದಿತಾ ಪವಾರ್, ಸ್ವಯಂ ಪವಾರ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

     ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರ ಸಾಮಾಜಿಕ ಜಾಗೃತಿ, ನಾಗರಿಕ ಪ್ರಜ್ಞೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತೋರಿದ ಕಾಳಜಿಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಯುವ ಪೀಳಿಗೆ ಆಡಳಿತದೊಂದಿಗೆ ನೇರವಾಗಿ ಸಂವಾದ ನಡೆಸಿ ಸಮಾಜಮುಖಿ ವಿಚಾರಗಳನ್ನು ಮುಂದಿಡುತ್ತಿರುವುದು ಪ್ರಶಂಸನೀಯ ಬೆಳವಣಿಗೆಯಾಗಿದೆ.