ಮೂವರ ಸರಗಳ್ಳರ ಮಾಲು ಸಮೇತ ಬಂಧನ

ಮಹಾಲಿಂಗಪುರ , 14: ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮೂವರು ಸರಗಳ್ಳರನ್ನು ಮಾಲು ಸಮೇತ ಸೆರೆ ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಮೂವರೂ ಜಮಖಂಡಿ ತಾಲೂಕು ಮದುರಖಂಡಿ ಗ್ರಾಮದ ಲಕ್ಕಪ್ಪ ಬೋರವ್ವ ಮಾದರ, ವಿಠ್ಠಲ ಮಹಾದೇವ ಮಾದರ ಮತ್ತು ಕಲ್ಲಪ್ಪ ಧರ್ಮಣ್ಣ ಮಾದರ ಸೆರೆಯಾಗಿದ್ದಾರೆ. ತಾವು ಸರಗಳ್ಳರಾಗಿದ್ದು, ಮುಧೋಳ, ಲೋಕಾಪುರ, ಆಲಗೂರ ಮತ್ತು ಚಿಮ್ಮಡ ಗ್ರಾಮಗಳಲ್ಲಿ ಒಂಟಿ ಹೆಣ್ಣು ಮಕ್ಕಳನ್ನು ಟಾಗರ್ೆಟ್ ಮಾಡಿ ಚಿನ್ನಾಭರಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ 2 ಬೈಕ್ ಮತ್ತು 4.80 ಲಕ್ಷ ಮೌಲ್ಯದ 162 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್ಪಿ ಹಾಗೂ ಸಿಪಿಐ ಕೆ.ಬಿ.ಬನ್ನೆ ಅವರ ಮಾರ್ಗದರ್ಶನದಲ್ಲಿ ಪಿಎಸೈ ರವಿಕುಮಾರ ಧರ್ಮಟ್ಟಿ, ಡಿ.ಎಂ.ಅತ್ರಾವತ್, ಆರ್. ಎಂ. ಮರಿಯನ್ನವರ, ಶ್ರೀಕಾಂತ ಬೆನಕಟ್ಟಿ, ಬಸವರಾಜ ಮುದಿಬಸನಗೌಡ, ಎಂ.ಡಿ.ಸವದಿ, ಮಾನಿಂಗ್ ಬುಗಟಿ, ಎ.ಎಸ್. ಮದರಖಂಡಿ, ಎಂ.ಎನ್.ಕಾಗವಾಡ ಸೇರಿ ಪೊಲೀಸ್ ಸಿಬ್ಬಂದಿ ಕಳ್ಳರ ಪತ್ತೆ ಪ್ರಕರಣದಲ್ಲಿ ಮಾಡಿದ ಸಾಧನೆಗೆ ಎಸ್ಪಿ ಸಾಹೇಬರು ಪ್ರಶಂಸೆಯೊಂದಿಗೆ ಬಹುಮಾನ ಘೋಷಿಸಿದ್ದಾರೆ.