ವರ್ಷೀತಪ ತಪಸ್ವಿಗಳ ಹಸ್ತಿನಾಪುರ ಯಾತ್ರೆ ಸಂಪನ್ನ
The annual pilgrimage of the ascetics to Hastinapura is complete
ಹುಬ್ಬಳ್ಳಿ 30: ಭಗವಾನ್ ಆದಿನಾಥರ ಅಕ್ಷಯ ತೃತೀಯಾ ಪಾರಣೆಯ ಪುಣ್ಯಭೂಮಿ ಹಾಗೂ ಜೈನ ಧರ್ಮದ ಪ್ರಮುಖ ತೀರ್ಥಗಳಲ್ಲಿ ಒಂದಾದ ಹಸ್ತಿನಾಪುರ ತೀರ್ಥದ ತೀರ್ಥಯಾತ್ರೆಯನ್ನು ಹುಬ್ಬಳ್ಳಿಯ ವರ್ಷೀತಪ ವ್ರತಾಚರಣೆ ಮಾಡುತ್ತಿರುವ ತಪಸ್ವಿ ಸಹೋದರಿಯರು ಹಾಗೂ ಸಹೋದರರು ಯಶಸ್ವಿಯಾಗಿ ಪೂರೈಸಿದರು.
ಯಾತ್ರೆಯ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ಸ್ಥಳೀಯ ಜೈನ ಸಮಾಜ ಮತ್ತು ಭಕ್ತರು ತಪಸ್ವಿಗಳಿಗೆ ಸಾತಾ, ಬಿಯಾಸನಾ, ವಾಸ್ತವ್ಯ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದರು. ಯಾತ್ರಾ ಸಮಿತಿಯ ಸಂಯೋಜಕರಾದ ಮದನ್ ತಾತೇಡ್ ಅವರು, ವರ್ಷೀತಪ ಆಚರಿಸುತ್ತಿರುವ ತಪಸ್ವಿಗಳು ಹಸ್ತಿನಾಪುರ ದರ್ಶನದ ಆಶಯ ವ್ಯಕ್ತಪಡಿಸಿದಾಗ ಸಮಿತಿಯ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಯೋಜನೆ ರೂಪಿಸಿ ಸಂಪೂರ್ಣ ಯಾತ್ರಾ ಸಂಯೋಜಿಸಲಾಗಿದೆ ಎಂದರು. ಸಹ-ಸಂಯೋಜಕರಾದ ಅಶೋಕ್ ಪಾಲ್ಗೋಟಾ ಯಾತ್ರೆಯ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ಸ್ಥಳೀಯ ಜೈನ ಸಮಾಜ ಮತ್ತು ಭಕ್ತರಿಂದ ತಪಸ್ವಿಗಳಿಗೆ ಸಾತಾ, ಬಿಯಾಸನಾ, ವಾಸ್ತವ್ಯ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದರೆಂದರು. ಸಹ-ಸಂಯೋಜಕರಾದ ಪ್ರಕಾಶ್ ಚೋರಡಿಯಾ, ಸಮಿತಿಯ ಹಿರಿಯ ಸದಸ್ಯ ಜುಗರಾಜ್ ಜೈನ್, ಸಮಿತಿಯ ಕಾರ್ಯದರ್ಶಿಂ ಸುಭಾಷ್ ಡಂಕ್, ಲಕ್ಷ್ಮೀ ಮದನ್ ತಾತೇಡ್ ಮುಂತಾದವರು ಎಲ್ಲ ಉಸ್ತುವಾರಿ ನೋಡಿಕೊಂಡರು.
ತೀರ್ಥಯಾತ್ರೆ ಪೂರ್ಣಗೊಂಡು ಹುಬ್ಬಳ್ಳಿಗೆ ಆಗಮಿಸಿದ ವೇಳೆ, ಕುಟುಂಬಸ್ಥರು, ಸಮಾಜದವರು ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಿದರು. ವರ್ಷೀತಪವು ಜೈನ ಧರ್ಮದಲ್ಲಿನ ಅತ್ಯಂತ ಕಠಿಣ, ದೀರ್ಘಕಾಲೀನ ಮತ್ತು ಮಹತ್ವದ ತಪಸ್ಸುಗಳಲ್ಲಿ ಒಂದಾಗಿದ್ದು, ಈ ತಪಸ್ಸಿನಡಿ ತಪಸ್ವಿಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ವಿಶೇಷ ಸಂಯಮ, ಸಾಧನೆ, ನಿಯಮಗಳು ಹಾಗೂ ಆತ್ಮಸಂಯಮವನ್ನು ಪಾಲಿಸಿಕೊಂಡು ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಉನ್ನತಿಯ ಮಾರ್ಗದಲ್ಲಿ ಮುಂದುವರೆಯುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 