ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರು: ಎಚ್ಡಿಡಿ

ಗೋಕಾಕ, 2:  ತಾವು ಉತ್ತರ ಕನರ್ಾಟಕ. ಮುಂಬೈ ಕರ್ನಾ ಟಕದ ವಿರೋಧಿ ಅಲ್ಲ. ಪರಿಶಿಷ್ಟ ಜಾತಿ ಜನಾಂಗ ಅಥವಾ ಲಿಂಗಾಯತರ ವಿರೋಧಿ ಅಲ್ಲ. ತಮ್ಮ ಮೇಲೆ ಪ್ರತಿಪಕ್ಷಗಳು ಮಾಡುತ್ತಿರುವ  ಆರೋಪಗಳು ಸತ್ಯಕ್ಕೆ ಹಾಗೂ ವಾಸ್ತವಕ್ಕೆ ದೂರವಾಗಿವೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.

ಜೆಡಿಎಸ್ ಅಭ್ಯಥರ್ಿ ಅಶೋಕ ಪೂಜಾರಿ ಅವರ ನಿವಾಸದಲ್ಲಿ ಸೋಮವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಗಳಾದಾಗ 8 ಜನ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೆ. 5 ಜನ ಪರಿಶಿಷ್ಟ ಜಾತಿಯ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೆ. ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ ಸೇರಿದಂತೆ ಅನೇಕ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಜನಾಂಗದ ನಾಯಕರನ್ನು ಬೆಳೆಸಿದ್ದೇನೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಅವರುಗಳು ಬೇರೆ ಬೇರೆ ಪಕ್ಷಗಳಲ್ಲಿ ಸೇರಿಕೊಂಡು ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಈ ಭಾಗದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣ ಮತ್ತು ಮಾರ್ಕಂಡೇಯ ಯೋಜನೆಗಳು ಜಾರಿಯಾಗಲು ನಾನೇ ಕಾರಣ. ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗಳಿಗೆ 200 ಕೋಟಿ ರೂ. ಕೇಳಿದ್ದೆ. ಕೇಂದ್ರದಿಂದ ನಿರೀಕ್ಷಿತ ಅನುದಾನ ಬರದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಭಾಗಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದೇನೆ ಎಂದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಈ ಭಾಗದ ಕೊಡುಗೆ ಅಪಾರವಾಗಿದೆ.  ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಕೆರೆಗಳು ತುಂಬಿವೆ ಎಂದು ಬಿಜೆಪಿಯ ಮುಖಂಡರುಗಳು ಹೇಳುತ್ತಿರುವದೂ ಹಾಸ್ಯಾಸ್ಪದ ವಾಗಿದೆ. ನೆರೆಯಿಂದ ಕೆರೆಗಳು ತುಂಬಿವೆ. ನೆರೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಜನರ ನೆರವಿಗೆ ಬರುವ ಬದಲು ಹಾಸ್ಯಾಸ್ಪದವಾದ ಸಮರ್ಥನೆಗಳು ಮಾಡಿಕೊಳ್ಳುತ್ತಿರುವದು ಕಳವಳವನ್ನುಂಟು ಮಾಡಿದೆ ಎಂದರು.

ಪತ್ರಿಕಾ ಗೋಷ್ಠಿಯ ನಂತರ ಮತಕ್ಷೇತ್ರದ ಅನೇಕ ಗ್ರಾಮಗಳಲ್ಲಿ ರೋಡ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಪಕ್ಷದ ಅಭ್ಯಥರ್ಿ ಅಶೋಕ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು