ಲೋಕದರ್ಶನ ವರದಿ
ರಾಯಬಾಗ 31: ಕೃಷ್ಣಾನದಿ ಪ್ರವಾಹ ಪೀಡಿತ ಸಂತ್ರಸ್ತ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಮನೆಗಳ ಸಂಬಂಧವಾಗಿ ದಿಗ್ಗೇವಾಡಿ ಗ್ರಾ.ಪಂ.ಅಧ್ಯಕ್ಷ, ಪಿಡಿಒ ಮತ್ತು ಸಿಬ್ಬಂದಿ ವಿರುದ್ಧ ಗ್ರಾಮದ ಕೆಲ ಜನರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾರವಾಗಿದ್ದು, ಅಂತಹ ವ್ಯಕ್ತಿಗಳ ಅರ್ಜಿಗಳನ್ನು ಮಾನ್ಯ ಮಾಡಬಾರದೆಂದು ಒತ್ತಾಯಿಸಿ ದಿಗ್ಗೇವಾಡಿ ಗ್ರಾಮಸ್ಥರು ಶುಕ್ರವಾರದಂದು ತಾ.ಪಂ.ಇಒ ಮತ್ತು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ದಿಗ್ಗೇವಾಡಿ ಗ್ರಾಮವು 2019ರ ಅಗಸ್ಟ್ದಲ್ಲಿ ಕೃಷ್ಣಾನದಿ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಡೆಯಾಗಿ ತುಂಬಾ ಹಾನಿಗೊಳಗಾಗಿದ್ದರಿಂದ, ಹಾನಿಗೊಳಗಾದ ಮನೆಗಳ ಸವರ್ೇ ಮಾಡಲು ನೋಡಲ ಅಧಿಕಾರಿ, ಇಂಜನೀಯರ, ಗ್ರಾ.ಪಂ.ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿ ಒಳಗೊಂಡ ತಂಡವು ಪಾರದರ್ಶಕವಾಗಿ ಸರ್ವೇ ಮಾಡಿ, ಕೆಟಗರಿ ಎಬಿಸಿ ಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿದ್ದರು. ಆದರೆ ಗ್ರಾಮದ ಕೆಲವೊಂದು ವ್ಯಕ್ತಿಗಳು ರಾಜಕೀಯ ಸ್ವಾರ್ಥಕ್ಕಾಗಿ ಗ್ರಾ.ಪಂ.ಅಧ್ಯಕ್ಷರು, ಪಿಡಿಒ, ಗ್ರಾಮ ಲೇಕ್ಕಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಿರುಕುಳ ನೀಡಿ, ಸಿ ಕೆಟಗರಿಯಲ್ಲಿನ ಫಲಾನುಭವಿಗಳನ್ನು ಎ ಮತ್ತು ಬಿ ಕೆಟಗರಿಗಳಿಗೆ ಸೇರುವಂತೆ ಒತ್ತಡ ಹಾಕುತ್ತಿದ್ದಾರೆಂದು ಮನವಿಯಲ್ಲಿ ಆರೋಪಿಸಿದರು.
ಪ್ರವಾಹ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಗ್ರಾ.ಪಂ ಅಧ್ಯಕ್ಷರು, ಪಿಡಿಒ ಮತ್ತು ಸಿಬ್ಬಂದಿಗಳು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದರೂ, ಅವರ ವಿರುದ್ಧ ಸುಳ್ಳು ಆರೋಪ ಮಾಡಿ ಅನಾವಶ್ಯಕವಾಗಿ ಬೆಳಗಾವಿ ಸಿಇಒ ಮತ್ತು ತಾ.ಪಂ.ಇಒ ಹಾಗೂ ತಹಶೀಲ್ದಾರರವರಿಗೆ ಅರ್ಜಿಗಳನ್ನು ನೀಡುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗುತ್ತಿದೆ. ಮತ್ತು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿಗೊಳ್ಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
ನೋಡಲ್ ಅಧಿಕಾರಿಗಳು, ಇಂಜನೀಯರ್, ಪಿಡಿಒ ಮತ್ತು ಗ್ರಾ.ಪಂ. ಅಧ್ಯಕ್ಷ ಹಾಗೂ ಸಿಬ್ಬಂದಿಗಳ ವಿರುದ್ಧ ಸುಳ್ಳು ಆರೋಪ ಮಾಡಿ ಅರ್ಜಿಗಳನ್ನು ಮತ್ತು ಮನವಿಗಳನ್ನು ಸಲ್ಲಿಸುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿಯನ್ನು ಸ್ವೀಕರಿಸಿದ ತಾ.ಪಂ.ಇಒ ಪ್ರಕಾಶ ವಡ್ಡರ ಹಾಗೂ ಉಪತಹಶೀಲ್ದಾರ ಪರಮಾನಂದ ಮಂಗಸೂಳಿ ಅವರು, ಮನವಿಯನ್ನು ಪರೀಶಿಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾ.ಪಂ.ಅಧ್ಯಕ್ಷ ಮಹಾದೇವ ಚೌಗುಲೆ, ಅಮರ ನಾಗರಾಳೆ, ಶಾಲವ್ವ ಕಡಾಳೆ, ವಿಜಯಾ ಕಡಾಳೆ, ಭಾಗವ್ವ ಖಂಡೇರಾಜುರೆ, ಅಶೋಕ ಚೌಗಲಾ, ಅಜೀತ ಗಂಗಾಯಿ, ಸುರೇಶ ನಾಗರಾಳೆ, ಮಲ್ಲಪ್ಪ ಮಂಗಸೂಳೆ, ನಾಗೇಶ ಚೌಗುಲೆ, ಲಗಮನ್ನ ನಾಗರಾಳೆ, ಶಿವಚಂದ್ರ ನಾಗರಾಳೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.