ಲೋಕದರ್ಶನ
ವರದಿ
ವಿಜಯಪುರ 24
: ಇಂಜನಿಯರಿಂಗ್
ಕ್ಷೇತ್ರದಲ್ಲಿ ಡಬಲ್ ಡಿಗ್ರಿ ಪಡೆದರೂ
ಸಹ ಕೃಷಿ ಕ್ಷೇತ್ರವನ್ನು ನೆಚ್ಚಿಕೊಂಡು
ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ನನಗೆ ತೃಪ್ತಿ ತಂದಿದೆ.
ಭೂಮಿತಾಯಿಯ ಸೇವೆ ಮಾಡು ಅವಕಾಶ
ದೊರಕಿದ್ದು ನನ್ನ ಸೌಭಾಗ್ಯ ಎಂದು
ಖ್ಯಾತ ಪ್ರಗತಿಪರ ರೈತ ಮಹಿಳೆ ಕವಿತಾ
ಮಿಶ್ರಾ ಹೇಳಿದರು.
ಭಾರತ ವಿಕಾಸ ಸಂಗಮ,
ಶ್ರೀ ಸಿದ್ದೇಶ್ವರ ಸಂಸ್ಥೆ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಭಾರತ
ಸಂಸ್ಕೃತಿ ಉತ್ಸವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಶ್ರೀ ಸಿದ್ದೇಶ್ವರ
ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ `ಮಾತೃ ಸ್ಪಂದನ' ಸಮಾವೇಶದಲ್ಲಿ
ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಂಡ
ಅವರು, ಇಂಜನಿಯರಿಂಗ್ನಲ್ಲಿ ಡಬಲ್ ಡಿಗ್ರಿ ಪಡೆದಿದ್ದೇ,
ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯ ಸಂದರ್ಶನವೂ ಸಹ ಹುಡುಕಿಕೊಂಡು ಬಂದಿತ್ತು.
ಆದರೆ ಕಾರಣಗಳಿಂದ ಸಂದರ್ಶನಕ್ಕೆ ಹೋಗಲಿಲ್ಲ. ಆಗ ನನ್ನ ಒಲವು
ಸಾಂಪ್ರದಾಯಿಕ ಕೃಷಿಯತ್ತ ವಾಲಿತು. ಬರಡು ಭೂಮಿಯಲ್ಲಿ ಶ್ರೀಗಂಧ
ಬೆಳೆಯಬಹುದು ಎಂಬ ಸಂಕಲ್ಪ ಮಾಡಿದೆ.
ಈ ಸಂಕಲ್ಪಕ್ಕೆ ಯಶಸ್ಸೂ ಸಹ ದೊರಕಿತು. ಅಂತರಾಜ್ಯದಲ್ಲಿಯೂ
ಬರಡು ಭೂಮಿಯಲ್ಲಿ ಬೆಳೆದು ಸೌಗಂಧ ಬೀರುವ ಶ್ರೀಗಂಧ ಸಸಿಗಳನ್ನು ಒಯ್ಯಲಾಗಿದೆ, ಇದು ಒಂದು ಹೆಗ್ಗಳಿಕೆಯ
ವಿಷಯ. ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು
ಸಾಧನೆ ಮಾಡುವ ಅವಕಾಶಗಳಿವೆ, ಈ ಕ್ಷೇತ್ರದತ್ತ ಮಹಿಳೆಯರು
ಆಸಕ್ತಿ ತೋರಬೇಕು ಎಂದು ಕರೆ ನೀಡಿದರು.
ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ
ಪಾಟೀಲ ಸೇಡಂ ಮಾತನಾಡಿ, ವಿಜಯಪುರಲ್ಲಿ
ನಡೆಯಲಿರುವ ಭಾರತ ವಿಕಾಸ ಸಂಗಮ
ಸಮಾವೇಶವನ್ನು ಪ್ರತಿಯೊಬ್ಬರು ಯಶಸ್ಸುಗೊಳಿಸಬೇಕು ಎಂದು ಕೋರಿದರು.
ಬುರಾಣಪೂರದ ಮಾತೋಶ್ರೀ ಯೋಗೇಶ್ವರಿ ಮಾತಾಜಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ಮಾತಾ ನೀಲೂಜಿ ಅಕ್ಕ,
ಮಾತೋಶ್ರೀ ಕೈವಲ್ಯಮಯಿ ಮಾತಾಜಿ, ಡಾ.ಸುನೀತಾ ದೇವಾನಂದ
ಚವ್ಹಾಣ, ಶೈಲಜಾ ಪಾಟೀಲ ಯತ್ನಾಳ, ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂ.ಗು. ಸಜ್ಜನ,
ಪಲ್ಲವಿ ಪಾಟೀಲ ಸೇಡಂ, ಪಾಲಿಕೆ ಸದಸ್ಯೆ ಲಕ್ಷ್ಮೀ ಕನ್ನೊಳ್ಳಿ ಮೊದಲಾದವರು ಪಾಲ್ಗೊಂಡಿದ್ದರು. ಸಂಗನಗೌಡ ಪಾಟೀಲ ಸ್ವಾಗತಿಸಿದರು.