ಯೋಗಿ ಸರ್ಕಾರವು ಶಾಸಕರ ಸಂಬಳ ಕಡಿತಗೊಳಿಸುವ ಸಾಧ್ಯತೆ

ಲಕ್ನೋ, ಏ.7 ,ಕೇಂದ್ರದ ಸರ್ಕಾರದಂತೆ, ಉತ್ತರ ಪ್ರದೇಶ ಸರ್ಕಾರವು ಶಾಸಕರು ಮತ್ತು ಮಂತ್ರಿಗಳ ವೇತನವನ್ನು ಶೇಕಡಾ 30 ರಷ್ಟು ಕಡಿತಗೊಳಿಸುವ ಸಾಧ್ಯತೆ  ಇದೆ. ಈ ನಿಟ್ಟಿನಲ್ಲಿ ಅಧಿಸೂಚನೆಯ ಮೂಲಕ ಸರ್ಕಾರವು ಸಂಪುಟದಲ್ಲಿ ಪ್ರಸ್ತಾವನೆಯನ್ನು ಅನುಮೋದಿಸುವ ಮೂಲಕ ಶೀಘ್ರದಲ್ಲೇ ಸುಗ್ರೀವಾಜ್ಞೆಯನ್ನು ತರುವ ಸಾಧ್ಯತೆ ಇದೆ. ಕೋವಿಡ್-19 ನಿಧಿ ಹಣವನ್ನು ಸಂಗ್ರಹಿಸಲು ಶಾಸಕರು ಮತ್ತು ಸಚಿವರ ವೇತನವನ್ನು ಕಡಿತಗೊಳಿಸುವುದರ ಜೊತೆಗೆ ಮುಂದಿನ ಎರಡು ವರ್ಷಗಳವರೆಗೆ ನೀಡಲಾಗುವ ಶಾಸಕರ ಅಭಿವೃದ್ಧಿ ನಿಧಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದೂಡಬಹುದು ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ.ವಿಪತ್ತಿನ ಈ ಸಮಯದಲ್ಲಿ ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮವನ್ನು ಬೆಂಬಲಿಸುತ್ತವೆ ಎಂದು ಅವರು ಹೇಳಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಪಾರದರ್ಶಕತೆಯಿಂದ ಮಾಡಲಾಗುವುದು. ಈ ಹಣವನ್ನು ಕೋವಿಡ್ -19 ಪೀಡಿತರ ಜನರಿಗಾಗಿ  ಬಳಸಲಾಗುತ್ತದೆ. ಸೋಮವಾರ, ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಸರ್ಕಾರವು ಮಂತ್ರಿಗಳು ಮತ್ತು ಸಂಸದರ ವೇತನವನ್ನು ಕಡಿತಗೊಳಿಸಿದೆ ಮತ್ತು ಸಂಸದರ ನಿಧಿಯನ್ನು ಸಹ ಎರಡು ವರ್ಷಗಳವರೆಗೆ ಸ್ಥಗಿತಗೊಳಿಸಿದೆ ಎಂದು ತಿಳಿದಿದೆ.