ನಟ ವಿಶ್ವಪ್ರಕಾಶ ಮಲಗೊಂಡಗೆ ಪ್ರಶಸ್ತಿ
ವಿಜಯಪುರ 16: ಸಿದ್ದಶ್ರೀ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಹುನಗುಂದ ಶಾಸಕ ಡಾ. ವಿಜಯಾನಂದ ಕಾಶಪ್ಪನವರ ಹಾಗೂ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ, ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ವಿಜಯಪುರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಪ್ರಶಸ್ತಿ ಹಾಗೂ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.
ಬುಧವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವಪ್ರಕಾಶ ನಟನೆಯ, ಮಾಧವಾನಂದ ಶೇಗುಣಶಿ ನಿರ್ಮಾಣದ, ರಾಜಾ ರವಿಶಂಕರ ನಿರ್ದೇಶನದ ಸಂಗಮೇಶ್ವರ ಮಹಾರಾಜರು ಭಕ್ತಿ ಪ್ರದಾನ ಚಿತ್ರದ ಹಾಡು ಭಾಗವಹಿಸಿತ್ತು. ನಂತರ ಅತ್ತುತ್ಯಮ ಭಕ್ತಿ ಗೀತೆ ಎಂದು ಪ್ರಶಸ್ತಿ ಹಾಗೂ ಪ್ರಶಂಸನಾ ಪತ್ರ ನೀಡಿದರು.ಚಲನಚಿತ್ರೋತ್ಸವದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳು, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಕಿನ್ನಾಳ ರಾಜ, ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ, ಮಾಸ್ಟರ್ ಆನಂದ, ಗಾಯಕ ಜಸ್ಕರಣ ಸಿಂಗ್, ಡಾ.ಆರ್ ಎಸ್ ರಾಜು, ಚಿತ್ರತಂಡದವರಾದ ಛಾಯಾಗ್ರಾಹಕ ರವಿ ಕುಂಟೋಜಿ, ಸಂಕಲನಕಾರ ಬಸವರಾಜ ಬಡಿಗೇರ, ಸಚಿನ ಶೆಟ್ಟಿ, ಸಿನಿಮಾ ಪ್ರಚಾರಕರ್ತ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ, ಸೇರಿದಂತೆ ಇನ್ನಿತರರು ಇದ್ದರು.