ಲೋಕದರ್ಶನ ವರದಿ
ಕೊಪ್ಪಳ: ನಗರದ ಡಾ. ಸಿಂಪಿ ಲಿಂಗಣ್ಣ ರಸ್ತೆ ಯೂರೋಪ್ ಸ್ಟೈಲ್ ಟೈಲರ್ ಹತ್ತಿರ ಬಡ ನಿರ್ಗತಿಕರಿಗೆ ಆಹಾರ, ಆಹಾರ ಸಾಮಗ್ರಿ, ಗೃಹ ಬಳಿಕೆಯ ಸಾಮಗ್ರಿ, ಬಟ್ಟೆ, ಔಷಧಿ ಮಾತ್ರೆಗಳು 24ಗಂಟೆಗಳ ಕಾಲ ಕರುಣೆಯ ಗೋಡೆ ಎಂಬ ಉಚಿತ ಸೇವಾ ಕೇಂದ್ರ ತೆರೆಯಲಾಗಿದೆ. ಅಯ್ಯುಬ್ ಹುರಕಡ್ಲಿ ರವರ ಸ್ನೇಹಿತರ ಬಳಗ ಈ ಕೇಂದ್ರ ಪ್ರಾರಂಭಕ್ಕೆ ಶ್ರಮಿಸಿದ್ದಾರೆ.
ಬಡವರಿಗಾಗಿ ತೆರೆದಿರುವ ಈ ಕೇಂದ್ರದಲ್ಲಿ ಸೇವಾ ಮಾಡಲಿಚ್ಚಿಸುವವರು ಆಹಾರ ಸಾಮಗ್ರಿ, ಗೃಹ ಬಳೆಕೆಯ ಸಾಮಗ್ರಿ, ಬಟ್ಟೆ, ಔಷಧಿ ಮಾತ್ರೆಗಳು ಇತ್ಯಾದಿ ವಸ್ತುಗಳನ್ನು ಕರುಣೆಯ ಗೋಡೆ ಕೇಂದ್ರದಲ್ಲಿ ಇಡಬಹುದು. ಅದನ್ನು ಪಡೆಯಲಿಚ್ಚಿಸುವವರು ಯಾವದೇ ಸಮಯದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಇಲ್ಲಿಂದ ಪಡೆಯಬಹುದು ಹಾಗೂ ಇಟ್ಟು ಇತರರಿಗೆ ಸಹಕಾರಿಯಾಗಬಹುದು.
ಈಗಾಗಲೇ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಈ ನೂತನ ಸೇವಾ ಕೇಂದ್ರಕ್ಕೆ ಸಾಮಾಗ್ರಿಗಳನ್ನು ಪೂರೈಸುತ್ತಿದ್ದಾರೆ ಮತ್ತು ಅವಶ್ಯಕತೆ ಇದ್ದವರು ಇಲ್ಲಿಂದ ಉಚಿತ ಪಡೆದುಕೊಳ್ಳುತ್ತಿದ್ದಾರೆ. ಬಡವರಿಗೆ ಸಹಾಯ ಮಾಡುಲು ಪ್ರಾರಂಭಿಸಿರುವ ಈ ಕರುಣೆಯ ಗೋಡೆ ಮಾದರಿಯಾಗಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರದಂದು ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ರಾಜು ಅಗಡಿ, ಅಯ್ಯುಬ್ ಹುರಕಡ್ಲಿ, ಗೌಸ್ ಸಾಬ್ ಸರದಾರ ಸೇರಿದಂತೆ ಸಾಹಿತಿ ಪತ್ರಕರ್ತ ಜಿ.ಎಸ್.ಗೋನಾಳ ಇತರರು ಭೇಟಿ ಮಾಡಿ ವೀಕ್ಷಿಸಿ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದರು.