ಸದ್ಗುಣಗಳನ್ನು ರೂಢಿಸಿಕೊಂಡಾಗಲೇ ಜೀವನ ದರ್ಶನ ಸಾರ್ಥಕ: ಮೃತ್ಯುಂಜಯ ಶ್ರೀ

ಲೋಕದರ್ಶನ ವರದಿ

ಶಿರಹಟ್ಟಿ 01: ಜೀವನ ದರ್ಶನ ದಂತಹ ಪ್ರವಚನಳಿಂದ ಶರಣರ ಸಂತ ಜೀವನಸಾಧನೆ ಮತ್ತು ಸಾಧಕರ ಜೀವನಯಶೋಗಾಥೆಯಿಂದ ಸದ್ಗುಣಗಳನ್ನು ತಿಳಿಕೊಂಡಾದ ನಂತರ ಅದರಂತೆ ನಡೆಯದೇ ಹೋದರೆ ಜೀವನ ದರ್ಶನ ಪ್ರವಚನ ಸಾರ್ಥಕವಾಗುವುದಿಲ್ಲ. ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ  ಪ್ರವಚನ ಮತ್ತು ಜೀವನ ಸಾರ್ಥಕವಾಗುತ್ತದೆ ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು. 

ಅವರು ಪಟ್ಣಣದ ಹತ್ತಿರ ಖಾನಾಪೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಮತ್ತು ಶ್ರೀ ಶರಣ ಬಸವೇಶ್ವರ ಮೋತರ್ಿಗಳ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ನಿಮಿತ್ಯ ವಾಗಿಏರ್ಪಡಿಸಲಾಗಿದ್ದ  "ಜೀವನ ದರ್ಶನ" ಪ್ರವಚನದ ಕಾರ್ಯಕ್ರಮದ 7ನೇ ದಿನ ಪ್ರವಚನದಲ್ಲಿ ಮಾತನಾಡಿದರು. 

ಭಗವಂತನು ಕೊಟ್ಟ ಬದುಕುನ್ನು ಸಾರ್ಥಕಪಡಿಸಕೊಳ್ಳಲು ಮುಂದಾಗಬೇಕು. ಬದುಕಿರುವವರೆಗೂ ಪರೋಪಕಾರ ಮಾಡುವ ಮನೋಭಾವವನನ್ನು ಬೆಳೆಸಿಕೊಳ್ಳಬೇಕು. ಬಡವರ ಬಗ್ಗೆ ಕರುಣೆಯನ್ನು ಹೊಂದುವುದು ಅವಶ್ಯ ಬಡತನ ಎಂಬ ನ್ಯೂನ್ಯತೆಯನ್ನು ಹಿಡಿದು ಬಡವರನ್ನು ದುರ್ಬಳಕೆ ಮಾಡಲು ಮುಂದಾಗದಿರಿ. ಅವರ ಕಷ್ಟಕ್ಕೆ ಸಹಾಯ ಮಾಡಿ, ಅವರಿಗೆ ನಮ್ಮಂತೆ ಬದುಕುವುದಕ್ಕೆ ಸಹಾಯ ಮಾಡಬೇಕು. ಇದು ನಿಜವಾದ ಮನುಷ್ಯತ್ವ. ಪ್ರತಿಯೊಬ್ಬರೂ ಜಾತಿ ಮತ ಎನ್ನದೇ ಮನಷ್ಯತ್ವದಿಂದ ಬಾಳಲು ಮುಂದಾಗಬೇಕು. ಗುರುಗಳನ್ನು ಮತ್ತು ದೇವರನ್ನು ಎಂದಿಗೂ ಮರೆಯಬಾರದು. ಮರೆತು ಬಾಳಿದರೆ ಅದೇ ನರಕ. ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಪಾತ್ರ ಹಿರಿದಾದು.ಆದ್ದರಿಂದ ನಮಗೆ ಜೀವನ ನಡೆಸುವ ಕರುಣೆಯನ್ನು ನೀಡಿದ ದೇವರನ್ನು ಸದಾವಕಾಲ ದ್ಯಾನಿಸುತ್ತ ಶಾಂತಿ ನೆಮ್ಮದಿಯ ಬದುಕನ್ನು ನಡೆಸಲು ಮುಂದಾಗಬೇಕೆಂದು ಹೇಳಿದರು.