ನವದೆಹಲಿ 01: ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ(ಎನ್ಪಿಎ-ನಾನ್ ಪಫರ್ಾಮಿಂಗ್ ಅಸೆಟ್) ಹೆಚ್ಚಳಕ್ಕೆ ಈ ಹಿಂದಿನ ಯುಪಿಎ ಸಕರ್ಾರವನ್ನು ದೂರಿದ ಪ್ರಧಾನಿ ನರೇಂದ್ರ ಮೋದಿ ಅವರು, ವಂಶಾಡಳಿತದ ಪರವಾಗಿ ಪಡೆದ ಸಾಲದ ಪ್ರತಿ ಪೈಸೆಯನ್ನು ವಸೂಲಿ ಮಾಡುವುದಾಗಿ ಶನಿವಾರ ಹೇಳಿದ್ದಾರೆ.
ಇಂದು ಬಹುನಿರೀಕ್ಷಿತ ಭಾರತೀಯ ಅಂಚೆಯ ಪಾವತಿ ಬ್ಯಾಂಕ್ ಸೇವೆ(ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್- ಐಪಿಪಿಬಿ)ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಹಿಂದಿನ ಆಡಳಿತದ ಅವಧಿಯಲ್ಲಿ ಬಹುತೇಕ ಬ್ಯಾಂಕ್ ಸಾಲಗಳು ಒಂದು ನಿಧರ್ಿಷ್ಟ ಕುಟಂಬದ ಆಪ್ತರಿಗೆ ಮಾತ್ರ ಮೀಸಲಾಗಿತ್ತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ನಂತರದಿಂದ 2008ರ ವರೆಗೆ 18 ಲಕ್ಷ ಕೋಟಿ ರುಪಾಯಿ ಸಾಲ ನೀಡಲಾಗಿದೆ. ಆದರೆ 2008ರ ನಂತರ ಕೇವಲ 6 ವರ್ಷಗಳಲ್ಲಿ 52 ಲಕ್ಷ ಕೋಟಿ ರುಪಾಯಿ ಸಾಲ ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಒಂದು ನಿಧರ್ಿಷ್ಟ ಕುಟುಂಬದ ಫೋನ್ ಕರೆ ಮೇರಗೆ ಸಾಲ ನೀಡಲಾಗಿದೆ ಎಂದು ನೇರವಾಗಿ ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪಿಸಿದೆ ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಕೆಟ್ಟ ಸಾಲಗಳಿಗೆ ಯುಪಿಎ ಸಕರ್ಾರವೇ ಕಾರಣ ಎಂದು ಆರೋಪಿಸಿದ ಪ್ರಧಾನಿ, ಯುಪಿಎ ಅವಧಿಯಲ್ಲಿ ಒಂದು ಬಗೆಯ 'ಫೋನ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಿತ್ತು. ಕೇವಲ ಒಂದು ಫೋನ್ ಕರೆ ಆಧರಿಸಿ ಬ್ಯಾಂಕುಗಳು ಕೋಟಿಗಟ್ಟಲೆ ಸಾಲ ನೀಡುತ್ತಿದ್ದವು' ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಈ ಪಾವತಿ ಬ್ಯಾಂಕು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಗಿದ್ದು, ಜಿಡಿಪಿ ಬೆಳವಣಿಗೆ ನಿರೀಕ್ಷೆಯಂತೆಯೇ ಪ್ರಗತಿಯಲ್ಲಿದೆ ಎಂದು ಪ್ರಧಾನಿ ತಿಳಿಸಿದರು.
ಎಲ್ಲಾ ಬ್ಯಾಂಕಿಂಗ್ ಸೇವೆಗಳು ಪೋಸ್ಟ್ಮನ್ ಮೂಲಕ ಜನರ ಮನೆಬಾಗಿಲಿಗೆ ಬರಲಿವೆ. ಐಪಿಪಿಬಿ ರೈತರಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ವಿಸ್ತರಣೆಯಲ್ಲಿ ಐಪಿಪಿಬಿ ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.