ಕೊಪ್ಪಳ 05: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ವೆಂಕಟಗಿರಿ ಹಾಗೂ ಅಲ್ಪ ಸಂಖ್ಯಾಂತರ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಂಗಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ''ರಾಷ್ಟ್ರೀಯ ಜಂತುಹುಳು ನಿವಾರಣ ದಿನ'' ಹಾಗೂ ''ಸ್ಪರ್ಶ ಕುಷ್ಠರೋಗ ಆಂದೋಲನ'' ಅಭಿಯಾನ ಕುರಿತು ಜಾಗೃತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಮಾತನಾಡಿ, 01ರಿಂದ 19ವರ್ಷದೊಳಗಿನ ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು, ಅನುದಾನಿತ, ಅನುದಾನ ರಹಿತ ಶಾಲೆ ಕಾಲೇಜಿನಲ್ಲಿ, ಐ.ಟಿ.ಐ, ಡಿಪ್ಲೋಮಾ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಹಾಗೂ ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳಿಗೂ ಜಂತು ನಿವಾರಕ ಅಲ್ಬೆಂಡಾಝೋಲ್ ಮಾತ್ರೆಯನ್ನು ನೀಡಲಾಗುತ್ತದೆ. ಜಂತುಭಾದೆಯು ಸೋಂಕು ಪೀಡಿತ ಮಗು ಜಂತು ಹುಳುಗಳ ಮೊಟ್ಟೆಯನ್ನು ಹೊಂದಿರುವ ಮಲದಿಂದ ಮಣ್ಣನ್ನು ಕಲುಷಿತಗೊಳಿಸುತ್ತದೆ. ಈ ಮೊಟ್ಟೆಗಳು ಮಣ್ಣಿನಲ್ಲಿ ಒಡೆದು ಮರಿಗಳಾಗುತ್ತವೆ. ಆಹಾರ ಅಥವಾ ಕೊಳಕು ಕೈಗಳ ಮೂಲಕ ಮರಿ ಹುಳುಗಳು ಮಕ್ಕಳ ದೇಹವನ್ನು ಸೇರಿ ಸೋಂಕು ಪೀಡಿತರಾಗುತ್ತಾರೆ. ನಂತರ ಮಗುವಿನ ದೇಹದಲ್ಲಿ ಪ್ರೌಢ ಹುಳುಗಳಾಗಿ ಬೆಳೆದು ಇನ್ನು ಹೆಚ್ಚಿನ ಜಂತುಹುಳುಗಳಾಗಿ ಕರುಳಿನಲ್ಲಿ ವಾಸಿಸಿ ಅನಾರೋಗ್ಯ ಪೀಡಿತರನ್ನಾಗಿ ಮಾಡುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತಹೀನತೆ, ಪೌಷ್ಠಿಕಾಂಶ ಕೊರತೆ, ಹಸಿವು ಆಗದೇ ಇರುವುದು, ನಿಶ್ಯಕ್ತಿ, ಹೊಟ್ಟೆ ನೋವು, ವಾಕರಿಕೆ, ತೂಕ ಕಡಿಮೆಯಾಗುವುದು ಇಂತಹ ಲಕ್ಷಣಗಳು ಕಂಡು ಬಂದರೆ ಜಂತುಹುಳುಗಳು ಬಾಧೆ ಇರುವುದು ಎಂದು ತಿಳಿದು ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಫೆಬ್ರವರಿ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿದ್ಯಾಥರ್ಿಗಳು ಆ ದಿನದಂದು ನೀಡುವ ಜಂತು ನಿವಾರಕ ಮಾತ್ರೆಯನ್ನು ಎಲ್ಲರೂ ಕಡ್ಡಾಯವಾಗಿ ತೆಗೆದುಕೊಂಡು ಬಾಯಲ್ಲಿ ಹಾಕಿಕೊಂಡು ಜಗಿದು ತಿನ್ನಬೇಕು. ಈ ಮಾತ್ರೆಯಿಂದ ಯಾವುದೇ ತೊಂದರೆಯಿಲ್ಲ ಎಂದು ಸಕರ್ಾರ ನಿರ್ದೇಶನ ನೀಡಿದೆ. ಮುಂಜಾಗ್ರತೆ ಕ್ರಮವಾಗಿ ಎಲ್ಲಾ ಮಕ್ಕಳು ನಡೆದಾಡುವಾಗ ಪಾದರಕ್ಷೆ ಧರಿಸುವುದು, ಶುದ್ಧವಾದ ನೀರು ಕುಡಿಯುವುದು, ಊಟದ ಮೊದಲು ಹಾಗೂ ಶೌಚಾಲಯಕ್ಕೆ ಹೋಗಿ ಬಂದ ನಂತರ ಕಡ್ಡಾಯವಾಗಿ ಸೋಪು ಬಳಸಿ ಕೈತೊಳೆದು ಕೊಳ್ಳುವುದು, ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಶುದ್ಧವಾದ ನೀರಿನಿಂದ ತೊಳೆದು ಬಳಸುವುದು. ವಾರಕ್ಕೊಮ್ಮೆ ಕೈಗಳ ಉಗುರುಗಳನ್ನು ಸ್ವಚ್ಛಗೊಳಿಸುವಂತೆ ವಿದ್ಯಾಥರ್ಿಗಳಿಗೆ ತಿಳಿಸಿದರು.
ವೆಂಕಟಗಿರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ ಮಾತನಾಡಿ, ಕುಷ್ಠರೋಗವು ಮೈಕೋ ಬ್ಯಾಕ್ಟರೀಯಾ ಲೈಪ್ರೈಯ ಎಂಬ ಸೂಕ್ಷ್ಮ ಜೀವಿಯಿಂದ ಬರುತ್ತದೆ. ಮೈಮೇಲೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಚ್ಚೆಗಳು ಇದ್ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಕೈಕೊಂಡು ಖಚಿತಪಟ್ಟರೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಹಾಗೂ ಯಾವುದೇ ರೀತಿಯ ಚರ್ಮ ಖಾಯಿಲೆ ಇದ್ದರೆ ಮುಜುಗರ ಪಡದೆ ವೈದ್ಯರ ಹತ್ತಿರ ಪರೀಕ್ಷಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಷ್ಠರೋಗದ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಪ್ರಾಂಶುಪಾಲರಾದ ಮುತ್ತಣ್ಣ ಅಂಗಡಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು, ಸಹ-ಶಿಕ್ಷಕರಾದ ಮಲ್ಲಿಕಾಜರ್ುನ ಅಮರೇಶ, ಸುಮಿತ್ರಾ, ವಿಜಯಲಕ್ಷ್ಮೀ, ನಿರ್ಮಲಾ, ವಿಶಾಲ ಲಕ್ಷ್ಮೀ, ನಾಗಯ್ಯ, ಹನುಮಪ್ಪ, ಮಂಜುನಾಥ, ನಿಂಗಪ್ಪ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಶಾರದ ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಪರಶುರಾಮ ಕಾರ್ಯಕ್ರಮವನ್ನು ನಿರೂಪಿಸಿದರು.